For Quick Alerts
  ALLOW NOTIFICATIONS  
  For Daily Alerts

  'ಡಿ-ಬಾಸ್' ಅಭಿಮಾನಕ್ಕೆ ಸಿಕ್ತು ಮತ್ತೊಂದು ಹೊಸ ಬಿರುದು

  By Bharath Kumar
  |
  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿಕ್ತು ಮತ್ತೊಂದು ಬಿರುದು | FIlmibeat Kannada

  ಇತ್ತೀಚೆಗಷ್ಟೇ ಸಾಹಿತಿ ಡಾ.ಕವಿರತ್ನ ವಿ.ನಾಗೇಂದ್ರ ಪ್ರಸಾದ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಶತಸೋದರಾಗ್ರಜಾ ಶರವೀರ' ಎಂದು ಹೊಸ ಬಿರುದು ನೀಡಿದ್ದರು. ಅದಕ್ಕೂ ಮುಂಚೆ 'ಕರುನಾಡ ಕರ್ಣ' ಎಂಬು ಹೆಸರನ್ನ ಅಭಿಮಾನಿಗಳು ನೀಡಿದ್ದರು. ಈಗ ಮತ್ತೊಂದು ಪವರ್ ಫುಲ್ ಬಿರುದನ್ನ ಅಭಿಮಾನಿಗಳು ನೀಡಲು ಮುಂದಾಗಿದ್ದಾರೆ.

  ಚಾಲೆಂಜಿಂಗ್ ಸ್ಟಾರ್, ದಾಸ, ಡಿ ಬಾಸ್, ಚಕ್ರವರ್ತಿ, ಕರುನಾಡ ಕರ್ಣ, ಬಾಕ್ಸ್ ಆಫೀಸ್ ಸುಲ್ತಾನ್, ಹೀಗೆ ಹತ್ತು ಹಲವಾರು ರೀತಿಯಲ್ಲಿ ಕರೆದು ದರ್ಶನ್ ಅವರ ಕೀರ್ತಿಯನ್ನ ಮತ್ತಷ್ಟು ಹೆಚ್ಚಿಸುತ್ತಿರುವ ಅಭಿಮಾನಿಗಳು ಈಗ ತಮ್ಮ ನೆಚ್ಚಿನ ಮುಡಿಗೆ ಮತ್ತೊಂದು ಕಿರೀಟ ನೀಡಿದ್ದಾರೆ.

  'ಶತಸೋದರಾಗ್ರಜಾ ಶರವೀರ' ಚಾಲೆಂಜಿಂಗ್ ಸ್ಟಾರ್ ದರ್ಶನ್'ಶತಸೋದರಾಗ್ರಜಾ ಶರವೀರ' ಚಾಲೆಂಜಿಂಗ್ ಸ್ಟಾರ್ ದರ್ಶನ್

  ಅಷ್ಟಕ್ಕೂ ದರ್ಶನ್ ಅವರಿಗೆ ನೀಡಲಿರುವ ಹೊಸ ಬಿರುದು ಯಾವುದು? ಈ ಬಿರುದು ನೀಡುತ್ತಿರುವುದು ಯಾರು? ಎಂಬ ಇಂತಹ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿ....

  'ಕಲಾ ಸಾರ್ವಭೌಮ' ದರ್ಶನ್

  'ಕಲಾ ಸಾರ್ವಭೌಮ' ದರ್ಶನ್

  ಸಿನಿ ಬದುಕಿನಲ್ಲಿ 50 ಚಿತ್ರಗಳನ್ನ ಪೂರೈಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಈಗ ಹೊಸ ಬಿರುದು ನೀಡಲಾಗುತ್ತಿದೆ. ದರ್ಶನ್ ಗೆ ಕಲೆಗೆ ಬೆಲೆ ನೀಡುತ್ತಿರುವ ಫ್ಯಾನ್ಸ್ 'ಕಲಾ ಸಾರ್ವಭೌಮ' ಎಂದು ಕರೆಯಲು ನಿರ್ಧರಿಸಿದ್ದಾರೆ.

