ಉಮಾಪತಿ ಶ್ರೀನಿವಾಸ್ 'ಏರಿಯಾ'ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ ; ಏನಾಗುತ್ತೋ ಏನೋ..?

By ಫಿಲ್ಮೀ ಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ಅವರ ನಡುವಿನ ಹಗೆತನದ ಕಥೆ ಇಂದು ಮುಂದುವರೆಯಲಿದೆ. ಇಬ್ಬರ ನಡುವಿನ ದ್ವೇಷಕ್ಕೆ ಬೊಮ್ಮನಹಳ್ಳಿ ಸಾಕ್ಷಿಯಾಗಲಿದೆ.

ಹೌದು, ನಿಮಗೆ ನೆನಪಿರಲಿ, ಉಮಾಪತಿ ಶ್ರೀನಿವಾಸ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಉಮಾಪತಿ ಶ್ರೀನಿವಾಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಕಣದಲ್ಲಿದ್ದರು. ವಿಶೇಷ ಅಂದರೆ ಅವತ್ತು ಕೂಡ ಉಮಾಪತಿಗೆ ಸೆಡ್ಡು ಹೊಡೆದು ದರ್ಶನ್ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಫಲಿತಾಂಶ ಉಮಾಪತಿ ಶ್ರೀನಿವಾಸ್ ಆ ಚುನಾವಣೆಯಲ್ಲಿ ಸೋತಿದ್ದರು.

Darshan plans bike rally in umapathy srinivass assembly constituency

ಈಗ ಹಳೆಯದನ್ನೆಲ್ಲ ಮರೆತು ಮುಂದಿನ ವಿಧಾನಸಭೆ ಚುನಾವಣೆಗೆ ಉಮಾಪತಿ ತಯಾರಾಗುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಬೈಕ್ ರ್‍ಯಾಲಿ ಹಮ್ಮಿಕೊಂಡಿದ್ದಾರೆ. ಬೊಮ್ಮನಳ್ಳಿ ಮಹಾ ಗಣಪತಿ ದೇವಸ್ಥಾನದಿಂದ ಎಚ್ ಎಸ್ ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್‌ವರೆಗೆ ನಡೆಯಲಿರುವ ಈ ಬೈಕ್ ರ್‍ಯಾಲಿಯಲ್ಲಿ ಸಹಜವಾಗಿ ದರ್ಶನ್​ ಅವರ ಅಸಂಖ್ಯಾತ ಅಭಿಮಾನಿಗಳು ಭಾಗಿಯಾಗಲಿದ್ದಾರೆ. ಗೊತ್ತಿಲ್ಲ. ಉಮಾಪತಿ ಶ್ರೀನಿವಾಸ್ ಬೆಂಬಲಿಗರು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಗಲಾಟೆ ನಡೆದರೂ ನಡೆಯಬಹುದು. ಈ ಸಾಧ್ಯತೆಯೂ ಇದೆ

ಇನ್ನೂ ಉಮಾಪತಿ ಶ್ರೀನಿವಾಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಲೆಂದೇ ದರ್ಶನ್ ಈ ಬೈಕ್ ರ್‍ಯಾಲಿ ಮಾಡುತ್ತಿದ್ದಾರಾ ಗೊತ್ತಿಲ್ಲ. ಆದರೆ ದರ್ಶನ್ ಬೇಕು ಬೇಕಂತಲೇ ಇದೆಲ್ಲ ಮಾಡ್ತಿದ್ದಾರೆ ಅನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಒಂಟಿ ಸಲಗ' ಹೆಸರಲ್ಲಿ ಬೃಹತ್ ರ‍್ಯಾಲಿ ನಡೆಸಲು ದರ್ಶನ್ ಫ್ಯಾನ್ಸ್ ತಯಾರಿ ನಡೆಸುತ್ತಿದ್ದಾರೆ. ಡಿಬಾಸ್ ಫ್ಯಾನ್ಸ್ ಟೀಮ್‌ಗೆ ಒಂಟಿ ಸಲಗ ಎಂದು ಹೆಸರಿಟ್ಟಿದ್ದಾರೆ.

Darshan plans bike rally in umapathy srinivass assembly constituency

ಉಮಾಪತಿಗೆ ತಗಡು ಎಂದಿದ್ದ ದರ್ಶನ್..!

ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್‌ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ? ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ... ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್‌ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

More from Filmibeat

English summary
Chellening Star Darshan And His Fans Planned a Bike Rally in Producer Umapathy Srinivass Assembly Constituency
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X