'ನವಗ್ರಹ' ಸೀಕ್ವೆಲ್: 12 ವರ್ಷದ ಡಿ ಬಾಸ್ ಅಭಿಮಾನಿಗಳ ಆಸೆ ಈಡೇರುತ್ತಾ?
ಪ್ರತಿ ವರ್ಷದ ದಸರಾ ಹಬ್ಬದ ಸಮಯದಲ್ಲಿ ಟಿವಿಯಲ್ಲಿ ಪ್ರಸಾರವಾಗುವ ಸಿನಿಮಾ ನವಗ್ರಹ. ವಿಶ್ವ ವಿಖ್ಯಾತ ಅಂಬಾರಿಯನ್ನು ಕಳ್ಳತನ ಮಾಡುವ ಖತರ್‌ನಾಕ್ ಖಳನಾಯಕರ ಥ್ರಿಲ್ಲಿಂಗ್ ಚಿತ್ರ. ಎಷ್ಟು ಸರಿ ನೋಡಿದ್ರು ಬೋರ್ ಆಗದ ಚಿತ್ರಗಳಲ್ಲಿ ನವಗ್ರಹ ಸಹ ಒಂದು.
ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ಮಕ್ಕಳು ಒಟ್ಟಿಗೆ ನಟಿಸಿದ್ದ ಮೊಟ್ಟ ಮೊದಲ ಚಿತ್ರ. ದರ್ಶನ್ ಸಹೋದರ ದಿನಕರ್ ತೂಗುದೀಪ್ ನಿರ್ದೇಶನ ಮಾಡಿದ್ದ ಈ ಚಿತ್ರ ಬಿಡುಗಡೆಯಾಗಿ 12 ವರ್ಷ ಆಗಿದೆ. 2008ರ ನವೆಂಬರ್ 7 ರಂದು ರಿಲೀಸ್ ಆಗಿದ್ದ ಚಿತ್ರ ಅಂದಿನ ಸಮಯಕ್ಕೆ ಬಹಳ ವಿಶೇಷವಾಗಿತ್ತು.
ಸ್ಯಾಂಡಲ್‌ನಲ್ಲಿ ಸಖತ್ ಸದ್ದು ಮಾಡಿದ್ದ ನವಗ್ರಹ ಸಿನಿಮಾದ ಸೀಕ್ವೆಲ್ ಕುರಿತು ಬಹಳ ವರ್ಷದಿಂದಲೂ ಚರ್ಚೆಯಾಗುತ್ತಲೆ. ಈ ಕುರಿತು ದಿನಕರ್ ಸಹ ಸುಳಿವು ನೀಡಿದ್ದರು. 12 ವರ್ಷದ ನಂತರವೂ ಇಂತಹದೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಲೇ ಇದೆ. ಅಷ್ಟಕ್ಕೂ, ನವಗ್ರಹ ಸೀಕ್ವೆಲ್ ಬರುತ್ತಾ?

ನವಗ್ರಹ ಸೀಕ್ವೆಲ್?
ನವಗ್ರಹ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಜಗ್ಗು (ದರ್ಶನ್) sಬೆಟ್ಟದಿಂದ ಬಿದ್ದು ಹೋಗ್ತಾನೆ. ಅಲ್ಲಿಗೆ ಸಿನಿಮಾ ಮುಗಿಯುತ್ತದೆ. ಜಗ್ಗು ಸತ್ತೇ ಹೋದ ಎಂದು ಎಲ್ಲರು ತಿಳಿಯುತ್ತಾರೆ. ಆದ್ರೆ, ಜಗ್ಗು ಮತ್ತೆ ಕಣ್ಣು ಬಿಡುವ ದೃಶ್ಯ ತೋರಿಸುವ ಡೈರೆಕ್ಟರ್ ಪರೋಕ್ಷವಾಗಿ ನವಗ್ರಹ ಸಿಕ್ವೇಲ್ ಕುರಿತು ಸುಳಿವು ಕೊಡ್ತಾರೆ. ಹಾಗಾಗಿ, ನವಗ್ರಹ ಸೀಕ್ವೆಲ್ ಬರಬಹುದು ಎಂಬ ನಿರೀಕ್ಷೆಯಲ್ಲಿ ಡಿ ಬಾಸ್ ಅಭಿಮಾನಿಗಳು 12 ವರ್ಷದಿಂದ ಕಾಯ್ತಿದ್ದಾರೆ.

