"ಪ್ಲಸ್ ಹಾಕಿದ್ರು ಪಬ್ಲಿಸಿಟಿನೇ, ಮೈನಸ್ ಹಾಕಿದ್ರು ಪಬ್ಲಿಸಿಟಿನೇ": ನೆಗೆಟಿವ್ ಮಾಡಿದವರಿಗೆ ದರ್ಶನ್ ತಿರುಗೇಟು

By ಫಿಲ್ಮಿಬೀಟ್ ಡೆಸ್ಕ್

'ಕ್ರಾಂತಿ' ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ನಟ ದರ್ಶನ್ ಕೂಡ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಆದರೂ ಕೂಡ ಕೆಲವರು 'ಕ್ರಾಂತಿ' ಸಿನಿಮಾ ಗಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ 'ಕ್ರಾಂತಿ' ಸಿನಿಮಾ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಈ ವೇಳೆ ಚಿತ್ರತಂಡ ಸಿನಿಮಾ ಗೆಲ್ಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿತು. ನಟ ದರ್ಶನ್ ಮಾತನಾಡಿ ಸಿನಿಮಾ ಗೆದ್ದಿದೆ. ಅದಕ್ಕೆ ನಿಮ್ಮ ಮುಂದೆ ಬಂದು ಕುಂತಿದ್ದೇವೆ. ಸಿನಿಮಾ ಸೋತಿದ್ದರೆ ಸೋಲು ಎಂದು ಒಪ್ಪಿಕೊಳ್ಳುತ್ತಿದ್ದೆವು. ಇಲ್ಲಿ ಬಂದು ಈ ರೀತಿ ಕೂರುತ್ತಿರಲಿಲ್ಲ ಎಂದಿದ್ದಾರೆ. ಜೊತೆಗೆ ಸಿನಿಮಾ ಬಗ್ಗೆ ನೆಗೆಟಿವ್ ಮಾತನಾಡಿದವರಿಗೂ ಧನ್ಯವಾದ ಎಂದಿದ್ದಾರೆ.

'ಕ್ರಾಂತಿ' ಚಿತ್ರದ ಸಕ್ಸಸ್ ಮೀಟ್‌ನಲ್ಲಿ ನಟ ದರ್ಶನ್ ಜೊತೆಗೆ ನಾಯಕಿ ರಚಿತಾ ರಾಮ್, ಸಂಯುಕ್ತಾ ಹೊರನಾಡ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ನಿರ್ಮಾಪಕಿ ಶೈಲಜಾ ನಾಗ್ ಸೇರಿದಂತೆ ಇಡೀ ಚಿತ್ರತಂಡ ಭಾಗಿ ಆಗಿತ್ತು.

ನೆಗೆಟಿವ್ ಮಾಡುವವರಿಗೆ ಥ್ಯಾಂಕ್ಸ್

ನೆಗೆಟಿವ್ ಮಾಡುವವರಿಗೆ ಥ್ಯಾಂಕ್ಸ್

"ನಾವು ಸಿನಿಮಾಗೆ ಏನು ಕಷ್ಟಪಟ್ವೋ ಇಲ್ವೋ ಅದು ನಿಮಗೆ ಬೇಕಾಗಿಲ್ಲ. ಆದ್ರೆ ನಾವು ಏನು ಪಬ್ಲಿಸಿಟಿ ಮಾಡಿದ್ವೋ ಅದಕ್ಕಿಂತ 10ರಷ್ಟು ನೆಗೆಟಿವ್ ಮಾಡುತ್ತಿರುವವರಿಗೆ ಬಹಳ ಥ್ಯಾಂಕ್ಸ್. ಅವರು ಎಷ್ಟು ನೆಗೆಟಿವ್ ಮಾಡುತ್ತಿದ್ದಾರೋ, ಅದು ಬಹಳ ಖುಷಿ ಅನ್ನಿಸ್ತಿದೆ. ಇದರಿಂದ ಸಿನಿಮಾ ನೋಡದೇ ಇರುವವರು ಕೂಡ ಹೋಗಿ ಸಿನಿಮಾ ನೋಡುತ್ತಿದ್ದಾರೆ. ನೋಡ್ಕೊಂಡು ಬಂದು ದರ್ಶನ್, ಇವರಿಗೇನು ಮಾಡೋಕೆ ಕೆಲಸ ಇಲ್ವಾ? ಇಷ್ಟು ಕೆಟ್ಟ ಕಾಮೆಂಟ್ ಹಾಕ್ತಿದ್ದಾರೆ ಅಂತಾರೆ ಅಂತ ನನಗೆ ಹೇಳ್ತಿದ್ದಾರೆ"

ಮುಠ್ಠಾಳರಿಗೆ ಅದು ಅರ್ಥ ಆಗಲ್ವಾ?

ಮುಠ್ಠಾಳರಿಗೆ ಅದು ಅರ್ಥ ಆಗಲ್ವಾ?

