For Quick Alerts
  ALLOW NOTIFICATIONS  
  For Daily Alerts

  ಅವಳಿ ಮಕ್ಕಳ ಜೊತೆ ಡಿ ಬಾಸ್ ದರ್ಶನ್ ಫೋಟೋ ವೈರಲ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈಯಕ್ತಿಕ ಜೀವನದಲ್ಲಿ ರಗಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ ಹೆಚ್ಚು ಸಮಯ ಇರಲ್ಲ. ಮದುವೆ, ಹುಟ್ಟುಹಬ್ಬ ಕಾರ್ಯಕ್ರಮಗಳಿಗೆ ಹೊರಟರು ಹೆಚ್ಚಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲ್ಲ.

  ಡಿ ಬಾಸ್‌ಗೆ ಮಕ್ಕಳಂದ್ರೆ ಬಹಳ ಇಷ್ಟ. ಸ್ನೇಹಿತರು, ನಿರ್ಮಾಪಕರು ಹಾಗೂ ಸಹ ನಟರ ಮನೆಗಳಿಗೆ ಹೋದಾಗ ಅವರ ಮಕ್ಕಳ ಜೊತೆ ಮಗುವಿನಂತೆ ಆಟವಾಡುವ ಕೆಲವು ಫೋಟೋ ಮತ್ತು ದೃಶ್ಯಗಳು ಈ ಹಿಂದೆಯೂ ವೈರಲ್ ಆಗಿದೆ.

  ಶಂಕರ್ ನಾಗ್ ಹುಟ್ಟುಹಬ್ಬ: 'ಆಟೋರಾಜ'ನನ್ನು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  ಇದೀಗ, ಅವಳಿ ಮಕ್ಕಳ ಜೊತೆ ಡಿ ಬಾಸ್ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.

  ಹೌದು, ಅವಳಿ ಮಕ್ಕಳ ಜೊತೆ ದರ್ಶನ್ ಕಾಣಿಸಿಕೊಂಡಿದ್ದು, ಈ ಮಕ್ಕಳ ಯಾರು ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಸದ್ಯಕ್ಕೆ ಇವರು ಯಾರ ಮಕ್ಕಳು ಎನ್ನುವುದು ತಿಳಿದಿಲ್ಲ. ಆದ್ರೆ, ಅವಳಿ ಮಕ್ಕಳ ಬಹಳ ಮುದ್ದಾಗಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಇನ್ನುಳಿದಂತೆ ದರ್ಶನ್ ನಟನೆಯ 'ರಾಬರ್ಟ್' ಚಿತ್ರೀಕರಣ ಮುಗಿದಿದೆ. 'ಗಂಡುಗಲಿ ಮದಕರಿ' ನಾಯಕ ಚಿತ್ರೀಕರಣ ಆರಂಭವಾಗಿದೆ. ಈ ನಡುವೆ ಆರ್ ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಿದ್ದರು.

  English summary
  Challening star Darshan photo with 2 cute twin childrens goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X