ಈ ವರ್ಷ ನಿರಾಸೆ ಮೂಡಿಸಿದ ಪುನೀತ್-ದರ್ಶನ್-ಶ್ರೀಮುರಳಿ.!
Recommended Video

ದೊಡ್ಡ ಸ್ಟಾರ್ ಗಳು ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರೆ ಹೆಚ್ಚು. ಆ ಒಂದು ಚಿತ್ರಕ್ಕಾಗಿ ಅಭಿಮಾನಿ ಬಳಗ ಕಾಯ್ತಾ ಕೂತಿರುತ್ತೆ. ಹೀಗಿರುವಾಗ, ತಮ್ಮ ನೆಚ್ಚಿನ ನಟರ ಚಿತ್ರಗಳು ಬರದೇ ಇದ್ದಾಗ ಹೇಗಾಗಬೇಡ ಅಲ್ವಾ.!
ಈ ವರ್ಷ ಸದ್ದು ಮಾಡಿದ್ದು ಬಹುತೇಕ ಹೊಸಬರ ಸಿನಿಮಾಗಳೇ. ಈ ಮಧ್ಯೆ ಕೆಲವು ಬಿಗ್ ಸ್ಟಾರ್ ಗಳ ಚಿತ್ರಗಳು ಬಂದು, ಕೊಂಚ ಮಟ್ಟಿಗೆ ಖುಷಿ ನೀಡಿದೆ. ದಿ ವಿಲನ್, ಅಂಬಿ ನಿಂಗ್ ವಯಸ್ಸಾಯ್ತೋ, ಕೆಜಿಎಫ್, ಟಗರು ಸಿನಿಮಾಗಳೇ ಈ ವರ್ಷ ಬಿಗ್ ಮೂವೀಸ್.
ಕೆಲವು ಸ್ಟಾರ್ ಗಳು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದ್ರು, ಈ ವರ್ಷ ಯಾವ ಚಿತ್ರವೂ ತೆರೆಗೆ ಬಂದಿಲ್ಲ. ಇದು ಸಹಜವಾಗಿ ನಿರಾಸೆ ಮೂಡಿಸಿದೆ. ಹಾಗಿದ್ರೆ, ಈ ವರ್ಷ ಯಾವ ಯಾವ ಸ್ಟಾರ್ ಗಳು ಬರಲಿಲ್ಲ. ಯಾಕೆ ಬರಲಿಲ್ಲ? ಮುಂದೆ ಓದಿ....

'ದುರ್ಯೋಧನ' ಬಂದಿಲ್ಲ
ಎಲ್ಲ ಅಂದುಕೊಂಡಂತೆ ಆಗಿದ್ದರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಈ ವರ್ಷ ಬರಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ನಲ್ಲಿ ಹೆಚ್ಚು ಕೆಲಸವಿದ್ದ ಕಾರಣ ಆಗಲಿಲ್ಲ. ಸರಿ, ಅದಕ್ಕೂ ಮುಂಚೆ 'ಯಜಮಾನ' ಸಿನಿಮಾ ಬಂದು ಬಿಡುತ್ತೆ ಅಂದ್ರು. ಆದ್ರೆ, ದರ್ಶನ್ ಕಾರು ಅಪಘಾತಕ್ಕೆ ಒಳಗಾಗಿ ಕೆಲವು ದಿನ ವಿಶ್ರಾಂತಿ ಪಡೆದರು. ಹಾಗಾಗಿ, ಆ ಚಿತ್ರವೂ ಮುಂದಕ್ಕೆ ಹೋಯ್ತು. ಈಗ 'ಒಡೆಯ' ಕೂಡ ಆರಂಭವಾಗಿದೆ. ಬಟ್, ದರ್ಶನ್ ಸಿನಿಮಾ ಈ ವರ್ಷ ಬಂದಿಲ್ಲ ಅನ್ನೋದೇ ದೊಡ್ಡ ನಿರಾಸೆ. ಹಾಗ್ನೋಡಿದ್ರೆ, ಮುಂದಿನ ವರ್ಷ ಡಿ ಬಾಸ್ ಭಕ್ತರಿಗೆ ಭರ್ಜರಿ ಔತಣ.

ಪವರ್ ಸ್ಟಾರ್ ಮಿಸ್ ಆದ್ರು.!
ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾಗಳು ವರ್ಷಕ್ಕೆ ಒಂದು ಅಥವಾ ಎರಡು ಬರ್ತಿತ್ತು. ಆದ್ರೆ, ಈ ವರ್ಷ ಪುನೀತ್ ದರ್ಶನ ಕೊಡಲೇ ಇಲ್ಲ. 'ರಾಜಕುಮಾರ' ಯಶಸ್ಸಿನ ನಂತರ 'ನಟಸಾರ್ವಭೌಮ' ಶುರು ಮಾಡಿದ್ರು, ಈ ವರ್ಷ ತೆರೆಗೆ ಬರಲು ಸಾಧ್ಯವಾಗಲಿಲ್ಲ.

