ಇವತ್ತು ಇವಳು.. ನಾಳೆ ಅವಳು.. ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದ ದರ್ಶನ್ ; ಪರೋಕ್ಷವಾಗಿ ಉತ್ತರ ಕೊಟ್ಟರಾ ದಾಸ..?

By Filmibeat Desk

ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ಮನಸ್ತಾಪ ಇಂದು ನಿನ್ನೆಯದಲ್ಲ. ಸಂಸಾರ ಅಂದ ಮೇಲೆ ಸರಸ ವಿರಸ ಅನ್ನೋದು ಒಂದೇ ನಾಣ್ಯದ ಎರಡು ಮುಖಗಳು. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು.

ಯಾವಾಗ ವೈಯಕ್ತಿಕ ವಿಚಾರಗಳು ಬೀದಿಗೆ ಬಂದು ಸಾರ್ವಜನಿಕರ ಬಾಯಿ ಸೇರುತ್ತದೋ ಆಗ ಚಿಕ್ಕದ್ದು ದೊಡ್ಡದ್ದಾಗುವ ಎಲ್ಲ ಲಕ್ಷಣಗಳೂ ಹೆಚ್ಚಾಗಿಯೇ ಇರುತ್ತದೆ. ದರ್ಶನ್ ವಿಚಾರದಲ್ಲಿ ಇದು ಮೇಲಿಂದ ಮೇಲೆ ಆಗ್ತಾನೇ ಬಂದಿದೆ. ಈಗ ಇದು ಮತ್ತೆ ಪುನರಾವರ್ತನೆಯಾಗಿದೆ.

 Darshan opens up on his personal life during silver jubilee Celebration

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ಪೂರೈಸಿದ ಹಿನ್ನೆಲೆ ನಿನ್ನೆ ಶ್ರೀರಂಗ ಪಟ್ಟಣದಲ್ಲಿ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ತಾರೆಯರು, ರಾಜಕಾರಣಿಗಳು, ಮಠಾಧೀಶರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ಮಾತನಾಡಿದ ದರ್ಶನ್ 25 ವರ್ಷಗಳ ಸುದೀರ್ಘ ಪ್ರಯಾಣವನ್ನ ಹಿಂದೆ ತಿರುಗಿ ನೋಡಿದರು. ಮಾತಿನ ಭರದಲ್ಲಿ ವೃತ್ತಿಯ ಬಗ್ಗೆಅಷ್ಟೇ ಮಾತನಾಡದೇ ವ್ಯೆಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿ ಬಿಟ್ಟರು. ದರ್ಶನ್ ಆಡಿದ ಇದೇ ಮಾತು ಈಗ ಕಾಲ್ ಎಳೆಯಲು ಕಾಲೆಳೆಯಲು ಅಂತಾನೇ ಇರುವ ಗುಂಪಿಗೆ ಆಹಾರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರ ವ್ಯೆಯಕ್ತಿಕ ಜೀವನದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಆಸ್ಪದವನ್ನೂ ಮಾಡಿ ಕೊಟ್ಟಿದೆ.

 Darshan opens up on his personal life during silver jubilee Celebration

ಬೆಳ್ಳಿ ಪರ್ವ ದಲ್ಲಿ ದರ್ಶನ್ ಹೇಳಿದ್ದೇನು ..?

ಕಾರ್ಯಕ್ರಮದಲ್ಲಿ ಜೀವನದ ಏಳು ಬೀಳಿನ ಬಾಳಿನ ಬಗ್ಗೆ ಮಾತನಾಡಿದ ದರ್ಶನ್, ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತೆ. ಅದು ಕೆಲವರಿಗೆ ಹಿಡಿಸಲ್ಲ. ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ ಎಂದರು.

ತಮ್ಮ ಸಾಂಸಾರಿಕ ಜೀವನದ ಕುರಿತು, ಸಾಮಾಜಿಕ ಜಾಲತಾಣದಲ್ಲಿ ನಡೆಯುವ ದಿನನಿತ್ಯ ಚರ್ಚೆಗಳನ್ನ ಗಮನಿಸಿ ಬೇಕಂತಲೇ ದರ್ಶನ್ ನಿನ್ನೆ ತಮ್ಮ ವ್ಯೆಯಕ್ತಿಕ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದರಾ ಗೊತ್ತಿಲ್ಲ. ಆದರೆ.. ಸದ್ಯಕ್ಕೆ ದರ್ಶನ್ ಪರೋಕ್ಷವಾಗಿ ತಿರುಗೇಟು ನೀಡಲೆಂದೆ ಮಾತನಾಡಿದ್ದಾರೆ ಎಂಬ ಮಾತು ದರ್ಶನ್ ಅವರ ಅಭಿಮಾನಿ ಬಳಗದಲ್ಲಿ ಕೇಳಿ ಬರುತ್ತಿದೆ. ಉದ್ದೇಶಪೂರ್ವಕವಾಗಿ ದರ್ಶನ್ ತಮ್ಮ ವ್ಯೆಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ಕೇಳಿ ಬರುತ್ತಿದೆ.

More from Filmibeat

English summary
During Belli Parva Challenging Star Darshan opens up on his personal life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X