twitter
    For Quick Alerts
    ALLOW NOTIFICATIONS  
    For Daily Alerts

    'ಮೆಜಿಸ್ಟಿಕ್' ಚಿತ್ರಕ್ಕೂ ಮುಂಚೆ ದರ್ಶನ್ ನಟಿಸಿದ 6 ಚಿತ್ರಗಳು ಯಾವುದು?

    |

    'ಮೆಜೆಸ್ಟಿಕ್' ಚಿತ್ರದ ಮೂಲಕ ನಾಯಕನಟನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. ಕರ್ನಾಟಕದಲ್ಲಿ ಅತಿ ಹೆಚ್ಚು ಮಾಸ್ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಸಹ ಹೌದು.

    Recommended Video

    Unseen “Nightout” Behind the scene video | Filmibeat Kannada

    ಡಿ ಬಾಸ್ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ನಟನಾಗಿ 23 ವರ್ಷ ಪೂರೈಸಿದ್ದಾರೆ. ದರ್ಶನ್ ನಟಿಸಿದ್ದ ಮೊಟ್ಟ ಮೊದಲ ಸಿನಿಮಾ ಬಿಡುಗಡೆಯಾಗಿ ಆಗಸ್ಟ್ 11ಕ್ಕೆ ಸರಿಯಾಗಿ 23 ವರ್ಷ ಆಗಲಿದೆ. ಈ ಸಂಭ್ರಮವನ್ನು ದಾಸನ ಭಕ್ತಗಣ ಸಾಮಾಜಿಕ ಜಾಲತಾಣದಲ್ಲಿ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.

    'ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ': ದರ್ಶನ್‌ಗೆ ಅಭಿಷೇಕ್ ಹೀಗೆ ಹೇಳಿದ್ದೇಕೆ?'ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ': ದರ್ಶನ್‌ಗೆ ಅಭಿಷೇಕ್ ಹೀಗೆ ಹೇಳಿದ್ದೇಕೆ?

    ಅಂದ್ಹಾಗೆ, ದರ್ಶನ್ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಮೆಜೆಸ್ಟಿಕ್. ಆದರೆ, ಮೆಜಿಸ್ಟಿಕ್ ಚಿತ್ರಕ್ಕೂ ಮುಂಚೆ ಆರು ಚಿತ್ರದಲ್ಲಿ ದರ್ಶನ್ ತೂಗುದೀಪ ನಟಿಸಿದ್ದರು. ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರಗಳು ಯಾವುದು ಎಂಬ ವಿವರ ಇಲ್ಲಿದೆ. ಮುಂದೆ ಓದಿ.....

    ಮಹಾಭಾರತದಲ್ಲಿ ದರ್ಶನ್

    ಮಹಾಭಾರತದಲ್ಲಿ ದರ್ಶನ್

    ಕಲಾ ಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನ ಮಾಡಿದ್ದ ಮಹಾಭಾರತ ಚಿತ್ರದಲ್ಲಿ ದರ್ಶನ್ ಮೊಟ್ಟ ಮೊದಲ ಸಲ ಬಣ್ಣ ಹಚ್ಚಿದ್ದರು. ಅದಕ್ಕೂ ಮುಂಚೆ ಲೈಟ್ ಬಾಯ್ ಆಗಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದರು. ದರ್ಶನ್ ಅವರನ್ನು ಗುರುತಿಸಿ ಎಸ್ ನಾರಾಯಣ್ ಮಹಾಭಾರತ ಚಿತ್ರದಲ್ಲಿ ಸಣ್ಣದೊಂದು ಪಾತ್ರಕ್ಕೆ ಆಯ್ಕೆ ಮಾಡಿಕೊಂಡರು. ವಿನೋದ್ ರಾಜ್ ನಾಯಕನಾಗಿದ್ದು, ಈ ಸಿನಿಮಾ 1997 ಆಗಸ್ಟ್ 11ರಂದು ಬಿಡುಗಡೆಯಾಗಿತ್ತು.

    'ದೇವರಮಗ'ನ ಜೊತೆ ದರ್ಶನ್!

    'ದೇವರಮಗ'ನ ಜೊತೆ ದರ್ಶನ್!

