ಶ್ರೀರಂಗಪಟ್ಟಣದಲ್ಲಿ ದರ್ಶನ್ ಕಾರುಬಾರು: ಗೆಳೆಯ ಸಚ್ಚಿದಾನಂದ ಪರ ದರ್ಶನ್ ಪ್ರಚಾರ ಜೋರು

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಕಣ ನಿಧಾನವಾಗಿ ರಂಗೇರುತ್ತಿದೆ. ಕಳೆದ ಕೆಲ ದಿನಗಳಿಂದ ಟಿಕೆಟ್ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಓಡಾಡುತ್ತಿದ್ದರು. ಟಿಕೆಟ್ ಕನ್ಫರ್ಮ್ ಆಗುತ್ತಿದ್ದಂತೆ ನಾಮಪತ್ರ ಸಲ್ಲಿಸುವ ಕೆಲಸ ಆರಂಭವಾಗಿದೆ. ಶ್ರೀರಂಗಪಟ್ಟಣದ ಬಿಜೆಪಿ ಅಭ್ಯರ್ಥಿಯಾಗಿ ನಟ ದರ್ಶನ್ ಆಪ್ತ ಎಸ್. ಸಚ್ಚಿದಾನಂದ ಕಣಕ್ಕಿಳಿದಿದ್ದಾರೆ. ನಿನ್ನೆ(ಏಪ್ರಿಲ್ 17) ಸಚ್ಚಿದಾನಂದ ನಾಮಪತ್ರ ಸಲ್ಲಿಸಿದರು.

ಶ್ರೀರಂಗಪಟ್ಟಣ ವಿಧಾಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಸ್. ಸಚ್ಚಿದಾನಂದ ಸ್ಪರ್ಧಿಸಿದ್ದು ನಟ ದರ್ಶನ್, ಸಂಸದೆ ಸುಮಲತಾ ಅಂಬರೀಶ್ ಬೆಂಬಲ ಸಿಕ್ಕಿದೆ. ಸಚ್ಚಿದಾನಂದ ಅವರು ನಾಮಪತ್ರ ಸಲ್ಲಿಸುವ ವೇಳೆ ಸಂಸದೆ ಸುಮಲತಾ ಸಾಥ್‌ ನೀಡಿದರು. ನಟ ದರ್ಶನ್‌ ಕೂಡ ರ್ಯಾಲಿಯಲ್ಲಿ ಭಾಗವಹಿಸಿ ಗೆಳೆಯನ ಪರ ಮತ ಯಾಚಿಸಿದರು. ಹುಟ್ಟುಹಬ್ಬದ ದಿನವೇ ಸಚ್ಚಿದಾನಂದ ಅವರು ನಾಮಪತ್ರ ಸಲ್ಲಿಸಿದ್ದು ವಿಶೇಷ. ಗೆಳೆಯನಿಗೆ ಶುಭಾಶಯ ಕೋರಿದ ದರ್ಶನ್, "ಮೇ 10ರಂದು ಮತ ಚಲಾಯಿಸಿ ಅವರಿಗೆ ಗೆಲುವಿನ ಉಡುಗೊರೆ ನೀಡಿ" ಎಂದು ಜನರಲ್ಲಿ ಮನವಿ ಮಾಡಿದರು.

Actor Darshan And MP Sumalatha Ambareesh begins Poll campaign in Favour of Srirangapatna BJP candidate Sacchidananda S

ಸ್ಟೈಲಿಶ್ ಲುಕ್‌ನಲ್ಲಿ ದರ್ಶನ ಕೊಟ್ಟ ಚಾಲೆಂಜಿಂಗ್ ಸ್ಟಾರ್‌ನ ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ರ್ಯಾಲಿ ಉದ್ದಕ್ಕೂ ಅಭಿಮಾನಿಗಳಿಂದ ರಸ್ತೆಗಳು ತುಂಬಿ ತುಳುಕುತ್ತಿತ್ತು. ಸಂಸದೆ ಸುಮಲತಾ ಕೂಡ ರ್ಯಾಲಿಯಲ್ಲಿ ಭಾಗವಹಿಸಿ ಸಚ್ಚಿದಾನಂದ ಪದ ಮತ ಯಾಚಿಸಿದರು. ಈ ರ್ಯಾಲಿಯ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ದೊಡ್ಡ ರ್ಯಾಲಿಯಲ್ಲಿ ಶ್ರೀರಂಗಪಟ್ಟಣದ ತಾಲ್ಲೂಕು ಕಛೇರಿಗೆ ಬಂದು ಸಚ್ಚಿದಾನಂದ ನಾಮಪತ್ರ ಸಲ್ಲಿಸಿದರು.

ತೆರೆದ ವಾಹನದಲ್ಲಿ ರ್ಯಾಲಿಯಲ್ಲಿದ ದರ್ಶನ್ ಭಾಗವಹಿಸಿದ್ದರು. ಸಂಸದೆ ಸುಮಲತಾ ಅಂಬರೀಶ್ ಬರುತ್ತಿದ್ದಂತೆ ವಾಹನ ನಿಲ್ಲಿಸುವಂತೆ ಹೇಳಿ, ಸುಮಲತಾ ಅವರು ವಾಹನ ಏರಲು ದರ್ಶನ್ ಸಹಾಯ ಮಾಡಿದರು. ರ್ಯಾಲಿ ವೇಳೆ ಅಭಿಮಾನಿಗಳು ದೊಡ್ಡ ದೊಡ್ಡ ಹೂವಿನ ಹಾರಗಳನ್ನು ತಂದು ನೆಚ್ಚಿನ ನಟನಿಗೆ ಹಾಕಿ ಸಂಭ್ರಮಿಸಿದರು. ದರ್ಶನ್ ಮಾತುಗಳಿಗೆ ಜೈಕಾರ ಹಾಕಿ ಖುಷಿಪಟ್ಟರು. ದಾರಿ ಉದ್ದಕ್ಕೂ ಬಿಜೆಪಿ ಬಾವುಟಗಳು, ದರ್ಶನ್ ಭಾವಚಿತ್ರಗಳು ರಾರಾಜಿಸುತ್ತಿದ್ದವು.

