ಮತ್ತೆ ತೆರೆಯಲ್ಲಿ ದರ್ಶನ್-ನಿಖಿತಾ ರೊಮಾನ್ಸ್
Next »
« Previous
ಇನ್ನು ಚಿತ್ರಕ್ಕೆ ನಾಯಕರಾಗಿ, ಸಂಗೊಳ್ಳಿ ರಾಯಣ್ಣ ಪಾತ್ರದಲ್ಲಿ ಅಭಿನಯಿಸಿರುವ ದರ್ಶನ್ ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಹೊಂದಿದ್ದಾರೆ. ನೂರಿನ್ನೂರು ವರ್ಷಗಳ ಹಿಂದಿನ ಕಾಲಕ್ಕೆ ಸಂಬಂಧಪಟ್ಟ ಈ ಚಿತ್ರದಲ್ಲಿ ನಟಿಸಿರುವುದು ಹಾಗೂ ಶೂಟಿಂಗ್ ನಡೆಯುವಾಗಿನ ಸಂದರ್ಭದ ಮನಸ್ಥಿತಿ ಹಾಗೂ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ತಾವು ಆ ಪಾತ್ರದಲ್ಲಿ ಅನುಭವಿಸಿ ಸಾಕಷ್ಟು ಭಿನ್ನ ಅನುಭವ ಹೊಂದಿದ್ದಾಗಿ ಹೇಳಿದ್ದಾರೆ.
ಚಿತ್ರದ ಶೂಟಿಂಗ್ ಅನುಭವವನ್ನು ಹೇಳಿಕೊಂಡ ದರ್ಶನ್ "ಸಂಗೊಳ್ಳಿ ರಾಯಣ್ಣ ಚಿತ್ರವು ಪಕ್ಕಾ ಐತಿಹಾಸಿಕ ಚಿತ್ರವಾದ್ದರಿಂದ ನಾಯಕನಾಗಿ ನಟಿಸಿರುವ ನನಗೆ ಮೇಕಪ್ ಮಾಡಲು ಒಂದು ತಾಸು ಹಿಡಿಯುತ್ತಿತ್ತು. ಜೊತೆಗೆ ಹಳೆಯ ಕಾಲದ ಪೋಷಾಕು ಹಾಗೂ ಆಭರಣಗಳನ್ನು ಧರಿಸಿ ಸಂಗೊಳ್ಳಿ ರಾಯಣ್ಣರ ಗೆಟಪ್ ಪಡೆದುಕೊಳ್ಳಲು ಬರೋಬ್ಬರೊ ಎರಡು ತಾಸು ಹಿಡಿಯುತ್ತಿತ್ತು. ಅಷ್ಟು ಮಾಡದಿದ್ದರೆ ನಾವು ಆ ಚಿತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ.
ಅಷ್ಟೊಂದು ಭಾರವಾದ ಆಭರಣಗಳು, ಹಳೆಯ ಕಾಲದ ಆಯುಧಗಳನ್ನು ಬಳಸಿ ಚಿತ್ರೀಕರಣ ಮಾಡುವಾಗ ನಾವು ನೂರಿನ್ನೂರು ವರ್ಷಗಳ ಹಿಂದಕ್ಕೆ ಹೋದ ಅನುಭವವಾಗಿ ರೋಮಾಂಚನವಾಗುತ್ತಿತ್ತು. ಅದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಏನೇ ಆಗಲಿ, ಸಂಗೊಳ್ಳಿ ರಾಯಣ್ಣ ಅವರ ದೇಶಭಕ್ತಿ, ತಮ್ಮವರಿಂದಲೇ ಅವರಿಗಾದ ಅನ್ಯಾಯ, ಅವಮಾನಗಳು, ಚಿತ್ರದಲ್ಲಿ ಅದನ್ನು ಚಿತ್ರೀಕರಿಸಿರುವ ರೀತಿ ಎಂಥವರಿಗೂ ಕಣ್ಣೀರು ತರಿಸುವುದು ಗ್ಯಾರಂಟಿ" ಎಂದಿದ್ದಾರೆ.
ಈ ಭಾರಿ ಬಜೆಟ್ ಚಿತ್ರದ ಬಗ್ಗೆ, ಅದರ ನಿರ್ಮಾಪಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ದರ್ಶನ್, ನಾನು ಈ ಚಿತ್ರದ ನಿರ್ಮಾಪಕರಿಗೆ ನಷ್ಟವಾಗಬಾರದೆಂದು ಈ ಚಿತ್ರದ ಆಸುಪಾಸು ಯಾವುದೇ ಚಿತ್ರ ಬಿಡುಗಡೆಯಾಗದಂತೆ ನೋಡಿಕೊಂಡಿದ್ದೇನೆ. ನನ್ನನ್ನು ನಂಬಿ ಹಣ ಹಾಕಿರುವ ನಿರ್ಮಾಪಕರಿಗೆ ತೊಂದರೆ ಮಾಡದಿರುವುದು ನನ್ನ ಕರ್ತವ್ಯ ಕೂಡ ಎಂದಿದ್ದಾರೆ. 'ಚಿಂಗಾರಿ' ನಂತರ ದರ್ಶನ್ ಯಾವ ಚಿತ್ರವೂ ತೆರೆಗೆ ಬಂದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಮುಂದಿನ ಪುಟ ನೋಡಿ...
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X