ನಟ ದರ್ಶನ್ ಹೊಸ ಹೇರ್‌ಸ್ಟೈಲ್ ಸೀಕ್ರೇಟ್ ಏನ್ ಗೊತ್ತಾ?

ನಟ ಚಾಲೆಂಗ್ ಸ್ಟಾರ್ ದರ್ಶನ್ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಒಂದರ ಬಳಿಕ ಒಂದರಂತೆ ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸದ್ಯ 'ಕ್ರಾಂತಿ' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದೆ. ಕ್ರಾಂತಿ ನಟ ದರ್ಶನ್ ಮುಂದಿನ ರಿಲೀಸ್.

'ಕ್ರಾಂತಿ' ಚಿತ್ರದ ವಿಚಾರ ಸುದ್ದು ಮಾಡುತ್ತಿರುವಾಗಲೇ, ನಟ ದರ್ಶನ್ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ D56 ಚಿತ್ರದ ಪ್ರೀ-ಪ್ರೋಡಕ್ಷನ್ ಕೆಲಸಗಳು ಶುರುವಾಗಿ ಬಿಟ್ಟಿವೆ. ಈಗಾಗಲೇ ಸಿನಿಮಾದ ಟೈಟಲ್ ಬಗ್ಗೆಯೂ ಚರ್ಚೆ ಶುರುವಾಗಿದೆ.

ಇದೆಲ್ಲದರ ನಡುವೆ ನಟ ದರ್ಶನ್ ಹೊಸ ಲುಕ್ ವೈರಲ್ ಆಗಿದೆ. ದರ್ಶನ್ ಹೊಸ ಹೇರ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಹೇರ್ ಸ್ಟೈಲ್ ಅಸಲಿಯತ್ತೇನು ಎನ್ನುವ ಬಗ್ಗೆ ಸಂಪೂರ್ಣ ವಿವರ ಮುಂದೆ ಓದಿ...

ಸ್ಟೈಲಿಶ್ ಹೇರ್‌ ಸ್ಟೈಲ್‌ನಲ್ಲಿ ದರ್ಶನ್!

ನಟ ದರ್ಶನ್ ಹೊಸ ಹೇರ್ ಸ್ಟೈಲ್ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಹಿಂದೆಂದೂ ಕಾಣಿಸಿಕೊಂಡಿರದ ಹೊಸ ಸ್ಟೈಲಿಶ್ ಹೇರ್ ಸ್ಟೈಲ್‌ನಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ. ಹಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ದರ್ಶನ್ ಹೊಸ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲೆಲ್ಲೂ ಇದೇ ಚರ್ಚೆ ಶುರುವಾಗಿದೆ.

ದರ್ಶನ್ ಹೇರ್ ಸ್ಟೈಲ್ ರಹಸ್ಯ!

ವೈರಲ್ ಆಗುತ್ತಿರುವ ನಟ ದರ್ಶನ್ ಹೇರ್ ಸ್ಟೈಲ್ ಹಿಂದಿನ ರಹಸ್ಯ ಏನು ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಈ ಕುತೂಹಲದ ಹಿಂದೆ ಬಿದ್ದಾಗ ಫಿಲ್ಮೀ ಬೀಟ್‌ಗೆ ದರ್ಶನ್ ಹೊಸ ಹೇರ್ ಸ್ಟೈಲ್ ರಹಸ್ಯ ಕೂಡ ತಿಳಿದುಬಂದಿದೆ. ಹೌದು ಮೂಲಗಳ ಮಾಹಿತಿಯ ಪ್ರಕಾರ ನಟ ದರ್ಶನ್ ಹೇರ್ ಸ್ಟೈಲ್ ತಮ್ಮ ಮುಂದಿನ ಸಿನಿಮಾಗಾಗಿ ಈ ಹೇರ್‌ ಸ್ಟೈಲ್ ಮಾಡಿಕೊಂಡಿದ್ದಾರೆ. ದರ್ಶನ್ ಮುಂದಿನ ಸಿನಿಮಾ D56. ಇದೆ ಚಿತ್ರಕ್ಕಾಗಿ ನಟ ದರ್ಶನ್ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ ಎನ್ನಲ್ಲಾಗಿದೆ.

D56 ಫಸ್ಟ್ ಲುಕ್ ತಯಾರಿ!

D56 ಫಸ್ಟ್ ಲುಕ್ ತಯಾರಿ!

ಹೌದು ನಟ ದರ್ಶನ್ D56 ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾದ ಬಹುತೇಕ ಕೆಲಸಗಳು ಶುರುವಾಗಿವೆ. ಸದ್ಯ ದರ್ಶನ್ ಅವರ ಲುಕ್ ಟೆಸ್ಟ್ ನಡೆಯುತ್ತಿದ್ದು, ಫಸ್ಟ್ ಲುಕ್ ಗಾಗಿ ದರ್ಶನ್ ವಿಭಿನ್ನ ಪ್ರಯೋಗ ಮಾಡುತ್ತಿದ್ದಾರೆ. ಅದರಲ್ಲಿ ಹೊಸ ಹೇರ್ ಸ್ಟೈಲ್ ಕೂಡ ಒಂದು. ಅದೇನೇ ಇದ್ದರೂ ಹೊಸ ಹೇರ್ ಸ್ಟೈಲ್‌ಲ್ಲಿ ದರ್ಶನ್ ಅವ್ರನ್ನ ಕಂಡ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ದರ್ಶನ್ ಈ ಲುಕ್‌ನಲ್ಲಿ ಮತ್ತಷ್ಟು ಯಂಗ್ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಫಸ್ಟ್ ಲುಕ್!

ವರಮಹಾಲಕ್ಷ್ಮೀ ಹಬ್ಬಕ್ಕೆ ಫಸ್ಟ್ ಲುಕ್!

d56 ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಲಾಂಚ್‌ಗೆ ಭರದ ತಯಾರಿ ನಡೆದಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಿನಿಮಾ ಸೆಟ್ಟೇರಲಿದೆ ಎನ್ನುವ ಮಾಹಿತಿ ಇದೆ. ಜೊತೆಗೆ ವರಮಹಾಲಕ್ಷ್ಮಿ ಹಬ್ಬದಂದು ನಟ ದರ್ಶನ್ ಲುಕ್ ಕೊಡ ಲಾಂಚ್ ಆಗಲಿದೆ. ಹಾಗಾಗಿ ಇದೇ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಾರಾ ಅಥವಾ ಬೇರೆ ಲುಕ್‌ನಲ್ಲಿ ಎಂಟ್ರಿ ಕೊಡಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇದೆಲ್ಲದಕ್ಕೂ ವರಮಹಾಲಕ್ಷ್ಮಿ ಹಬ್ಬದಂದು ಉತ್ತರ ಸಿಗಲಿದೆ. ಜೊತೆಗೆ ಚಿತ್ರತಂಡ ಕೂಡ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಳ್ಳಲಿದೆ.

More from Filmibeat

English summary
Darshan New Hairstyle Secret Is Here, Darshan New Hairstyle For D56 Movie. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X