ಅಚ್ಚರಿ ತಂದಿದೆ ದರ್ಶನ್ ಹಾಕಿದ ಹೊಸ ಪೋಸ್ಟ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಕಿರುವ ಹೊಸ ಪೋಸ್ಟ್ ಭಾರಿ ಸದ್ದು ಮಾಡ್ತಿದೆ. ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ದರ್ಶನ್ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಇದರಲ್ಲಿರುವ ಮಾತುಗಳನ್ನ ನೋಡಿದ್ರೆ, ಇದು ಯಾರಿಗೊ ಪರೋಕ್ಷವಾಗಿ ಟಾಂಗ್ ಕೊಟ್ಟಂತಿದೆ.
ದರ್ಶನ್ ಅವರು ಸಾಮಾನ್ಯವಾಗಿ ಇಂತಹ ಟ್ವೀಟ್ ಗಳನ್ನ ಮಾಡುವುದಿಲ್ಲ. ದಿಢೀರ್ ಅಂತ ಇಂತಹದೊಂದು ಪೋಸ್ಟ್ ಮಾಡಿರುವುದು ನಿಜಕ್ಕೂ ಅಚ್ಚರಿ ತಂದಿದೆ.

''ನನ್ನನ್ನು F....k ಎಂದು ಅರ್ಥೈಸಬಹುದು
ಕ್ಯಾಂಡಿಯಂತೆ ಸಿಹಿ
ನೀರಿನಂತೆ ಶೀತ
ನರಕದಂತೆ ದುಷ್ಟ
ಅಥವಾ
ಸೈನಿಕನಂತೆ ನಿಷ್ಠಾವಂತ
ಇದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ..'' ಎಂದು ಸಾಂದರ್ಭಿಕ ಚಿತ್ರದೊಂದಿಗೆ ಈ ಸಾಲುಗಳಿರುವ ಪೋಸ್ಟ್ ಹಾಕಿದ್ದಾರೆ.
ನಿಜಕ್ಕೂ ಇಷ್ಟೊಂದು ಚರ್ಚಾಸ್ಪದ ಸಾಲುಗಳನ್ನ ಡಿ ಬಾಸ್ ಹಾಕಿದ್ದಾದರೂ ಯಾರಿಗೆ ಎಂಬ ಕುತೂಹಲ ಈಗ ಅಭಿಮಾನಿ ವಲಯದಲ್ಲಿ ಕಾಣುತ್ತಿದೆ.
ಆದರೆ ಈ ಪೋಸ್ಟ್ ಗೆ ಮಾತ್ರ ದರ್ಶನ್ ಫ್ಯಾನ್ಸ್ 'ಸರಿಯಾದ ರಿಪ್ಲೈ' ಎಂದು ಹೇಳುತ್ತಿದ್ದಾರೆ. 'ಕುರುಕ್ಷೇತ್ರ' ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ಸುಯೋಧನ, 'ರಾಬರ್ಟ್' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಇದು ಮುಗಿಯುತ್ತಿದ್ದಂತೆ 'ಗಂಡುಗಲಿ ಮದಕರಿ ನಾಯಕ' ಚಿತ್ರವನ್ನ ಆರಂಭಿಸಲಿದ್ದಾರೆ.


Click it and Unblock the Notifications











