ದರ್ಶನ್ ಹೇರ್‌ ಸ್ಟೈಲ್‌ ಕಂಡು ಟ್ರೋಲ್ ಮಾಡಿದವರು ಈಗ ಸೂಪರ್ ಅಂದಿದ್ಯಾಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೋಲೆಂಡ್‌ನಲ್ಲಿ 'ಕ್ರಾಂತಿ' ಸಿನಿಮಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇದೀಗ ಹೊಸ ಹೇರ್ ಸ್ಟೈಲ್ನಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಆ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶೇರ್ ಮಾಡಿ ಖುಷಿ ಪಡ್ತಿದ್ದಾರೆ.

ಕೆಲ ದಿನಗಳ ಹಿಂದೆ ಪೋಲೆಂಡ್‌ನಿಂದ ದರ್ಶನ್ ಒಂದು ಫೋಟೊ ಶೇರ್ ಮಾಡಿ ಟ್ವೀಟ್ ಮಾಡಿದ್ದರು. ಆ ಫೋಟೊದಲ್ಲಿ ದರ್ಶನ್ ಹೇರ್ ಸ್ಟೈಲ್ ಟ್ರೋಲ್ ಆಗಿತ್ತು. ಕೆಲವರು ಮನ ಬಂದಂತೆ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಬಿಟ್ಟಿ ಸಲಹೆಗಳನ್ನು ಕೊಟ್ಟಿದ್ದರು. ಆದರೆ ಅಭಿಮಾನಿಗಳು ಪ್ರೀತಿಯಿಂದ ಮನವಿ ಮಾಡಿಕೊಂಡಿದ್ದರು. ಆದರೆ ಈ ಹೊಸ ಸ್ಟೈಲ್ ಎಲ್ಲಾ ಕಾಮೆಂಟ್‌ಗಳಿಗೆ ತಿರುಗೇಟು ಕೊಟ್ಟಂತಿದೆ.

ದರ್ಶನ್ ಟ್ವೀಟ್‌ಗೆ ಸಾವಿರಾರು ಕಾಮೆಂಟ್‌ಗಳು ಬಂದಿತ್ತು. ಒಂದಷ್ಟು ಅಭಿಮಾನಿಗಳು ತಮ್ಮ ಕಾಮೆಂಟ್ ಮೂಲಕ ನೆಚ್ಚಿನ ನಟನ ಮೇಲಿನ ಪ್ರೀತಿ ವ್ಯಕ್ತಪಡಿಸಿದರೆ, ಕೆಲವರು ದರ್ಶನ್ ಲುಕ್ಕು, ಹೇರ್ ಸ್ಟೈಲ್ ಬಗ್ಗೆ ವಿಮರ್ಶೆ ಮಾಡಿದ್ದರು. ಇದೀಗ ವಿದೇಶದಿಂದ ತಾಯ್ನಾಡಿಗೆ ಮರಳಿ ಬಂದಿರೋ ದರ್ಶನ್ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಅದೇ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೊ ವೈರಲ್ ಆಗಿದೆ. ಅದರಲ್ಲಿ ದರ್ಶನ್ ಟ್ರೆಂಡಿ ಹೇರ್ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಭಿಮಾನಿಗಳಿಂದ 'ಕ್ರಾಂತಿ' ಸಿನಿಮಾ ಆಫ್ ಲೈನ್ ಪ್ರಮೋಷನ್ ಜೋರಾಗಿದೆ. ಆನ್ ಲೈನ್ ಪ್ರಮೋಷನ್ ಅದಕ್ಕಿಂತಲೂ ದುಪ್ಪಟ್ಟಾಗಿದೆ. ಪ್ರಮೋಷನ್ ಭಾಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿರೋ ಡಿ ಹಾರ್ಟ್ಸ್, ಈಗ ದರ್ಶನ್ ಹೊಸ ಹೇರ್ ಸ್ಟೈಲನ್ನು ಟ್ರೆಂಡ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ.