"ಏನಿಷ್ಟು ಕೆಟ್ಟದಾಗಿ ಕಾಮೆಂಟ್ ಹಾಕಿದ್ದಾರೆ ಎಂದು ಹೋಗಿ ನೋಡ್ಕೊಂಡು ಬಂದೆ. ಈಗ ನಾನು ಒಂದು ಕಾಮೆಂಟ್ ಹಾಕ್ತೀನಿ ಎನ್ನುತ್ತಿದ್ದಾರೆ. ಇನ್ನೊಂದು ವಿಚಾರ. ಬುಕ್‌ಮೈ ಶೋನಲ್ಲಿ ಟಿಕೆಟ್ ತಗೊಂಡ್ರೆ ನೀವು ಕಾಮೆಂಟ್ ಹಾಕಬಹುದು. ಕಾಮೆಂಟ್ ಹಾಕುವುದಕ್ಕಾಗಿ ಒಂದು ಟಿಕೆಟ್ ತಗೋತ್ತಾರಾ. ಮುಠ್ಠಾಳರಿಗೆ ಅದು ಅರ್ಥ ಆಗಲ್ವಾ? ಟಿಕೆಟ್ ತೆಗೆದುಕೊಳ್ತಿದ್ದೀನಿ ಎನ್ನುವ ಬುದ್ದಿ ಆದರೂ ಬೇಡ್ವಾ? ನಾನು ಈ ಸಿನಿಮಾಗೆ ದುಡ್ಡು ಕೊಟ್ಟು ಕಾಮೆಂಟ್ ಹಾಕುತ್ತಿದ್ದೀನಿ ಎಂತಹ ಮುಠ್ಠಾಳ ಅನ್ನಿಸಲ್ವಾ? ಅವರಿಗೆಲ್ಲಾ ತುಂಬಾ ಥ್ಯಾಂಕ್ಸ್.

ನೀವು ಮೈನಸ್ ಹಾಕಿದ್ರು ಪಬ್ಲಿಸಿಟಿ

ನೀವು ಮೈನಸ್ ಹಾಕಿದ್ರು ಪಬ್ಲಿಸಿಟಿ

"ಸಕ್ಸಸ್ ಎನ್ನುವುದು ಒಬ್ಬರಿಂದ ಆಗಲ್ಲ. ಪ್ರತಿ ನನ್ನ ಸೆಲೆಬ್ರೆಟಿಗಳಿಗೆ ಇಲ್ಲಿಂದಲೇ ಅವರ ಪಾದಗಳಿಗೆ ಮುಟ್ಟಿ ನಮಸ್ಕಾರ ಮಾಡ್ತೀನಿ. ಸತ್ಯವಾಗಿಯೂ ಹ್ಯಾಟ್ಸಾಪ್. ಕೆಲ ಯೂಟ್ಯೂಬರ್ಸ್. ನಾನು ಪ್ರತಿಯೊಬ್ಬರು ಎಂದು ಹೇಳಲ್ಲ. ಅವತ್ತು ಕೂಡ ಒಂದು ಮಾತು ಹೇಳಿದ್ದೆ. ನೀವು ಪ್ಲಸ್ ಆದರೂ ಹಾಕಿ ಪಬ್ಲಿಸಿಟಿನೇ, ಮೈನಸ್ ಹಾಕಿದರೂ ಪಬ್ಲಿಸಿಟಿನೇ. ಆದರೂ 101% ಪಬ್ಲಿಸಿಟಿನೇ. ಹಾಗಂತ ಕೆಟ್ಟ ಕಾಮೆಂಟ್ ಮಾಡಿ ಎನ್ನಲ್ಲ. ಅದು ಅವರ ಇಷ್ಟ"

ಎಲ್ರೂ ಹೊಗಳಿದ್ರೆ ದೇವರಾಗಿಬಿಡ್ತೀವಿ

ಎಲ್ರೂ ಹೊಗಳಿದ್ರೆ ದೇವರಾಗಿಬಿಡ್ತೀವಿ

"ಚೆನ್ನಾಗಿರೋದನ್ನು ತಗೋಬೇಕಾದರೆ, ಚೆನ್ನಾಗಿಲ್ಲ ಎನ್ನುವುದನ್ನು ತಗೋಬೇಕು. ಅದು ತಪ್ಪು ಅನ್ನಲ್ಲ. ಅವರಿಗೆ ಎಷ್ಟು ಪೇ ಆಗ್ತಿದೆ ಗೊತ್ತಿಲ್ಲ ನಮಗೆ. ನಾವು ನೋಡುತ್ತಿರುತ್ತೇವೆ. ನೂರು ಜನರಲ್ಲಿ 80 ಜನ ಓಕೆ ಎಂದರೆ 20 ಜನ ತಪ್ಪು ಹೇಳಲೇಬೇಕು. ಎಲ್ಲರೂ ಹೊಗಳಿಬಿಟ್ಟರೆ ಆಮೇಲೆ ದೇವರು ಆಗಿಬಿಡ್ತೀವಿ. ಸ್ವಲ್ಪ ತೆಗಳುವವರು ಇರಬೇಕು. ಮಹಾರಾಜರು ಇದಕ್ಕಂತ್ಲೇ ದುಡ್ಡು ಕೊಟ್ಟು ಬೈಯುವವರನ್ನು ಇಟ್ಟುಕೊಳ್ಳುತ್ತಿದ್ದು ಎಂದು ಕೇಳಿದ್ದೇನೆ" ಎಂದು ದರ್ಶನ್ ವಿವರಿದ್ದಾರೆ.

More from Filmibeat

English summary
Darshan Opens up About Kranti Negative Reviews and bad comments. V Harikrishna Directed Kranti movie reportedly the latest to join the 100 crore club list in Sandalwood. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X