Actor Darshan And MP Sumalatha Ambareesh begins Poll campaign in Favour of Srirangapatna BJP candidate Sacchidananda S

ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ "ಶ್ರೀರಂಗಪಟ್ಟಣದ ಸ್ವಾಭಿಮಾನಿ ಜನತೆಗೆ ನಮಸ್ಕಾರಗಳು. ನೀವೆಲ್ಲರೂ ಸದಾ ಅಂಬರೀಶ್ ಅವರನ್ನು ನಂತರ ನನ್ನನ್ನು ಕಳೆದ ಬಾರಿ ಚುನಾವಣೆಯಲ್ಲಿ ಪ್ರೀತಿಯಿಂದ ಸ್ವಾಭಿಮಾನದಿಂದ ಆಶೀರ್ವಾದ ಮಾಡಿದ್ದೀರ. ಇದನ್ನು ಮರೆಯೋಕೆ ಸಾಧ್ಯವಿಲ್ಲ. ಇವತ್ತಿನ ದಿನ ನಮ್ಮ ಮಂಡ್ಯ ಜಿಲ್ಲೆಗೆ ನಮ್ಮ ಶ್ರೀರಂಗಪಟ್ಟದ ತಾಲೂಕಿಗೆ ಹೊಸ ಪರ್ವ, ಅಭಿವೃದ್ಧಿಯ ಪರ್ವ ಬಿಜೆಪಿ ಪರ್ವ ಪ್ರಾರಂಭ ಆಗುತ್ತಿದೆ. ನೀವೆಲ್ಲರು ಸಚ್ಚಿದಾನಂದ ಅವರಿಗೆ ಆಶಿರ್ವಾದ ಮಾಡಬೇಕು. ದರ್ಶನ್ ಬಂದಿದ್ದಾರೆ. ಕುಟುಂಬ ರಾಜಕಾರಣ ಅಲ್ಲ, ನಮ್ಮ ಕುಟುಂಬದ ಹಾಗೆ ಭಾವಿಸಿ ಮಾಡುತ್ತಿರುವ ಮನವಿ ಇದು"

"ಇದು ಕುಟುಂಬ ರಾಜಕಾರಣಕ್ಕೆ ವಿರುದ್ಧವಾಗಿ ಮಾಡುತ್ತಿರುವ ಮನವಿ. ಬೇರೆ ಬೇರೆ ಪಕ್ಷಗಳಿಗೆ ಅವಕಾಶ ಮಾಡಿಕೊಟ್ಟಿದ್ದೀರಾ. ಆ ದುರಾಡಳಿತ ಯಾವ ರೀತಿ ಇತ್ತು ಅನ್ನೋದನ್ನು ನೋಡಿಕೊಂಡು ಬಂದಿದ್ದೀರ. ಆ ದುರಂಕಾರವನ್ನು ಮುಗಿಸಿ ನೋವು ಸಚ್ಚಿದಾನಂದ ಅವರಿಗೆ ಆಶೀರ್ವಾದ ಮಾಡಬೇಕು ಎನ್ನುವುದು ನನ್ನ ಮನವಿ"

Actor Darshan And MP Sumalatha Ambareesh begins Poll campaign in Favour of Srirangapatna BJP candidate Sacchidananda S

"ಬಿಜೆಪಿ ಪಕ್ಷ ಇದ್ದರೆ ನಮ್ಮ ತಾಲೂಕು, ನಮ್ಮ ಜಿಲ್ಲೆ ಅಭಿವೃದ್ಧಿ ಆಗುತ್ತದೆ. ಪ್ರಧಾನಿ ನರೇಂದ್ರ ನೋಡಿಯವರ ಮಾರ್ಗದರ್ಶನದಲ್ಲಿ ಒಳ್ಳೆ ಕೆಲಸಗಳು ಆಗುತ್ತದೆ. ಈ ಅವಕಾಶವನ್ನು ನಾವು ಸದ್ಬಳಕೆ ಮಾಡಿಕೊಳ್ಳುವಂತಹ ಸುವರ್ಣಾವಕಾಶ ನಮ್ಮಲ್ಲಿ ಇದೆ. ಈ ಅವಕಾಶ ಯಾರು ಕಳೆದುಕೊಳ್ಳಬೇಡಿ, ಬಿಜೆಪಿಗೆ ನಿಮ್ಮ ಮತಹಾಕಿ" ಎಂದರು. ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರದಲ್ಲಿ ಸದ್ಯ ನಟ ದರ್ಶನ್ ನಟಿಸುತ್ತಿದ್ದಾರೆ. ಇತ್ತೀಚೆಗೆ ನಂಜನಗೂಡಿನ ತುಂಬನೇರಳೆ ಹಳ್ಳಿಯೊಂದು ಶೆಡ್ಯೂಲ್ ಮುಕ್ತಾಯವಾಗಿದೆ.

More from Filmibeat

English summary
Actor Darshan And MP Sumalatha Ambareesh begins Poll campaign in Favour of Srirangapatna BJP candidate Sacchidananda S. Darshan Fans and BJP supporters attending the nomination rally of Sachhidananda. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X