ದರ್ಶನ್ ಊರು ಮೈಸೂರಿನಲ್ಲಿ 'ಡೆವಿಲ್'ಗೆ ಕಂಟಕ;'ಮಾರ್ಕ್', '45'ಗಾಗಿ 4 ಪ್ರಮುಖ ಚಿತ್ರಮಂದಿರಗಳಿಂದ ಎತ್ತಂಗಡಿ?‌

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಬಿಡುಗಡೆಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ನಾಲ್ಕೈದು ದಿನ ಸಿನಿಮಾದ ಕಲೆಕ್ಷನ್ ಉತ್ತಮವಾಗಿತ್ತು. ಆದರೆ, ಆ ನಂತರದ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಕುಸಿಯುತ್ತಾ ಹೋಯ್ತು. ನಿನ್ನೆ (ಡಿಸೆಂಬರ್ 21) ಭಾನುವಾರ ಆಗಿದ್ದರಿಂದ ಸಿನಿಮಾದ ಕಲೆಕ್ಷನ್ ಮತ್ತೆ ಕೋಟಿ ದಾಟಿದೆ. ಹೀಗಾಗಿ 'ಡೆವಿಲ್' ಟೀಮ್ ಮತ್ತೆ ಉಸಿರಾಡುವಂತಾಗಿದೆ. ಈ ಮಧ್ಯೆ ಇನ್ನು ಕೆಲವೇ ದಿನಗಳಲ್ಲಿ ಕನ್ನಡದ ಎರಡು ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಈ ಸಿನಿಮಾಗಳ ರಿಲೀಸ್ ಎಫೆಕ್ಟ್ 'ಡೆವಿಲ್' ಬೀಳುತ್ತಿದೆ.

'ಮಾರ್ಕ್' ಹಾಗೂ 'ಡೆವಿಲ್' ಎರಡೂ ಸಿನಿಮಾಗಳೂ ಸೂಪರ್‌ಸ್ಟಾರ್‌ಗಳದ್ದೇ ಆಗಿದ್ದರಿಂದ ದೊಡ್ಡ ಪ್ರಮಾಣದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ಎರಡೂ ಸಿನಿಮಾಗಳು ಪೈಪೋಟಿಗೆ ಬಿದ್ದು ಬಿಡುಗಡೆ ಮಾಡುತ್ತಿರೋದ್ರಿಂದ 'ಡೆವಿಲ್'ಸಿನಿಮಾವನ್ನು ಚಿತ್ರಮಂದಿರಗಳಿಂದ ತೆಗೆದು ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅದರಲ್ಲಿ ದರ್ಶನ್ ಸ್ವಂತ ಊರಾದ ಮೈಸೂರಿನಲ್ಲಿಯೇ 'ಡೆವಿಲ್' ಎತ್ತಂಗಡಿಯಾಗುತ್ತಿದೆ ಎನ್ನುವ ಚರ್ಚೆಯಾಗುತ್ತಿದೆ.

Darshan movie Devil removed in his home town Mysore Theaters due to Mark and 45 release

ಮೈಸೂರು, ಮಂಡ್ಯ ಭಾಗಗಲ್ಲಿ ದರ್ಶನ್ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡುತ್ತವೆ. ಅದು ಬಿಟ್ಟರೆ, ಉತ್ತರ ಕರ್ನಾಟಕದ ಭಾಗಗಳಲ್ಲಿ ಸಿನಿಮಾ ಕಲೆಕ್ಷನ್ ಅದ್ಭುತವಾಗಿರುತ್ತೆ. ಆದರೆ, ಮೈಸೂರಿನಲ್ಲಿರುವ ಚಿತ್ರಮಂದಿರಗಳಿಗೆ ದರ್ಶನ್‌ ಸಿನಿಮಾಗಳು ಒಳ್ಳೊಳ್ಳೆ ಕಲೆಕ್ಷನ್ ಮಾಡಿ ಕೊಟ್ಟಿವೆ. ಹೀಗಾಗಿ ಇಲ್ಲಿನ ನಾಲ್ಕು ಪ್ರಮುಖ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಆದ್ರೀಗ ಒಂದೊಂದೇ ಸಿಂಗಲ್‌ಸ್ಕ್ರೀನ್‌ಗಳಲ್ಲಿ ಸಿನಿಮಾ ತೆಗೆದು ಹಾಕುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

ಮೈಸೂರಿನ ಪ್ರಮುಖ ಥಿಯೇಟರ್‌ಗಳಲ್ಲಿ 'ಡೆವಿಲ್'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊರಗೆ ಇದ್ದಿದ್ದರೆ, ಸಿನಿಮಾದ ಕ್ರೇಜ್ ಬೇರೆನೇ ಇರುತ್ತಿತ್ತು. ಆದರೂ, 'ಸಾರಥಿ'ಯನ್ನು ದೃಷ್ಟಿಯಲ್ಲಿ ಇಟ್ಕೊಂಡು 'ಡೆವಿಲ್' ನಿರೀಕ್ಷೆಗೂ ಮೀರಿ ಚಿತ್ರಮಂದಿರಗಳನ್ನು ರಿಲೀಸ್ ಮಾಡಲಾಗಿತ್ತು. ದರ್ಶನ್ ಮೈಸೂರಿನಲವೇ ಆಗಿದ್ದರಿಂದ ಅಲ್ಲಿನ ಸಿಂಗಲ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿತ್ತು. ವುಡ್‌ಲ್ಯಾಂಡ್ಸ್, ಸಂಗಮ್, ಗಾಯತ್ರಿ ಹಾಗೂ ಕನ್ನಡ ಸೆಂಟರ್ ಅಲ್ಲದೇ ಹೋದರೂ ರಾಜ್‌ ಕಮಲ್‌ ಥಿಯೇಟರ್‌ನಲ್ಲೂ ರಿಲೀಸ್ ಮಾಡಲಾಗಿತ್ತು.

