Don't Miss!
- News
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ರಾಜೀನಾಮೆ ಸಂತಸ ತಂದಿಲ್ಲ: ಬಂಡಾಯ ಶಾಸಕರು
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಕರ್ಕ, ಕುಂಭ, ಮೀನ ರಾಶಿಯ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ
- Sports
IND vs ENG: ಮೊದಲ ಟಿ20 ಕಳೆದುಕೊಳ್ಳಲಿದ್ದಾರೆ ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ; ಕಾರಣ?
- Education
CBSE Result 2022 : 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ ಯಾವಾಗ ?
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
'ದರ್ಶನ್ ಸಿನಿಮಾ 1500 ಕೋಟಿ ಮಾಡುತ್ತೆ ಬರೆದಿಟ್ಟುಕೊಳ್ಳಿ' ರಾಜೇಂದ್ರ ಸಿಂಗ್ ಬಾಬು!
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಅಭಿಮಾನಿಗಳ ಬಗ್ಗೆ ಮಾತಾಡೋ ಹಾಗೇ ಇಲ್ಲ. ದರ್ಶನ್ ಒಂದೇ ಒಂದು ಫೋಟೊ, ವಿಡಿಯೋ ಸಿಕ್ಕರೇ ಸಾಕು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ ಬಿಡುತ್ತಾರೆ. ಇನ್ನು ಸಿನಿಮಾ ಅಂದರೆ ಕೇಳಬೇಕಾ? ಥಿಯೇಟರ್ ಮುಂದೆ ಅಭಿಮಾನಿಗಳ ಆರ್ಭಟ ಕೇಳಲೇ ಬೇಕಿಲ್ಲ.
ಬಾಕ್ಸಾಫೀಸ್‌ನಲ್ಲೂ ಅಷ್ಟೇ ದರ್ಶನ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿವೆ. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅಭಿನಯಿಸಿದ ಎರಡು ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರಿದ್ದು, 'ಕ್ರಾಂತಿ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಾ? ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ.
Megha
Shetty:
ದರ್ಶನ್
ಜೊತೆ
ಸಿನಿಮಾ
ಮಾಡ್ತಾರಾ
ಜೊತೆ
ಜೊತೆಯಲಿ
ಮೇಘಾ
ಶೆಟ್ಟಿ..?

ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ನಿರಂತರವಾಗಿ ಶೂಟಿಂಗ್ ನಡೆಯುತ್ತಿದೆ. ವಿ ಹರಿಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮಧ್ಯೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೊಟ್ಟ ಹೇಳಿಕೆಯೊಂದು ಬೇಜಾನ್ ಸದ್ದು ಮಾಡುತ್ತಿದೆ.
ಶಾಲಾ
ಮಕ್ಕಳಿಗೆ
ಶೌಚಾಲಯ,
ಯುಪಿಎಸ್,
ಕಂಪ್ಯೂಟರ್
ನೀಡಿ
ಸಹಾಯ
ಮಾಡಿದ
ದರ್ಶನ್!

₹1500 ಕೋಟಿ ಗಳಿಸುತ್ತೆ ದರ್ಶನ್ ಸಿನಿಮಾ
ಹಿರಿಯರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ದರ್ಶನ್‌ಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರ ಕಂಬಳ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ದರ್ಶನ್ ಸಿನಿಮಾ ಬಗ್ಗೆ ಮಾತಾಡಿದ್ದಾರೆ. 'ವೀರ ಕಂಬಳ' ಸಿನಿಮಾದ ನಿರ್ಮಾಪಕ ಜೊತೆಗೂ ದರ್ಶನ್‌ಗೊಂದು ಸಿನಿಮಾ ಮಾಡುತ್ತೇವೆ. ಅದು ₹1500 ಕೋಟಿ ಗಳಿಕೆ ಮಾಡುತ್ತೆ ಎಂದು ಹೇಳಿದ್ದಾರೆ.

ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
"ವೀರ ಕಂಬಳ ಸಿನಿಮಾ ನಿರ್ಮಾಪಕ ಅರುಣ್ ರೈ ತೋಡಾರ್ ಇನ್ನೂ ಒಳ್ಳೊಳ್ಳೆ ಸಿನಿಮಾ ಮಾಡಬೇಕು ಅಂತಿದ್ದಾರೆ. ನಾನು ಮತ್ತು ಅವರು ಸೇರಿಕೊಂಡು ದರ್ಶನ್ ಜೊತೆಗೂಡಿ ಒಂದು ಸಿನಿಮಾ ಮಾಡಬೇಕು ಅಂತ ಇದ್ದೇವೆ. ಅದು ಸುಮಾರು ₹1500 ಕೋಟಿ ಮಾಡುತ್ತೆ ಬರೆದಿಟ್ಟುಕೊಳ್ಳಿ. ನಾನು ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ." ಎಂದು ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.

ದರ್ಶನ್‌ಗೆ ರಾಜೇಂದ್ರ ಸಿಂಗ್ ಬಾಬು ಕಥೆ
ದರ್ಶನ್ ಸಿನಿಮಾ ₹1500 ಕೋಟಿ ಗಳಿಸುತ್ತೆ ಎಂದು ಹೇಳಿರುವ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಈಗಾಗಲೇ ಕಥೆಯನ್ನೂ ಹೇಳಿದ್ದಾರಂತೆ. " ಆ ಸಿನಿಮಾವನ್ನು ಚೈನಾದಲ್ಲಿ ರಿಲೀಸ್ ಮಾಡುತ್ತೇವೆ. ಅಮೆರಿಕದಲ್ಲಿ ರಿಲೀಸ್ ಮಾಡುತ್ತೇವೆ. ಆಲ್ ಓವರ್ ಇಂಡಿಯಾ ರಿಲೀಸ್ ಮಾಡುತ್ತೇವೆ. ಯಾಕೆಂದರೆ, ದರ್ಶನ್‌ಗೆ ಆ ಒಂದು ಕ್ಯಾಪಾಸಿಟಿ ಇದೆ. ಆ ತರಹದ್ದೊಂದು ಕಥೆಯಿದೆ. ಈಗಾಗಲೇ ಅವರಿಗೆ ಹೇಳಿದ್ದೇನೆ. ಅವರು ಯಾವಾಗ ಡೇಟ್ ಕೊಡುತ್ತಾರೆ. ಅಂದು ಸಿನಿಮಾ ಮಾಡಿ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ರಿಲೀಸ್ ಮಾಡುತ್ತೇವೆ." ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

'ಕೆಜಿಎಫ್ 2' ಹೊಗಳಿದ ನಿರ್ದೇಶಕ
'ವೀರ ಕಂಬಳ' ಸಿನಿಮಾದ ಬಗ್ಗೆ ಮಾಹಿತಿ ನೀಡುವಾಗಲೇ ರಾಜೇಂದ್ರ ಸಿಂಗ್ ಬಾಬು 'ಕೆಜಿಎಫ್ 2' ಸಾಧನೆಯನ್ನು ಹೊಗಳಿದ್ದಾರೆ. 'ಕೆಜಿಎಫ್ 2' ಮಾಡಿದ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದೇ ವೇಳೆ 'ವೀರ ಕಂಬಳ' ಕೂಡ ತುಳು ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.