'ಮದಕರಿ ನಾಯಕ' ಚಿತ್ರದ ಬಗ್ಗೆ ಸುದೀಪ್ ಹೇಳಿದ್ದನ್ನೇ ದರ್ಶನ್ ಹೇಳಿದ್ರಂತೆ.!

Recommended Video

ವೀರ ಮದಕರಿ ನಾಯಕನ ಬಗ್ಗೆ ದರ್ಶನ್, ಸುದೀಪ್ ಹೇಳಿದ್ದು ಏನು..!? | Oneindia Kannada

'ಮದಕರಿ ನಾಯಕ'ನ ಕುರಿತು ಸಿನಿಮಾ ಮಾಡಲು ಕನ್ನಡದ ಇಬ್ಬರು ಸೂಪರ್ ಸ್ಟಾರ್ ನಟರು ಮುಂದಾಗಿದ್ದಾರೆ. ಇದು ಸಹಜವಾಗಿ ಕುತೂಹಲದ ಜೊತೆಗೆ ಆತಂಕವನ್ನೂ ಮೂಡಿಸಿದೆ.

ಒಬ್ಬ ನಾಯಕನ ಕುರಿತು ಎರಡು ಸಿನಿಮಾ, ಇಬ್ಬರು ನಟರು ಹೇಗಿರಲಿದೆ ಈ ಸಿನಿಮಾ, ಇಬ್ಬರು ನಟರು ಹೇಗೆ ಅಭಿನಯಿಸಬಹುದು ಎಂಬುದು ಕುತೂಹಲ. ಒಂದೇ ಕಥೆ ಬಗ್ಗೆ ಇಬ್ಬರು ನಟರು ಮಾಡ್ತಿರುವುದು 'ನೀನಾ-ನಾನಾ' ಎಂಬ ಮನೋಭಾವನೆಗೆ ಕಾರಣವಾಗಲಿದೆ. ಅಷ್ಟೇ ಅಲ್ಲದೇ ಅವರ ಅಭಿಮಾನಿಗಳು ಕೂಡ ಯಾರು ಗ್ರೇಟ್ ಎಂದು ಕಿತ್ತಾಡಬಹುದು ಎಂಬ ಆತಂಕ ಕಾಡುತ್ತಿದೆ.

ಈ ಬಗ್ಗೆ ಕಿಚ್ಚ ಸುದೀಪ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಅವರ ಚಿತ್ರ ನಮ್ಮ ಸಿನಿಮಾಗೆ ಅಡ್ಡಿಯಿಲ್ಲ. ಯಾರೂ ಬೇಕಾದರೂ ಮಾಡಬಹುದು ಎಂದಿದ್ದಾರೆ. ಈ ಬಗ್ಗೆ ದರ್ಶನ್ ಏನಂದ್ರು ಗೊತ್ತಾ.? ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.....

ಯಾರೂ ಬೇಕಾದರು ಮಾಡಬಹುದು

ಯಾರೂ ಬೇಕಾದರು ಮಾಡಬಹುದು

''ಒಂದೇ ವಿಷಯ, ಒಬ್ಬನೇ ವ್ಯಕ್ತಿಯ ಮೇಲೆ ಈಗಾಗಲೇ ಒಂದಕ್ಕಿಂತ ಹೆಚ್ಚು ಸಿನಿಮಾಗಳು ತೆರೆಕಂಡ ಉದಾಹರಣೆಗಳಿವೆ. ನಾನೊಬ್ಬನೇ ಮದಕರಿ ನಾಯಕನ ಪಾತ್ರ ನಿರ್ವಹಿಸಬೇಕು ಎಂಬುದು ಎಷ್ಟು ಸರಿ? ಆತ ಕರ್ನಾಟಕದ ವೀರಪುತ್ರ. ಅವರ ಬಗ್ಗೆ ಸಿನಿಮಾ ಯಾರಾದರೂ ಮಾಡಬಹುದು'' ಎಂದು ಸುದೀಪ್ ಹೇಳಿದ್ದರು.

