ಮೊದಲ ಬಾರಿಗೆ ಮುಖಾ ಮುಖಿ; ಪವಿತ್ರಾ ಗೌಡ ಬೆನ್ನು ಸವರಿ ಸಂತೈಸಿದರೇ ದರ್ಶನ್?

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ದರ್ಶನ್ ಹಾಗೂ ಪವಿತ್ರಾ ಜಾಮೀನು ಪಡೆದು ಹೊರ ಬಂದಿದ್ದಾರೆ. ಆದರೆ, ಈ ವಿಷಯ ಎಷ್ಟು ಸದ್ದು ಮಾಡುತ್ತಿದೆಯೋ ಅದಕ್ಕೆ ಹೆಚ್ಚಾಗಿ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾ ಮುಖಿ ಆಗಿದ್ದು ಹೆಚ್ಚು ಚರ್ಚೆಯಲ್ಲಿದೆ. ಜೈಲು ಸೇರಿದ ಬಳಿಕ ಇಬ್ಬರೂ ನ್ಯಾಯಾಲಯದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಭೇಟಿಯಾಗಿದ್ದಾರೆ.

ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರು ಸಾರ್ವಜನಿಕವಾಗಿ ಮುಖಾ ಮುಖಿಯಾದಾಗ ಇಬ್ಬರ ಪ್ರತಿಕ್ರಿಯೆ ಏನಿತ್ತು? ಇಬ್ಬರ ನಡುವಿನ ಸಂಭಾಷಣೆ ಏನಿತ್ತು? ಅನ್ನೋದನ್ನು ಮಾಧ್ಯಮಗಳು ವರದಿ ಮಾಡಿವೆ. ಇಂದು (ಜನವರಿ 10) ರೇಣುಕಾಸ್ವಾಮಿ ಕೇಸ್ ವಿಚಾರಣೆ ಸಂಬಂಧ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಪ್ರಮುಖ ಆರೋಪಿಗಳು ನ್ಯಾಯಾಲಯಕ್ಕೆ ಆಗಮಿಸಿದ್ದರು.

Darshan-Pavithra Gowda face to face in Bengaluru court for the first time after the Renukaswamy case

ರೇಣುಕಾಸ್ವಾಮಿ ಕೇಸ್ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಹಿಂದಿನಂತೆ ಉಳಿದಿಲ್ಲ. ಜಾಮೀನು ಸಿಕ್ಕಿದ ಬಳಿಕ ಇಬ್ಬರೂ ಭೇಟಿಯಾಗಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದರೆ, ಕೋರ್ಟ್ ಒಳಗೆ ಇಬ್ಬರ ನಡುವೆ ಕೆಲವು ಹೊತ್ತು ಮಾತುಕತೆ ನಡೆದಿದೆ ಎಂದು ವರದಿಯಾಗಿದೆ. ಹಾಗಿದ್ದರೆ, ನ್ಯಾಯಾಲಯದಲ್ಲಿ ಮುಖಾ ಮುಖಿಯಾದ ದರ್ಶನ್ ಹಾಗೂ ಪವಿತ್ರಾ ಗೌಡ ರಿಯಾಕ್ಷನ್ ಹೇಗಿತ್ತು? ತಿಳಿಯಲು ಮುಂದೆ ಓದಿ.

ಈಗಾಗಲೇ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಪ್ರಮುಖ ಆರೋಪಿಗಳು ಬೇಗನೇ ಕೋರ್ಟ್‌ನಲ್ಲಿ ಹಾಜರಿದ್ದರು. ಆದರೆ, ಸಿಸಿಎಚ್ 57 ಕೋರ್ಟ್‌ಗೆ ಕೊಂಚ ತಡವಾಗಿ ದರ್ಶನ್ ಎಂಟ್ರಿ ಕೊಟ್ಟರು. ನ್ಯಾಯಾಧೀಶರು ಇವರ ಕೇಸ್ ಅನ್ನು ತೆಗೆದುಕೊಳ್ಳುವುದಕ್ಕೆ ಸ್ವಲ್ಪ ಸಮಯವಿತ್ತು. ಈ ವೇಳೆ ಪವಿತ್ರಾ ಗೌಡ ಹಾಗೂ ದರ್ಶನ್ ಇಬ್ಬರೂ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ಎನ್ನಲಾಗಿದೆ.

