ದರ್ಶನ್ ಅಂಡ್ ಗ್ಯಾಂಗ್ ಭವಿಷ್ಯ ಏನಾಗ್ಬಹುದು? ಪರಪ್ಪನ ಅಗ್ರಹಾರ ಜೈಲು ಸೇರ್ತಾರಾ?

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಗ್ಯಾಂಗ್‌ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ದರ್ಶನ್ ಅಂಡ್ ಗ್ಯಾಂಗ್ ಕೇಸ್ ದಾಖಲು ಮಾಡಿ ನ್ಯಾಯಾಧೀಶರ ಮುಂದೆ ಒಪ್ಪಿಸಿದ್ದಾಗ, 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೊಟ್ಟಿದ್ದರು. ಆ ಅವಧಿ ನಾಳೆಗೆ (ಜೂನ್ 16) ಮುಗಿಯುತ್ತೆ. ಈ ಹಿನ್ನೆಲೆಯಲ್ಲಿ ಇದೇ ನ್ಯಾಯಾಧೀಶರ ಮುಂದೆ ಪ್ರಡ್ಯೂಸ್ ಮಾಡುವ ಸಾಧ್ಯತೆಯಿದೆ.

ನಾಳೆ (ಜೂನ್ 16) ಭಾನುವಾರ ಆಗಿರುವ ಹಿನ್ನೆಲೆಯಲ್ಲಿ ಕೋರ್ಟ್‌ಗೆ ರಜೆ ಇರುತ್ತೆ. ಈ ಕಾರಣಕ್ಕೆ ಇಂದೇ ನ್ಯಾಯಾಧೀಶರ ಮುಂದೆ ದರ್ಶನ್ ಅಂಡ್ ಗ್ಯಾಂಗ್ ಅನ್ನು ಹಾಜರಿ ಪಡಿಸಲು ಪೊಲೀಸರು ಚಿಂತಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಪೊಲೀಸರು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಅಂತಾನೂ ಹೇಳಲಾಗುತ್ತಿದೆ.

Darshan Pavithra Gowda and other accused may sent to parappana agrahara jail

ಆರು ದಿನ ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ಪೊಲೀಸರು ಬಹುತೇಕ ತನಿಖೆಯನ್ನು ಮುಗಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದೇ (ಜೂನ್ 15) ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ನಿರ್ಧರಿಸಲಾಗಿದೆ. ಒಂದು ವೇಳೆ ದರ್ಶನ್ ಮತ್ತು ಗ್ಯಾಂಗ್‌ ಅನ್ನು ಇಂದೇ ನ್ಯಾಯಾಧೀಶರ ಮುಂದೆ ಪ್ರಡ್ಯೂಸ್ ಮಾಡಿದರೆ, ಮುಂದಿನ ಭವಿಷ್ಯ ಇಂದೇ ನಿರ್ಧಾರ ಆಗುವ ಎಲ್ಲಾ ಸಾಧ್ಯತೆಗಳಿವೆ.

ಕಳೆದ ಆರು ದಿನಗಳಲ್ಲಿ ದರ್ಶನ್ ಜೊತೆಗೆ ಆರೋಪಿಗಳಾಗಿರುವವರ ಹೇಳಿಕೆಗಳನ್ನು ದಾಖಲು ಮಾಡಲಾಗಿದೆ. ಹಾಗೇ ಕೊಲೆ ನಡೆದ ಸ್ಥಳ, ಮೃತದೇಹ ಪತ್ತೆಯಾಗಿದ್ದ ಸ್ಥಳ ಹಾಗೂ ಕಿಡ್ನ್ಯಾಪ್ ಮಾಡಿದ ಸ್ಥಳದ ಮಹಜರು ಕೂಡ ಮುಕ್ತಾಯಗೊಂಡಿದೆ. ಹಾಗೇ ಸಿಸಿಟಿವಿ ಪರಿಶೀಲನೆ, ಸಾಕ್ಷಿಗಳ ಕ್ರೂಢೀಕರಣವೂ ಕೆಲಸ ಕೂಡ ಮುಗಿದಿದೆ ಎನ್ನಲಾಗುತ್ತಿದೆ.

ಹೀಗಾಗಿ ಒಂದ್ವೇಳೆ ಪೊಲೀಸರು ಇಂದೇ (ಜೂನ್ 15) ದರ್ಶನ್ ಅಂಡ್ ಗ್ಯಾಂಗ್ ಅನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಬಹುದು. ಇಲ್ಲಾ ನಾಳೆ ಭಾನುವಾರ ಆಗಿದ್ದರೂ ಪೊಲೀಸ್ ಕಸ್ಟಡಿಯ ಅವಧಿ ಮುಗಿಯುವುದರಿಂದ ನ್ಯಾಯಾಧೀಶರ ಮನೆಗೆ ಕರೆದುಕೊಂಡು ಹೋಗುವ ಸಾಧ್ಯತೆಯಿದೆ ಅಂತಾನೂ ಹೇಳಲಾಗುತ್ತಿದೆ.

ಈ ಸಂದರ್ಭದಲ್ಲಿ ದರ್ಶನ್ ಒಬ್ಬ ಜನಪ್ರಿಯ ನಟ ಹಾಗೇ ಸಮಾಜದಲ್ಲಿ ಪ್ರಭಾವಿ ವ್ಯಕ್ತಿ. ಹೀಗಾಗಿ ಜೈಲಿನಿಂದ ಬಿಡುಗಡೆ ಮಾಡಬಾರದು. ಮಾಡಿದರೆ ತನಿಖೆಗೆ ತೊಂದರೆ ಆಗುವ ಸಾಧ್ಯತೆಯಿದೆ ಎಂದು ಪೊಲೀಸರು ನ್ಯಾಯಾಧೀಶರ ಮುಂದೆ ಬೇಡಿಕೆ ಇಡುವ ಸಾಧ್ಯತೆಯಿದೆ. ಹೀಗಾಗಿ ನ್ಯಾಯಾಧೀಶರು ಈ ಪ್ರಕರಣದ ಮತ್ತು ತನಿಖೆ ವೇಳೆ ಸಿಕ್ಕಿರುವ ಸಾಕ್ಷಿಗಳನ್ನು ಗಮನಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಸದ್ಯಕ್ಕೆ ದರ್ಶನ್ ಅಂಡ್ ಗ್ಯಾಂಗ್‌ ಬಿಡುಗಡೆ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಲವಾದ ಸಾಕ್ಷಿಗಳು ದರ್ಶನ್ ಅಂಡ್ ಗ್ಯಾಂಗ್ ಪರ ಸಿಕ್ಕಿದೆ ಎನ್ನುತ್ತಿವೆ ಮೂಲಗಳು. ಹೀಗಾಗಿ ಇಂದು ಅಥವಾ ನಾಳೆ ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಸಹಚರರನ್ನು ಕೋರ್ಟ್‌ಗೆ ಪ್ರಡ್ಯೂಸ್ ಮಾಡುವ ಸಾಧ್ಯತೆಗಳಿವೆ.

More from Filmibeat

English summary
Darshan Pavithra Gowda and other accused may sent to parappana agrahara jail
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X