 ಟ್ರೆಂಡಿ ಹೇರ್ ಸ್ಟೈಲ್‌ಗಳಲ್ಲಿ ದರ್ಶನ್

ಟ್ರೆಂಡಿ ಹೇರ್ ಸ್ಟೈಲ್‌ಗಳಲ್ಲಿ ದರ್ಶನ್

ನಟ ದರ್ಶನ್ ತಮ್ಮ ಸಿನಿಮಾಗಳಲ್ಲಿ ವಿಭಿನ್ನ ಹೇರ್‌ಸ್ಟೈಲ್‌ಗಳಿಂದ ಗಮನ ಸೆಳೀತಾ ಬರ್ತಿದ್ದಾರೆ. ಆರಂಭದ ದಿನಗಳಲ್ಲಿ ದರ್ಶನ್ ಮಾಮೂಲಿ ಹೇರ್‌ ಸ್ಟೈಲ್‌ನಲ್ಲೇ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದರು. ಬಳಿಕ ನಿಧಾನಕ್ಕೆ ಪಾತ್ರಗಳಿಗೆ ತಕ್ಕಂತೆ ಹೇರ್ ಸ್ಟೈಲ್ ಚೇಂಜ್ ಮಾಡೋಕೆ ಪ್ರಾರಂಭಿಸಿದರು. 'ಗಜ', 'ಅಭಯ್', 'ಪೋಕಿರಿ' ಸಿನಿಮಾಗಳಲ್ಲಿ ಉದ್ದನೆಯ ಕೂದಲು ಬಿಟ್ಟು ಮಿಂಚಿದ್ದರು. ಆ ಹೇರ್ ಸ್ಟೈಲ್ ಹೊಸ ಟ್ರೆಂಡ್ ಹುಟ್ಟಾಕ್ಕಿತ್ತು. ಸ್ಟೈಲಿಶ್ ಲುಕ್ ನಲ್ಲಿ ಡಿ ಬಾಸ್ ನೋಡಿದ ಅಭಿಮಾನಿಗಳು ಉದ್ದ ಕೂದಲಿನ ಸ್ಟೈಲ್ ಅನ್ನೇ ಫಾಲೋ ಮಾಡಿದ್ದರು.

 ಕೆಂಚು ಕಲರ್ ಹಾಕ್ಕೊಂಡಿದ್ದ 'ಚಕ್ರವರ್ತಿ'

ಕೆಂಚು ಕಲರ್ ಹಾಕ್ಕೊಂಡಿದ್ದ 'ಚಕ್ರವರ್ತಿ'

ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಸಿನಿಕರಿಯರ್‌ನಲ್ಲಿ ಮೈಲಿಗಲ್ಲಾದ ಮತ್ತೊಂದು ಸಿನಿಮಾ ಚಕ್ರವರ್ತಿ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸೌಂಡ್ ಮಾಡದೇ ಇದ್ದರೂ, ದರ್ಶನ್ ಲುಕ್, ಸ್ಟೈಲ್, ಸಾಂಗ್ಸ್, ಡೈಲಾಗ್ಸ್ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಚಿತ್ರದಲ್ಲಿ 2 ಶೇಡ್‌ಗಳಿರೋ ಪಾತ್ರದಲ್ಲಿ ದರ್ಶನ್ ಗಮನ ಸೆಳೆದಿದ್ದರು. ಒಂದರಲ್ಲಿ ಬೆಲ್ ಬಾಟಮ್ ಪ್ಯಾಂಟ್, ದೊಡ್ಡ ಕಾಲರಿನ ಶರ್ಟು ಮತ್ತು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕಾಣಿಸಿಕೊಂಡಿದ್ದರೆ, ಸೆಕೆಂಡ ಹಾಫ್‌ನಲ್ಲಿ ಸೂಟು ಬೂಟು ತೊಟ್ಟು ಹೇರ್ ಕಲರ್ ಮಾಡಿಸಿಕೊಂಡು ಇಂಟರ್ ನ್ಯಾಷನಲ್ ಡಾನ್ ಅವತಾರದಲ್ಲಿ ಮಿಂಚಿದ್ದರು.

 'ತಾರಕ್' ಹೇರ್ ಸ್ಟೈಲ್ ವೈರಲ್

'ತಾರಕ್' ಹೇರ್ ಸ್ಟೈಲ್ ವೈರಲ್

ಪ್ರಕಾಶ್ ನಿರ್ದೇಶನದ 'ತಾರಕ್' ಸಿನಿಮಾದಲ್ಲಿ ಅಮೆರಿಕನ್ ರಗ್ಬಿ ಆಟಗಾರನಾಗಿ ಮಿಂಚಿದ್ದ ದರ್ಶನ್ ಶಾರ್ಟ್ ಹೇರ್ ಸ್ಟೈಲ್‌ನಲ್ಲಿ ದರ್ಶನ ಕೊಟ್ಟಿದ್ದರು. ಆ ಹೇರ್ ಸ್ಟೈಲ್ ಕೂಡ ಅಭಿಮಾನಿಗಳ ಮನ ಗೆದ್ದಿತ್ತು. ಇಡೀ ಸಿನಿಮಾ ಅದೇ ಲುಕ್ ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಸೇರಿಸಿ ಕಟ್ಟಿಕೊಟ್ಟಿದ್ದ ಈ ಫ್ಯಾಮಿಲಿ ಎಂಟರ್ ಟ್ರೈನರ್ ಸಿನಿಮಾ ಸೂಪರ್ ಹಿಟ್ ಲಿಸ್ಟ್‌ ಸೇರಿಕೊಂಡಿತ್ತು. 'ತಾರಕ್' ಸಿನಿಮಾ ಚಾಲೆಂಜಿಂಗ್ ಸ್ಟಾರ್‌ಗೆ ಬೇರೆಯದ್ದೇ ಇಮೇಜ್ ತಂದುಕೊಡ್ತು.