ದರ್ಶನ್ ಬಂದ ಕೂಡಲೇ ಪವಿತ್ರಾ ಗೌಡ ಆರೋಗ್ಯ ವಿಚಾರಿಸಿದ್ದರು. ದರ್ಶನ್ ಬೆನ್ನು ನೋವು ಹಾಗೂ ಕಾಲಿನ ಸಮಸ್ಯೆ ಹೇಗಿದೆ ಅಂತ ಪವಿತ್ರಾ ಗೌಡ ಚಾರಿಸಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಒಂದಷ್ಟು ಹೊತ್ತು ಮಾತುಕತೆ ನಡೆದಿದ್ದು, ಪವಿತ್ರಾ ಗೌಡ ಅವರ ಬೆನ್ನು ಸವರಿ ದರ್ಶನ್ ಸಂತೈಸಿದ್ದರು ಎಂದು ಟಿವಿ9 ವರದಿ ಮಾಡಿದೆ. ಸಾರ್ವಜನಿಕವಾಗಿ ಇದು ಮೊದಲ ಮುಖಾ ಮುಖಿಯಾಗಿದ್ದು, ಈ ಜೋಡಿಯ ನಡೆ ಕುತೂಹಲ ಮೂಡಿಸಿದೆ.

ದರ್ಶನ್ ನೋಡುತ್ತಿದ್ದಂತೆ ಪವಿತ್ರಾ ಗೌಡ ಗಳಗಳನೇ ಕಣ್ಣೀರು ಹಾಕಿದ್ದರು. ದರ್ಶನ್ ನೋಡಿದ ಖುಷಿಗೋ ಕಣ್ಣೀರು ಹಾಕಿದರೋ ಇಲ್ಲ, ವಿಚಾರಣೆಗೆ ಕರೆದರು ಅಂತ ಕಣ್ಣೀರು ಹಾಕಿದ್ದಾರೋ ಅಂತ ಪವರ್‌ ಟಿವಿ ವರದಿ ಮಾಡಿದೆ. ಇನ್ನು ನ್ಯಾಯಾಧೀಶರ ಎಲ್ಲಾ ಆರೋಪಿಗಳನ್ನು ಗಣನೆಗೆ ತೆಗೆದುಕೊಂಡು, ವಿಚಾರಣೆಯನ್ನು ಮುಂದಿನ ತಿಂಗಳು ಅಂದರೆ, ಫೆಬ್ರವರಿ 25ಕ್ಕೆ ಮುಂದೂಡಿದ್ದಾರೆ. ಈ ವೇಳೆ ದರ್ಶನ್, ಪವಿತ್ರಾ ಗೌಡ, ಪ್ರದೋಶ್, ವಿನಯ್, ನಾಗರಾಜು ಸೇರಿದಂತೆ ಎಲ್ಲ ಆರೋಪಿಗಳ ಉಪಸ್ಥಿತಿ ಇತ್ತು.

ಇನ್ನು ಪವಿತ್ರಾ ಗೌಡ ಟೆಂಪಲ್ ರನ್ ಮಾಡುವುದಕ್ಕೆ ಬೇರೆ ರಾಜ್ಯಗಳ ಪ್ರವಾಸಕ್ಕೆ ಅನುಮತಿ ನೀಡುವಂತೆ ಕೋರಿಕೊಂಡಿದ್ದಾರೆ ಎಂದೂ ವರದಿಯಾಗಿದೆ. ಸದ್ಯ ಪವಿತ್ರಾ ಗೌಡ ಹಾಗೂ ದರ್ಶನ್ ಮುಖಾ ಮುಖಿ ಹೇಗಿರುತ್ತೆ ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ. ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿರುವ ದರ್ಶನ್ ಆರೋಗ್ಯ ಸುಧಾರಿಸಿದ ಬಳಿಕ ಮತ್ತೆ ಡೆವಿಲ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

More from Filmibeat

English summary
Darshan-Pavithra Gowda face to face in Bengaluru court for the first time after the Renukaswamy case;
Read more about: darshan pavithra gowda sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X