For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' ಸೆಟ್ ನಲ್ಲಿ 'ಪವಿತ್ರ' ದರ್ಶನ ಫೋಟೋ ಲೀಕ್: ಮುನಿರತ್ನ ಆಕ್ರೋಶ

  By ಫಿಲ್ಮಿಬೀಟ್ ಡೆಸ್ಕ್
  |

  'ಕುರುಕ್ಷೇತ್ರ' ಸಿನಿಮಾ ಅನೌನ್ಸ್ ಆದಾಗಿನಿಂದಲೂ, ಚಿತ್ರದ ಬಗ್ಗೆ ಇಡೀ ಕರ್ನಾಟಕದಲ್ಲಿ ಕುತೂಹಲ ಗರಿಗೆದರಿದೆ. 'ದುರ್ಯೋಧನ'ನಾಗಿ ದರ್ಶನ್ ಹೇಗ್ ಕಾಣ್ತಾರೆ, ಈ ಪೌರಾಣಿಕ ಚಿತ್ರದ ಸೆಟ್ ಹೇಗಿರಬಹುದು, ಕಾಸ್ಟ್ಯೂಮ್ಸ್ ಹೇಗಿವೆ ಎಂಬ ಕೌತುಕ ಸಹಜವಾಗಿ ಎಲ್ಲರಲ್ಲೂ ಕಾಡುತ್ತಿದೆ. ಅಭಿಮಾನಿಗಳ ಕುತೂಹಲ ತಣಿಸಲು 'ಕುರುಕ್ಷೇತ್ರ' ಅಂಗಳದಿಂದ ಆಗಾಗ ಕೆಲ ಫೋಟೋಗಳು ಬಹಿರಂಗ ಆಗುತ್ತಿತ್ತು.

  ಆದ್ರೆ, ನಿನ್ನೆ (ಸೆಪ್ಟೆಂಬರ್ 19) 'ಕುರುಕ್ಷೇತ್ರ' ಅಡ್ಡದಿಂದ ಲೀಕ್ ಆದ ಕೆಲ ಫೋಟೋಗಳು ವೈರಲ್ ಆಗಿರುವಷ್ಟು ಬೇರಾವ ಫೋಟೋ ಕೂಡ ಸದ್ದು ಮಾಡಿಲ್ಲ. ಅದಕ್ಕೆಲ್ಲ ಕಾರಣ ಒನ್ ಅಂಡ್ ಒನ್ಲಿ 'ಪವಿತ್ರ' ದರ್ಶನ.!

  'ಕುರುಕ್ಷೇತ್ರ' ಶೂಟಿಂಗ್ ಸೆಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಜೊತೆ ನಟಿ ಪವಿತ್ರ ಗೌಡ ಇದ್ದ ಕೆಲ ಫೋಟೋಗಳು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಯದ್ವಾತದ್ವಾ ಸೌಂಡ್ ಮಾಡಿತ್ತು. ಈಗ ಇದೇ ಫೋಟೋಗಳ ಬಗ್ಗೆ ನಿರ್ಮಾಪಕ ಮುನಿರತ್ನ ಗರಂ ಆಗ್ಬಿಟ್ಟಿದ್ದಾರೆ. ಮುಂದೆ ಓದಿರಿ....

  'ಕುರುಕ್ಷೇತ್ರ' ಅಡ್ಡದಲ್ಲಿ ಪವಿತ್ರ ಗೌಡ ಪ್ರತ್ಯಕ್ಷ

  'ಕುರುಕ್ಷೇತ್ರ' ಅಡ್ಡದಲ್ಲಿ ಪವಿತ್ರ ಗೌಡ ಪ್ರತ್ಯಕ್ಷ

  'ಮುನಿರತ್ನ ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಸದ್ಯ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಇದೇ ಸ್ಪಾಟ್ ನಲ್ಲಿ ನಟಿ ಪವಿತ್ರ ಗೌಡ ಪ್ರತ್ಯಕ್ಷವಾಗಿದ್ದರು. ಆ ಫೋಟೋಗಳು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ನಿನ್ನೆ ಲೀಕ್ ಆಗಿತ್ತು.

  ಮುನಿರತ್ನ ಆಕ್ರೋಶ

  ಮುನಿರತ್ನ ಆಕ್ರೋಶ

  'ಕುರುಕ್ಷೇತ್ರ' ಚಿತ್ರದ ಸೆಟ್ ಒಳಗೆ ಅಷ್ಟು ಸುಲಭವಾಗಿ ಯಾರನ್ನೂ ಬಿಡುತ್ತಿಲ್ಲ. ಬಿಟ್ಟರೂ, ಫೋಟೋ ತೆಗೆಯುವ ಪರ್ಮಿಷನ್ ಯಾರಿಗೂ ಇಲ್ಲ. ಹೀಗಿದ್ದರೂ, ಫೋಟೋಗಳನ್ನ ತೆಗೆದು ಅದನ್ನ ವೈರಲ್ ಮಾಡಿರುವ ವಿಚಾರಕ್ಕೆ ನಿರ್ಮಾಪಕ ಮುನಿರತ್ನ ಕೋಪಗೊಂಡಿದ್ದಾರೆ.