    ಡಿ ರಾಜೇಂದ್ರಬಾಬು ನಿರ್ದೇಶನ ಮಾಡಿದ್ದ ದೇವರ ಮಗ ಚಿತ್ರದಲ್ಲಿ ದರ್ಶನ್ ಪೋಷಕ ನಟನಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿದ್ದರು. ಶಿವಣ್ಣನ ತಂದೆ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನಟಿಸಿದ್ದರು. ಈ ಕಾಂಬಿನೇಷನ್‌ ಜೊತೆ ದರ್ಶನ್ ನೆಗಿಟಿವ್ ಶೇಡ್‌ನಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದರು. ಈ ಸಿನಿಮಾ 2000 ಜೂನ್ 15 ರಂದು ತೆರೆಕಂಡಿತ್ತು.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಜತೆ ಬೌನ್ಸರ್‌ಗಳ ಕಿರಿಕ್ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಜತೆ ಬೌನ್ಸರ್‌ಗಳ ಕಿರಿಕ್

    ತಮಿಳಿನ ಚಿತ್ರದಲ್ಲಿ ದಾಸ

    ತಮಿಳಿನ ಚಿತ್ರದಲ್ಲಿ ದಾಸ

    ಅದೇ ವರ್ಷ ತಮಿಳಿನಲ್ಲಿ ಬಿಡುಗಡೆಯಾಗಿದ್ದ ವಲ್ಲರಸು ಚಿತ್ರದಲ್ಲಿ ದರ್ಶನ್ ಸಣ್ಣದೊಂದು ಪಾತ್ರ ನಿರ್ವಹಿಸಿದ್ದರು. ತಮಿಳು ಸ್ಟಾರ್ ವಿಜಯಕಾಂತ್ ನಾಯಕನಾಗಿದ್ದ ಈ ಚಿತ್ರದಲ್ಲಿ ದರ್ಶನ್ ನಾಯಕನ ಜೊತೆ ಕಾಣಿಸಿಕೊಂಡಿದ್ದರು. ದಾಸ ನಟಿಸಿದ ಮೊದಲ ಹಾಗೂ ಕೊನೆಯ ಪರಭಾಷಾ ಸಿನಿಮಾ ಇದಾಗಿದೆ.

    ಎಲ್ಲರ ಮನೆ ದೋಸೆನು

    ಎಲ್ಲರ ಮನೆ ದೋಸೆನು

    ರಾಮ್ ಕುಮಾರ್, ಶ್ರುತಿ, ಭಾವನಾ, ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಎಲ್ಲರ ಮನೆ ದೋಸೆನೂ...! ಚಿತ್ರದಲ್ಲೂ ದರ್ಶನ್ ಪೋಷಕ ನಟನಾಗಿ ಅಭಿನಯಿಸಿದ್ದರು. ಎಚ್ ಎಸ್ ಪ್ರಕಾಶ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಹಂಸಲೇಖ ಸಂಗೀತ ನೀಡಿದ್ದರು.

    ಮಿಸ್ಟರ್ ಹರಿಶ್ಚಂದ್ರ

    ಮಿಸ್ಟರ್ ಹರಿಶ್ಚಂದ್ರ

    ಮೋಹನ್, ಅನು ಪ್ರಭಾಕರ್, ಎಸ್ ನಾರಾಯಣ್, ಧಾಮಿನಿ, ಸುಮಿತ್ರ ನಟಿಸಿದ್ದ ಮಿಸ್ಟರ್ ಹರಿಶ್ಚಂದ್ರ ಚಿತ್ರದಲ್ಲಿ ನಟ ದರ್ಶನ್ ಸಣ್ಣದೊಂದು ಪಾತ್ರ ಮಾಡಿದ್ದರು. ಆರ್ ಸಿ ರಂಗ ಈ ಚಿತ್ರಕ್ಕೆ ಆಕ್ಟನ್ ಕಟ್ ಹೇಳಿದ್ದರು. ಹಂಸಲೇಖ ಸಂಗೀತ ನೀಡಿದ್ದರು.

    ಭೂತಯ್ಯನ ಮಕ್ಕಳ

    ಭೂತಯ್ಯನ ಮಕ್ಕಳ

    ಸೌರವ್ ನಾಯಕ ನಟನಾಗಿ ನಟಿಸಿದ್ದ ಭೂತಯ್ಯನ ಮಕ್ಕಳು ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಿಕೆ ಮುದ್ದುರಾಜ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಚೈತ್ರಾ, ಅನಂತ್ ನಾಗ್, ಲೋಕೇಶ್, ಶ್ರುತಿ, ಕವಿತಾ ಸೇರಿದಂತೆ ಹಲವರು ನಟಿಸಿದ್ದರು.

    English summary
    Darshan played supporting roles in Devara Maga, Ellara Mane Dosenu, Bhootayyana Makkalu and Mr. Harishchandra movie before he becoming Hero.
    Monday, August 17, 2020, 13:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X