TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸುದೀಪ್ ಮನೆಯಲ್ಲಿ ಈಗಲೂ ದರ್ಶನ್ ಫೋಟೋ ಇದೆಯಂತೆ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಒಂದು ಸಮಯದಲ್ಲಿ ಬೆಸ್ಟ್ ಫ್ರೆಂಡ್ಸ್. ಡಾ ವಿಷ್ಣುವರ್ಧನ್ ಮತ್ತು ಅಂಬರೀಶ್ ನಂತರ ಆ ರೀತಿಯಾದ ಸ್ನೇಹ ಇವರಿಬ್ಬರಲ್ಲಿ ಇದೆ ಎಂದೇ ಇಡೀ ಇಂಡಸ್ಟ್ರಿ ಮಾತನಾಡಿಕೊಳ್ಳುತ್ತಿದ್ದರು.
ಹೀಗಿರುವಾಗಲೇ ಅದ್ಯಾವುದೋ ಕಾರಣಕ್ಕೆ ಇವರಿಬ್ಬರ ನಡುವೆ ಮನಸ್ತಾಪ ಉಂಟಾಯಿತು. ಸದಾ ಒಟ್ಟಿಗೆ ಓಡಾಡ್ತಿದ್ದ ದಚ್ಚು-ಕಿಚ್ಚ ಇದ್ದಕ್ಕಿದ್ದಂತೆ ದೂರವಾದರು. ಒಟ್ಟಿಗೆ ಯಾವ ವೇದಿಕೆಯಲ್ಲೂ ಕಾಣಿಸಿಕೊಳ್ಳಲಿಲ್ಲ.
ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ ಟ್ವೀಟ್
ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡುವುದು ಬಿಟ್ಟರು. ಒಬ್ಬರ ಸಿನಿಮಾವನ್ನ ಇನ್ನೊಬ್ಬರು ಪ್ರಮೋಟ್ ಮಾಡುವುದು ಬಿಟ್ಟರು. ಅಲ್ಲಿಗೆ ಎಲ್ಲವೂ ಮುಗಿದು ಹೋಯಿತು. ಇವರಿಬ್ಬರದ್ದು ಮತ್ತೆ ಸೇರದ ಸ್ನೇಹ ಎನ್ನಲಾಗುತ್ತಿದೆ. ಬಟ್, ಅದನ್ನ ಸುದೀಪ್ ಸುಳ್ಳು ಮಾಡುತ್ತಿದ್ದಾರೆ. ಮುಂದೆ ಓದಿ.....
ಎಲ್ಲೂ ಬಿಟ್ಟುಕೊಟ್ಟಿಲ್ಲ ಸುದೀಪ್-ದರ್ಶನ್
ಇಬ್ಬರ ನಡುವೆ ಮನಸ್ತಾಪ ಉಂಟಾದ ಮೇಲೂ, ಒಬ್ಬರನ್ನ ಒಬ್ಬರು ಬಿಟ್ಟುಕೊಟ್ಟಿಲ್ಲ. ದರ್ಶನ್ ಟ್ವೀಟ್ ಮಾಡಿದ್ದು ಬಿಟ್ಟರೇ ಅದಾದ ಬಳಿಕ ಸುದೀಪ್ ಬಗ್ಗೆ ಏನೂ ಮಾತಾಡಿಲ್ಲ. ಅದೇ ರೀತಿ ಸುದೀಪ್ ಕೂಡ ಇದುವರೆಗೂ ದರ್ಶನ್ ಬಗ್ಗೆ ಆಗಲಿ ಅಥವಾ ಅವರಿಬ್ಬರ ಸ್ನೇಹದಲ್ಲಿ ಮೂಡಿರುವ ಬಿರುಕಿಗೆ ಕಾರಣವೇನು ಎಂಬುದರ ಬಗ್ಗೆ ನೆಗಿಟೀವ್ ಆಗಿ ಚರ್ಚೆ ಮಾಡೇ ಇಲ್ಲ. ದರ್ಶನ್ ನನ್ನ ಒಳ್ಳೆಯ ಫ್ರೆಂಡ್ ಎಂದೇ ಹೇಳಿದ್ದಾರೆ.
ಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನ
ಸುದೀಪ್ ಮನೆಯಲ್ಲಿ ದರ್ಶನ್ ಫೋಟೋ ಇದೆ
ದರ್ಶನ್ ಮತ್ತು ಸುದೀಪ್ ನಡುವೆ ಅದ್ಯಾವುದೋ ಕಾರಣಕ್ಕೆ, ಅದೇನೋ ಆಗೋಗಿದೆ ಎನ್ನುವುದಾದರೇ ಒಬ್ಬರ ಮುಖ ಇನ್ನೊಬ್ಬರು ನೋಡುತ್ತಿರಲಿಲ್ಲ. ಬಟ್, ಹಾಗೆ ಆಗಿಲ್ಲ. ಯಾರಿಗೂ ಗೊತ್ತಿಲ್ಲದೇ ವಿಷ್ಯ ಅಂದ್ರೆ, ಸುದೀಪ್ ಮನೆಯಲ್ಲಿ ಈಗಲೂ ದರ್ಶನ್ ಅವರ ಫೋಟೋ ಇದೆಯಂತೆ. ಮನೆಗೆ ಹೋದವರಿಗೆ ಸುದೀಪ್ ಮತ್ತು ದರ್ಶನ್ ಒಟ್ಟಿಗೆ ಇರುವ ಫೋಟೋ ಕಾಣಿಸುತ್ತೆ.
'ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!
ದಿಗ್ಗಜರ ಫೋಟೋ ಇದೆ
ಅಂದ್ಹಾಗೆ, ಸುದೀಪ್ ಮನೆಯಲ್ಲಿ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಹಲವು ದಿಗ್ಗಜರ ಫೋಟೋ ಇದೆ. ಅದಕ್ಕಾಗಿ ಒಂದು ವಿಶೇಷ ಸ್ಥಾನವಿದೆ. ರಾಜ್, ವಿಷ್ಣು, ಶಂಕರ್ ನಾಗ್, ಅನಂತ್ ನಾಗ್, ಶಿವರಾಜ್ ಕುಮಾರ್ ಹೀಗೆ ಬಹುತೇಕರ ಫೋಟೋ ಇದೆ. ಆದ್ರೆ, ಸುದೀಪ್ ಮತ್ತು ದರ್ಶನ್ ಫೋಟೋ ಕೂಡ ಇನ್ನೊಂದು ಕಡೆ ಇದೆ ಎಂದು ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಬಹಿರಂಗವಾಯಿತು.
'ಮದಕರಿ' ಚಿತ್ರವನ್ನ ಕೈಬಿಡಲು ಕಾರಣ ಬಿಚ್ಚಿಟ್ಟ ಸುದೀಪ್
ದರ್ಶನ್ ಮನೆಯಲ್ಲೂ ಇರಬಹುದು?
ಸುದೀಪ್ ಮನೆಯಲ್ಲಿ ಹೇಗೆ ದರ್ಶನ್ ಫೋಟೋ ಇದೆಯೋ ಅದೇ ರೀತಿ ದರ್ಶನ್ ಅವರ ಮನೆಯಲ್ಲೂ ಸೇಮ್ ಫೋಟೋ ಇರಬಹುದು. ಇರುತ್ತೆ ಎಂಬ ನಂಬಿಕೆ ಅಭಿಮಾನಿಗಳದ್ದು.
ದರ್ಶನ್ ಬಗ್ಗೆ ನಾನು ಕೆಟ್ಟದ್ದು ಮಾತಾಡಿಲ್ಲ, ಅನ್ ಫಾಲೋ ಮಾಡಿಲ್ಲ
ಸಮಯ ಬರಬೇಕು
ಇಬ್ಬರು ಒಟ್ಟಿಗೆ ಯಾವಾಗ ಕಾಣಿಸಿಕೊಳ್ಳುತ್ತೀರಾ ಎಂದು ಸುದೀಪ್ ಅವರನ್ನ ಕೇಳಿದ್ರೆ, ''ಮನಸ್ತಾಪಕ್ಕೆ ಕಾರಣವೇನು ಎಂಬುದೇ ನನಗೆ ಗೊತ್ತಿಲ್ಲ. ಗೊತ್ತಾದ್ರೆ ಮಾತಾಡಬಹುದು, ಅದನ್ನ ಹೊರತು ನಮ್ಮಿಬ್ಬರ ಮಧ್ಯೆ ಏನೂ ಆಗಿಲ್ಲ. ಇಷ್ಟವಿಲ್ಲದ ಸ್ನೇಹವನ್ನ ಬಲವಂತವಾಗಿ ಮಾಡುವುದು ಕಷ್ಟ'' ಎಂದು ಹೇಳಿದ್ದಾರೆ. ಬಟ್, ಇದೆಕ್ಕೆಲ್ಲಾ ಸಮಯ ಬರಬೇಕು. ಆ ಸಮಯ ಬಂದಾಗ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ, ಒಟ್ಟಿಗೆ ಸಿನಿಮಾನೂ ಮಾಡ್ತಾರೆ.