ನಮ್ಮ ಚಿತ್ರಕ್ಕೆ ಅಡ್ಡಿಯಿಲ್ಲ

ನಮ್ಮ ಚಿತ್ರಕ್ಕೆ ಅಡ್ಡಿಯಿಲ್ಲ

''ನಾನು ಮತ್ತು ನನ್ನ ತಂಡವು ಮಾಡ ಹೊರಟಿರುವ ಚಿತ್ರಕ್ಕೆ ಇದು ಅಡ್ಡಿಯಾಗುವುದಿಲ್ಲ. ಇದು ನಮ್ಮ ಕನಸೂ ಕೂಡಾ. ಇದು ಬರೀ ನನ್ನೊಬ್ಬನ ಕನಸಲ್ಲ. ಇಡೀ ತಂಡದ ಕನಸನ್ನು ನಾನು ಭಗ್ನಗೊಳಿಸಲು ಇಚ್ಛಿಸುವುದಿಲ್ಲ. ಇದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ'' ಎಂದು ಕಿಚ್ಚ ಸ್ಪಷ್ಟಪಡಿಸಿದ್ದಾರೆ.

ದರ್ಶನ್ ಮನಸ್ಸಿನಲ್ಲೂ ಅದೇ ಭಾವನೆ

ದರ್ಶನ್ ಮನಸ್ಸಿನಲ್ಲೂ ಅದೇ ಭಾವನೆ

ಇನ್ನು ಈ ವಿಚಾರದ ಬಗ್ಗೆ ದರ್ಶನ್ ಕೂಡ ಮಾತನಾಡಿದ್ದು, ''ಅವರು ಒಬ್ಬ ನಾಯಕನನ್ನ ಬಿಂಬಿಸುತ್ತಾರೆ. ನಾವು ಒಬ್ಬ ನಾಯಕನನ್ನ ಬಿಂಬಿಸುತ್ತಾರೆ. ಇಬ್ಬರು ಆರೋಗ್ಯವಾಗಿ ತೆಗೆದುಕೊಳ್ಳೋಣ. ಅವರ ಚಿತ್ರವನ್ನ ಅವರು ಮಾಡಲಿ, ನಾವು ನಮ್ಮ ಚಿತ್ರವನ್ನ ನಾವು ಮಾಡೋಣ'' ಎಂದಿದ್ದಾರೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ.

'ಕುರುಕ್ಷೇತ್ರ' ಗೆಟಪ್ ನೋಡಿ ದರ್ಶನ್ ಆಯ್ಕೆ

'ಕುರುಕ್ಷೇತ್ರ' ಗೆಟಪ್ ನೋಡಿ ದರ್ಶನ್ ಆಯ್ಕೆ

ಇನ್ನು 'ಮದಕರಿ ನಾಯಕ'ನ ಕುರಿತು ಸಿನಿಮಾ ಮಾಡಬೇಕೆಂದು ಸಂಶೋಧನೆ ಮಾಡುವಾಗ, ಹೀರೋ ಯಾರು ಎಂದು ಊಹಿಸಿರಲಿಲ್ಲ. 'ಕುರುಕ್ಷೇತ್ರ' ಸಿನಿಮಾದ ಗೆಟಪ್ ನೋಡಿದ ಮೇಲೆ ದರ್ಶನ್ ಸೂಕ್ತ ಎಂಬ ನಿರ್ಧಾರಕ್ಕೆ ಬಂದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿಕೊಂಡಿದ್ದಾರೆ.

'ಕುರುಕ್ಷೇತ್ರ' ಸೆಟ್ ನಲ್ಲಿ ಒಪ್ಪಿಗೆ

'ಕುರುಕ್ಷೇತ್ರ' ಸೆಟ್ ನಲ್ಲಿ ಒಪ್ಪಿಗೆ

ನಂತರ ಈ ವಿಷ್ಯವನ್ನ ದರ್ಶನ್ ಅವರ ಬಳಿ ಹೇಳಿದೆ. ಆಗ ಅವರು ಕುರುಕ್ಷೇತ್ರ ಸೆಟ್ ನಲ್ಲಿದ್ದರು. ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಅವರು ಇದ್ದರು. ದರ್ಶನ್ ಕೂಡ ಮಾಡೋಣ ಅಣ್ಣಾ....ನಿಮ್ಮ ಜೊತೆ ಸಿನಿಮಾ ಮಾಡೋ ಅವಕಾಶ ಬಿಡೋಕಾಗುತ್ತಾ ಎಂದು ಒಪ್ಪಿಕೊಂಡರು ಎಂದು ರಾಕ್ ಲೈನ್ ಹೇಳಿದ್ದಾರೆ.

More from Filmibeat

English summary
Producer Rockline Venkatesh said that darshan also happy about Sudeep's Madakari nayaka film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X