  ಪೊಲೀಸ್ ಕಂಪ್ಲೇಂಟ್ ಕೊಡುವೆ

  ಪೊಲೀಸ್ ಕಂಪ್ಲೇಂಟ್ ಕೊಡುವೆ

  ''ನಮ್ಮ ಸೆಟ್ ನಲ್ಲಿ ನನ್ನ ಪರ್ಮಿಷನ್ ಇಲ್ಲದೆ ಫೋಟೋ ತೆಗೆದ ವಿಚಾರವಾಗಿ ನಾನು ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ. ಅನುಮತಿ ಇಲ್ಲದೆ ಫೋಟೋ ತೆಗೆದವರು ಯಾರು ಅನ್ನೋದು ಗೊತ್ತಿಲ್ಲ. ನಮ್ಮ ಚಿತ್ರದ ಗೌಪ್ಯತೆ ಹೊರ ಹಾಕಿದ್ದಕ್ಕೆ ಬೇಸರ ಆಗಿದೆ. ಹೀಗಾಗಿ ಕ್ರಿಮಿನಲ್ ದೂರು ದಾಖಲಿಸುವೆ'' ಎನ್ನುತ್ತಾರೆ ನಿರ್ಮಾಪಕ ಮುನಿರತ್ನ.

  ಶಿಕ್ಷೆ ಕೊಡಿಸದೆ ಬಿಡುವುದಿಲ್ಲ

  ಶಿಕ್ಷೆ ಕೊಡಿಸದೆ ಬಿಡುವುದಿಲ್ಲ

  ''ಫೋಟೋ ತೆಗೆದವರು ಎಷ್ಟೇ ದೊಡ್ಡವರಾದರೂ ಕ್ರಮ ಕೈಗೊಳ್ಳುವವರೆಗೂ ಹೋರಾಟ ನಡೆಸುವೆ. ಶಿಕ್ಷೆ ಕೊಡಿಸದೆ ಬಿಡುವುದಿಲ್ಲ'' ಎಂದು ಇಂದು ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.

  ಯಾರೀ ಪವಿತ್ರ ಗೌಡ.?

  ಯಾರೀ ಪವಿತ್ರ ಗೌಡ.?

  'ಛತ್ರಿಗಳು ಸಾರ್ ಛತ್ರಿಗಳು' ಎಂಬ ಚಿತ್ರದಲ್ಲಿ ನಟಿ ಪವಿತ್ರ ಗೌಡ ಅಭಿನಯಿಸಿದ್ದರು. ಸಿನಿಮಾಗಳ ಮೂಲಕ ಅಷ್ಟು ಸದ್ದು ಮಾಡದ ನಟಿ ಪವಿತ್ರ ಗೌಡ ಇದೀಗ 'ವೈಯುಕ್ತಿಕ' ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

  ಏನೇನೋ ಸುದ್ದಿ

  ಏನೇನೋ ಸುದ್ದಿ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ತಾವಿರುವ ಫೋಟೋ ಒಂದನ್ನ ಸ್ವತಃ ನಟಿ ಪವಿತ್ರ ಗೌಡ ಕೆಲ ದಿನಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದಾದ್ಮೇಲೆ, ಇಬ್ಬರ ನಡುವೆ ಏನಿದೆ ಏನಿಲ್ಲ ಎಂಬ ಗುಸು ಗುಸು ಗಾಂಧಿನಗರದ ಮೂಲೆಮೂಲೆಯಲ್ಲಿಯೂ ಕೇಳಿಬಂದಿತ್ತು. ಇದೀಗ 'ಕುರುಕ್ಷೇತ್ರ' ಅಡ್ಡದಲ್ಲೂ ಪವಿತ್ರ ಗೌಡ ಕಾಣಿಸಿಕೊಂಡಿರುವುದರಿಂದ ಚರ್ಚೆ ಸ್ವಲ್ಪ ಜೋರಾಗಿದೆ. ಇನ್ನೂ ಮುನಿರತ್ನ ಕೂಡ ಆಕ್ರೋಶಗೊಂಡು ಕಂಪ್ಲೇಂಟ್ ಕೊಡುವುದಾಗಿ ಹೇಳ್ತಿದ್ದಾರೆ. ಮುಂದೆ ಏನೇನಾಗುತ್ತೋ.?!

  English summary
  Producer Munirathna is furious against the photos of his Kannada movie 'Kurukshetra' was leaked online yesterday (September 19th) without his permission.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X