ಖ್ಯಾತ ಖಳನಾಯಕರು ಮಕ್ಕಳು
ತೂಗುದೀಪ ಶ್ರೀನಿವಾಸ್ (ದರ್ಶನ್), ಸುಧೀರ್ (ತರುಣ್ ಸುಧೀರ್), ದಿನೇಶ್ (ಗಿರಿ ದಿನೇಶ್), ಕೀರ್ತಿ ರಾಜ್ (ಧರ್ಮ ಕೀರ್ತಿ ರಾಜ್), ಟೈಗರ್ ಪ್ರಭಾಕರ್ (ವಿನೋದ್ ಪ್ರಭಾಕರ್), ಲೋಕೇಶ್ (ಸೃಜನ್ ಲೋಕೇಶ್), ಸುಂದರ್ ಕೃಷ್ಣ ಅರಸ್ (ನಾಗೇಂದ್ರ ಅರಸ್) ಅಂತಹ ದಿಗ್ಗಜ ಖಳನಾಯಕರ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ, ಖಳನಾಯಕ ಮಕ್ಕಳ ಸಿನಿಮಾ ಎಂಬ ಕಾರಣಕ್ಕೆ ಬಹಳ ವಿಶೇಷ ಮತ್ತು ಅಪರೂಪದ ಸಿನಿಮಾ ಎನಿಸಿಕೊಂಡಿತ್ತು.

ಏನಾಯ್ತು ಸರ್ವಾಂತರ್ಯಾಮಿ?
ನವಗ್ರಹ ಸಿನಿಮಾ ಬಳಿಕ ದರ್ಶನ್ ಮತ್ತು ದಿನಕರ್ ಕಾಂಬಿನೇಷನ್‌ನಲ್ಲಿ ಸರ್ವಾಂತರ್ಯಾಮಿ ಎಂಬ ಸಿನಿಮಾ ಬರುತ್ತೆ ಎಂದು ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಬಹುಶಃ ಈ ಚಿತ್ರ ನವಗ್ರಹದ ಸೀಕ್ವೆಲ್ ಎಂದು ಸಹ ಅನೇಕರು ಮಾತನಾಡಿಕೊಂಡಿದ್ದರು. ಆದ್ರೆ, ಈವರೆಗೂ ಈ ಚಿತ್ರ ಸೆಟ್ಟೇರಲೇ ಇಲ್ಲ. ಈ ಚಿತ್ರದ ಮೇಲಿನ ಕುತೂಹಲವೂ ಕಮ್ಮಿಯಾಗಿಲ್ಲ.
Recommended Video

ನವಗ್ರಹ ಮತ್ತೆ ಬಂದ್ರೆ....?
ನವಗ್ರಹ ಸಿನಿಮಾವನ್ನು ಟಿವಿಯಲ್ಲಿ ನೋಡಿದಾಗೆಲ್ಲ ಸೀಕ್ವೆಲ್ ಕುರಿತು ಆಸೆ ಹೆಚ್ಚಾಗುತ್ತಿದೆ. 12 ವರ್ಷ ಕಳೆದರೂ ಸೀಕ್ವೆಲ್ ಬಗ್ಗೆ ನಿರೀಕ್ಷೆ ಮಾತ್ರ ಹಾಗೆ ಉಳಿದಿದೆ. ಬಹುಶಃ ಈ ಚಿತ್ರದ ಮುಂದುವರಿದ ಭಾಗ ಮಾಡಿದ್ರೆ ಖಂಡಿತವಾಗಲೂ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಬಹುದು. ಆದ್ರೆ, ಅಭಿಮಾನಿಗಳ ಈ ಆಸೆ ಬರಿ ಆಸೆಯಾಗಿಯೇ ಉಳಿಯುತ್ತಾ ಅಥವಾ ಕಾರ್ಯರೂಪಕ್ಕೆ ಬರುತ್ತಾ ಕಾದುನೋಡಬೇಕಿದೆ.


Click it and Unblock the Notifications