ಶ್ರೀಮುರಳಿ ಗೈರು
'ಮಫ್ತಿ' ಚಿತ್ರದ ಯಶಸ್ಸಿನ ನಂತರ ಶ್ರೀಮುರಳಿ 'ಭರಾಟೆ' ಸಿನಿಮಾ ಮಾಡ್ತಿದ್ದಾರೆ. ಬಟ್, ಈ ವರ್ಷ ಶ್ರೀಮುರಳಿ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಇದು ರೋರಿಂಗ್ ಸ್ಟಾರ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಧ್ರುವ ಸರ್ಜಾ ಎಂಟ್ರಿಯಾಗಿಲ್ಲ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಭರ್ಜರಿ' ಸಿನಿಮಾದ ಸಕ್ಸಸ್ ನಂತರ 'ಪೊಗರು' ಕೈಗೆತ್ತಿಕೊಂಡರು, ಈ ವರ್ಷ ಚಿತ್ರಮಂದಿರಕ್ಕೆ ಬರಲು ಆಗಲಿಲ್ಲ. ಬಹುಶಃ ಮುಂದಿನ ವರ್ಷಕ್ಕೆ ಭರ್ಜರಿ ಹುಡುಗನ ಎಂಟ್ರಿ ಆಗೋದು.

'ಹೋಮ್ ಮಿನಿಸ್ಟರ್' ಆಗಿಲ್ಲ ಉಪ್ಪಿ
ಉಪೇಂದ್ರ ಅಭಿನಯದ ಯಾವ ಚಿತ್ರವೂ ಈ ವರ್ಷ ಬಿಡುಗಡೆಯಾಗಿಲ್ಲ. 'ಹೋಮ್ ಮಿನಿಸ್ಟರ್' ಮತ್ತು 'ಉಪ್ಪಿ ರುಪಿ' ಚಿತ್ರಗಳು ಚಿತ್ರೀಕರಣ ಆಗಿತ್ತು. ಆಮೇಲೆ ಅದ್ಯಾಕೆ ಸೈಲೆಂಟ್ ಆಯ್ತೋ ಗೊತ್ತಿಲ್ಲ. ಈಗ 'ಐ ಲವ್ ಯೂ' ಸಿನಿಮಾ ಮುಗಿದಿದೆ. ಈ ವರ್ಷ ಬರಲ್ಲ ಅನ್ನೋದು ಗೊತ್ತಿದೆ. ಅಲ್ಲಿಗೆ ಈ ವರ್ಷ ಉಪ್ಪಿ ಫ್ಯಾನ್ಸ್ ಗೂ ನಿರಾಸೆ.

ಸೈಲೆಂಟ್ ಆದ ರಕ್ಷಿತ್
ಹಾಗ್ನೋಡಿದ್ರೆ, 'ಕಿರಿಕ್ ಪಾರ್ಟಿ' ಸಕ್ಸಸ್ ನಲ್ಲಿದ್ದ ರಕ್ಷಿತ್ ಶೆಟ್ಟಿ ಈ ವರ್ಷವೂ ಬರಲಿಲ್ಲ. ಕಳೆದ ವರ್ಷವೂ ಯಾವ ಸಿನಿಮಾ ಮಾಡಿಲ್ಲ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ಶೂಟಿಂಗ್ ನಡೆಯುತ್ತಿದ್ದರ ಈ ವರ್ಷ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೀಗಾಗಿ, ಸಿಂಪಲ್ ಸ್ಟಾರ್ ಅಭಿಮಾನಿಗಳು ಇದು ನಿರಾಸೆ ವರ್ಷವಾಯಿತು.

'ಬಟರ್ ಫ್ಲೈ' ಹಾರಲಿಲ್ಲ
ಕೊನೆಯದಾಗಿ 'ಜೆಸ್ಸಿ' ಚಿತ್ರದಲ್ಲಿ ನಟಿಸಿದ್ದ ಪಾರೂಲ್ ಯಾದವ್ ಇನ್ನು ಥಿಯೇಟರ್ ಗೆ ಬರಲೇ ಇಲ್ಲ. 'ಬಟರ್ ಫ್ಲೈ' ಚಿತ್ರವನ್ನ ಮುಗಿಸಿದ್ದರು ಬಿಡುಗಡೆಗಾಗಿ ದಿನ ಕಾಯುತ್ತಾ ಇದ್ದಾರೆ. ಬಹುಶಃ ಮುಂದಿನ ವರ್ಷ ಆರಂಭದಲ್ಲೇ ಪಾರೂಲ್ ಎಂಟ್ರಿಯಾಗಬಹುದು.

'ಸೀತಾರಾಮ ಕಲ್ಯಾಣ' ಆಗಲಿಲ್ಲ
'ಜಾಗ್ವಾರ್' ನಂತರ ನಿಖಿಲ್ ಕುಮಾರ್ ಸಿನಿಮಾ ಮಾಡ್ತಿದ್ರು ತೆರೆಮೇಲೆ ಇನ್ನು ಬಂದಿಲ್ಲ. 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯ ಪಾತ್ರ ಮಾಡಿದ್ದಾರೆ. ಬಟ್, ಈ ವರ್ಷ ಆ ಸಿನಿಮಾ ಬಂದಿಲ್ಲ. ಹರ್ಷ ನಿರ್ದೇಶನದ 'ಸೀತಾರಾಮ ಕಲ್ಯಾಣ' ಶೂಟಿಂಗ್ ಮುಗಿದಿದೆ. ಮುಂದಿನ ವರ್ಷಕ್ಕೆ ಕಾದುಕೊಂಡಿದೆ. ಹಾಗಾಗಿ, ಈ ವರ್ಷವೂ ನಿಖಿಲ್ ಸಿನಿಮಾ ಇಲ್ಲದಂತಾಯಿತು.


Click it and Unblock the Notifications