ಯಾವ್ಯಾವ ಥಿಯೇಟರ್‌ನಲ್ಲಿ 'ಡೆವಿಲ್' ಔಟ್

ಮೈಸೂರಿನ ಪ್ರಮುಖ ಚಿತ್ರಮಂದಿರ ವುಡ್‌ಲ್ಯಾನ್‌ನಲ್ಲಿ 'ಡೆವಿಲ್' ಪ್ರದರ್ಶನ ಆಗುತ್ತಿತ್ತು. ಅಲ್ಲಿ ಕೇವಲ ಒಂದು ವಾರಕ್ಕೆ ಸಿನಿಮಾವನ್ನು ತೆಗೆದು ಹಾಕಲಾಗಿದೆ ಎನ್ನಲಾಗಿದೆ. ಹಾಗೇ ಇನ್ನೊಂದು ಪ್ರಮುಖ ಚಿತ್ರಮಂದಿರ 'ಸಂಗಮ್'ನಲ್ಲಿಯೂ 'ಡೆವಿಲ್' ರಿಲೀಸ್ ಆಗಿತ್ತು. ಸದ್ಯ ಸಿಕ್ಕಿರೋ ಮಾಹಿತಿ ಪ್ರಕಾರ, ಇಲ್ಲೀ ಎರಡನೇ ವಾರಕ್ಕೆ ಸಿನಿಮಾ ತೆಗೆದು ಹೊಸ ಸಿನಿಮಾಗಳನ್ನು ರಿಲೀಸ್ ಮಾಡುಲಾಗುತ್ತೆಂದು ಹೇಳಲಾಗುತ್ತಿದೆ.

Darshan movie Devil removed in his home town Mysore Theaters due to Mark and 45 release

ಇನ್ನೆರಡು ಚಿತ್ರಮಂದಿರಗಳ ಕಥೆಯೇನು?

ಇನ್ನು ಮೈಸೂರಿನಲ್ಲಿ ಅಪ್ಪಟ ಕನ್ನಡ ಸೆಂಟರ್ ಗಾಯತ್ರಿ ಚಿತ್ರಮಂದಿರದಲ್ಲೂ 'ಡೆವಿಲ್' ಪ್ರದರ್ಶನವಾಗುತ್ತಿದೆ. ಇಲ್ಲೂ ಕೂಡ ಶೋಗಳು ಶೇರ್ ಆಗಬಹುದೆಂದು ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಇನ್ನೊಂದು ರಾಜ್ ಕಮಲ್ ಚಿತ್ರಮಂದಿರ. ಅದು ಕನ್ನಡ ಸೆಂಟರ್ ಅಲ್ಲ. ಹೀಗಿದ್ದರೂ ಚಿತ್ರಮಂದಿರಗಳ ಅಭಾವ ಇರುವುದರಿಂದ ಇದೂ ಕೂಡ ಮುಂದಿನ ವಾರ ನಿರ್ಣಾಯಕವಾಗುತ್ತೆ.

ಮೈಸೂರಿನ ಚಿತ್ರಮಂದಿರಗಳಲ್ಲಿ ಕಲೆಕ್ಷನ್

ಈ ಹಿಂದೆ ಮೈಸೂರಿನ ಈ ಎಲ್ಲಾ ಚಿತ್ರಮಂದಿರಗಳಲ್ಲಿ ದರ್ಶನ್ ಸಿನಿಮಾಗಳು ರಿಲೀಸ್ ಆಗಿವೆ. ಕೆಲವು ಸಿನಿಮಾಗಳು ಇಲ್ಲಿನ ಒಂದೊಂದು ಚಿತ್ರಮಂದಿರದಲ್ಲಿಯೂ ₹60 ರಿಂದ ₹80 ಲಕ್ಷದಷ್ಟು ಕೇವಲ ಶೇರುಗಳೇ ಬಂದಿವೆ. ಹೀಗಾಗಿ ಮೈಸೂರಿ ಪ್ರತಿಯೊಂದು ಸಿನಿಮಾಗೂ ನಿರ್ಣಾಯಕ. ಈಗ 'ಮಾರ್ಕ್' ಹಾಗೂ '45' ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ 'ಡೆವಿಲ್' ಚಿತ್ರಮಂದಿರಗಳಲ್ಲಿ ಉಳಿದುಕೊಳ್ಳುತ್ತಾ? ಇಲ್ವಾ? ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

More from Filmibeat

English summary
Darshan movie Devil removed in his home town Mysore Theaters due to Mark and 45 release.
Read more about: darshan kannada movie theaters
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X