ದರ್ಶನ್ 'ಬೃಂದಾವನ' ಶೂಟಿಂಗ್ ಡೀಟೇಲ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಬೃಂದಾವನ' ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮೇ ಎರಡನೇ ವಾರದಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಹೈದರಾಬಾದಿನ ಫಿಲಂ ನಗರ್ ನಲ್ಲಿ ಹಾಡಿನ ಚಿತ್ರೀಕರಣದ ಮೂಲಕ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.
ಜೂನಿಯರ್ ಎನ್ಟಿಆರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ 'ಬೃಂದಾವನಂ' ಚಿತ್ರದ ರೀಮೇಕ್ ಇದು. ಕೆ.ಮಾದೇಶ್ ಆಕ್ಷನ್, ಕಟ್ ಹೇಳುತ್ತಿದ್ದು, ಅವರ ಬಹುತೇಕ ರೀಮೇಕ್ ಚಿತ್ರಗಳಲ್ಲಿ ದರ್ಶನ್ ಅಭಿನಯಿಸಿದ್ದಾರೆ.
ಬಿಗ್ ಬಜೆಟ್ ಚಿತ್ರವಾಗಿರುವ 'ಬೃಂದಾವನ' ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. ಕಾರ್ತಿಕಾ ನಾಯರ್ ಹಾಗೂ ಮಿಲನಾ ಚಿತ್ರದ ನಾಯಕಿಯರು.ಪಾತ್ರವರ್ಗದಲ್ಲಿ ಜೈಜಗದೀಶ್, ದೊಡ್ಡಣ್ಣ, ಸಾಧು ಕೋಕಿಲಾ, ಸಂಪತ್, ಕುರಿ ಪ್ರತಾಪ್, ಕೇಡಿ ವೆಂಕಟೇಶ್, ವೀಣಾ ಸುಂದರ್ ಮುಂತಾದ ಕನ್ನಡ ಚಿತ್ರಗಳ ರೆಗ್ಯುಲರ್ ಕಲಾವಿದರಿದ್ದಾರೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಬಳಿಕ ಬಹಳಷ್ಟು ಕುತೂಹಲ ಮೂಡಿಸಿರುವ ಚಿತ್ರ ಇದು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರ ಇನ್ನೇನು ತೆರೆಕಾಣಲು ಸಿದ್ಧವಾಗಿದೆ. ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಭಿನಯಿಸಿರಿವ ಕಾರಣ ಚುನಾವಣೆ ನೀತಿ ಸಂಹಿತೆಗಳು ಚಿತ್ರ ಬಿಡುಗಡೆಗೆ ಅಡ್ಡಿಯಾಗಿವೆ. ಬಹುಶಃ ಚುನಾವಣೆ ಮುಗಿದ ಬಳಿಕ ಚಿತ್ರ ಬಿಡುಗಡೆಯಾಗಬಹುದು. (ಏಜೆನ್ಸೀಸ್)


Click it and Unblock the Notifications