 ಮೆಸ್ಮರೈಸ್ ಮಾಡಿತ್ತು 'ರಾಬರ್ಟ್' ಲುಕ್ಕು

ಮೆಸ್ಮರೈಸ್ ಮಾಡಿತ್ತು 'ರಾಬರ್ಟ್' ಲುಕ್ಕು

ಕಳೆದ ವರ್ಷ ರಿಲೀಸ್ ಆದ 'ರಾಬರ್ಟ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಚಿತ್ರದಲ್ಲೂ ರಾಬರ್ಟ್ ಮತ್ತು ರಾಘವ ಆಗಿ ದರ್ಶನ್ 2 ಶೇಡ್ ಗಳಿರೋ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಫ್ಯಾಶ್ ಬ್ಯಾಕ್ ಎಪಿಸೋಡ್‌ನಲ್ಲಿ ರಾಬರ್ಟ್ ದರ್ಶನ್, ರಾಘವ ವಿನೋದ್ ಪ್ರಭಾಕರ್ ಡಿಫರೆಂಟ್ ಲುಕ್‌ನಲ್ಲಿ ಮೋಡಿ ಮಾಡಿದ್ದರು. ಕುರುಚಲು ಗಡ್ಡ ಬಿಟ್ಟು ಉದ್ದನೆಯ ಕೂದಲಿಗೆ ಹೆಡ್ ಬ್ಯಾಂಡ್ ಹಾಕಿಕೊಂಡು ಡಿ ಬಾಸ್ ಅಭಿಮಾನಿಗಳನ್ನ ಮೆಸ್ಮರೈಸ್ ಮಾಡಿದ್ದರು.

 ಏರ್ ಪೋರ್ಟ್ ನಲ್ಲಿ ಪತ್ನಿ, ಪುತ್ರನ ಜೊತೆ ದರ್ಶನ್

ಏರ್ ಪೋರ್ಟ್ ನಲ್ಲಿ ಪತ್ನಿ, ಪುತ್ರನ ಜೊತೆ ದರ್ಶನ್

ಇತ್ತೀಚೆಗೆ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಜೊತೆ ಏರ್ ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಪತ್ನಿ, ಪುತ್ರ ಸಮೇತ ಚಾಲೆಂಜಿಂಗ್ ಸ್ಟಾರ್ ಲಂಡನ್ ಗೆ ಹೋಗಿ ಬಂದಿದ್ದರು. ಸಾಮಾನ್ಯವಾಗಿ ದರ್ಶನ್‌ಗೆ ಸಂಬಂಧಿಸಿದ ಯಾವುದೇ ಫೋಟೊ ವಿಡಿಯೋ ವೈರಲ್ ಆಗುತ್ತೆ. ಪತ್ನಿ, ಪುತ್ರನ ಜೊತೆ ಕಾಣಿಸಿಕೊಂಡಿದ್ದ ವಿಡಿಯೋ ಕಳೆದೆರಡು ದಿನಗಳಿಂದ ನೆಟ್ ವರ್ಲ್ಡ್‌ನಲ್ಲಿ ಹಲ್ ಚಲ್ ಎಬ್ಬಿಸಿತ್ತು.

 ನವೆಂಬರ್ ನಲ್ಲಿ ದರ್ಶನ್ 'ಕ್ರಾಂತಿ'

ನವೆಂಬರ್ ನಲ್ಲಿ ದರ್ಶನ್ 'ಕ್ರಾಂತಿ'

'ರಾಬರ್ಟ್' ಸಿನಿಮಾದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ. ಪೋಲೆಂಡ್ ಶೂಟಿಂಗ್ ಮುಗಿಸಿ ಬಂದಿರೋ ಟೀಂ, ಕೊನೆ ಶೆಡ್ಯೂಲ್ ಪ್ಲಾನ್ ಮಾಡ್ತಿದೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು, ಸುಮಲತಾ ಅಂಬರೀಶ್ ಸೇರಿದಂತೆ ಘಟಾನುಘಟಿ ಕಲಾವಿದರು 'ಕ್ರಾಂತಿ' ಬಳಗದಲ್ಲಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ರಾಜ್ಯೋತ್ಸವ ಸಂಭ್ರಮದಲ್ಲಿ ನವೆಂಬರ್ ತಿಂಗಳಿನಲ್ಲೇ ಸಿನಿಮಾ ರಿಲೀಸ್ ಪ್ಲಾನ್ ನಡೀತಿದೆ. ಶೈಲಜಾ ನಾಗ್ ಮತ್ತು ಬಿ. ಸುರೇಶ ಕ್ರಾಂತಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

More from Filmibeat

English summary
Kranti Starrer Darshan New Hairstyle With Fans Goes Viral. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X