  ಗಿರಿನಗರ ಫ್ಯಾನ್ಸ್ ವತಿಯಿಂದ ಸನ್ಮಾನ

  ಗಿರಿನಗರ ಫ್ಯಾನ್ಸ್ ವತಿಯಿಂದ ಸನ್ಮಾನ

  ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಗಿರಿನಗರದ ಕರುನಾಡ ಕಲಾದೀಪ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ, 'ಕಲಾ ಸಾರ್ವಭೌಮ' ಎಂಬ ಬಿರುದು ನೀಡಿ ಸನ್ಮಾನಿಸಲು ನಿರ್ಧರಿಸಿದೆ.

  ಅಂದು ರಾಜ್ ಇಂದು ದರ್ಶನ್

  ಅಂದು ರಾಜ್ ಇಂದು ದರ್ಶನ್

  ಕನ್ನಡ ಚಿತ್ರರಂಗದ 'ನಟ ಸಾರ್ವಭೌಮ' ಎಂದು ಡಾ ರಾಜ್ ಕುಮಾರ್ ಅಭಿಮಾನಿಗಳಿಂದ ಕರೆಸಿಕೊಂಡಿದ್ದರು. ಈಗ ದರ್ಶನ್ 'ಕಲಾ ಸಾರ್ವಭೌಮ' ಎಂದು ಕರೆಸಿಕೊಳ್ಳುತ್ತಿದ್ದಾರೆ.

  ಮೊದಲು ಡಾ.ರಾಜ್, ನಂತ್ರ ದರ್ಶನ್.! ಡಿ-ಬಾಸ್ ಬಗ್ಗೆ ಹೀಗ್ಯಾಕಂದ್ರು ರವಿಶಂಕರ್.?ಮೊದಲು ಡಾ.ರಾಜ್, ನಂತ್ರ ದರ್ಶನ್.! ಡಿ-ಬಾಸ್ ಬಗ್ಗೆ ಹೀಗ್ಯಾಕಂದ್ರು ರವಿಶಂಕರ್.?

  50ನೇ ಚಿತ್ರ 'ಕುರುಕ್ಷೇತ್ರ'

  50ನೇ ಚಿತ್ರ 'ಕುರುಕ್ಷೇತ್ರ'

  ಡಾ ರಾಜ್ ನಂತರ ಪೌರಾಣಿಕ ಚಿತ್ರಗಳಲ್ಲಿ ಬೇರೆ ಯಾವ ನಟರು ಹೆಚ್ಚಾಗಿ ಯಶಸ್ಸು ಕಂಡಿಲ್ಲ. ಆದ್ರೀಗ, ದರ್ಶನ್ ಇಂತಹ ಸಾಹಸ ಮಾಡ್ತಿದ್ದು, ಈಗಾಗಲೇ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿರುವ ದರ್ಶನ್ ಗೆ ಈಗ ಅಭಿಮಾನಿಗಳು 'ಕಲಾ ಸಾರ್ವಭೌಮ' ಎನ್ನುತ್ತಿರುವುದು ಮತ್ತಷ್ಟು ಖುಷಿ ಕೊಟ್ಟಿದೆ.

  'ಕರುನಾಡ ಕರ್ಣ' ದರ್ಶನ್ ಹೃದಯ ಶ್ರೀಮಂತಿಕೆಗೆ ಇಲ್ಲೊಂದು ಸಾಕ್ಷಿ 'ಕರುನಾಡ ಕರ್ಣ' ದರ್ಶನ್ ಹೃದಯ ಶ್ರೀಮಂತಿಕೆಗೆ ಇಲ್ಲೊಂದು ಸಾಕ್ಷಿ

  English summary
  Kannada actor, Challening star darshan Girinagar fans have decided to give 'Kala Sarvabhowma' title for D Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X