For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಹೊಸ ಕಾರು ಖರೀದಿಸಿದ ದರ್ಶನ್: ಬೆಲೆ ಎಷ್ಟು?

  |

  ನಟ ದರ್ಶನ್‌ರ ಕಾರು ಕ್ರೇಜ್ ಸಾಮಾನ್ಯದ್ದಲ್ಲ. ಹಲವು ಅತ್ಯುತ್ತಮ ಕಾರುಗಳನ್ನು ತಮ್ಮ ಸಂಗ್ರಹದಲ್ಲಿಟ್ಟುಕೊಂಡಿದ್ದಾರೆ ದರ್ಶನ್.

  ಯಾವುದೇ ಒಳ್ಳೆಯ ಕಾರು ಮಾರುಕಟ್ಟೆಗೆ ಬಂದರೆ ಅದನ್ನು ಟೆಸ್ಟ್ ಮಾಡುವುದು ಇಷ್ಟವಾದರೆ ಖರೀದಿಸುವುದು ದರ್ಶನ್‌ರ ಹವ್ಯಾಸವೇ ಆಗಿಬಿಟ್ಟಿದೆ. ಲ್ಯಾಂಬರ್ಗಿನಿ ಉರುಸ್ ಸೇರಿದಂತೆ ಹಲವು ಐಶಾರಾಮಿ, ದುಬಾರಿ ಕಾರುಗಳು ಈಗಾಗಲೇ ದರ್ಶನ್‌ ಬಳಿ ಇವೆ. ಇದೀಗ ಹೊಸ ಕಾರೊಂದು ಅವರ ಸಂಗ್ರಹಕ್ಕೆ ಸೇರಿಕೊಂಡಿದೆ.

  ನಟ ದರ್ಶನ್ ಹೊಸದಾಗಿ ಫೋರ್ಡ್ ಎಂಡೊವೆರಾ ಕಾರನ್ನು ಖರೀದಿಸಿದ್ದಾರೆ. ಬಹಳ ಬಲಶಾಲಿಯೂ, ಮಸಲ್‌ ಲುಕ್ಕನ್ನೂ ಹೊಂದಿರುವ ಈ ಕಾರು ಅಷ್ಟೆ ದುಬಾರಿ ಬೆಲೆಯನ್ನು ಸಹ ಹೊಂದಿದೆ.

  ದರ್ಶನ್‌ ಈಗ ಖರೀದಿಸಿರುವ ಫೋರ್ಡ್ ಎಂಡೊವೆರಾ 150 ಕಾರಿನ ಬೆಲೆ ಸುಮಾರು ಅರ್ಧ ಕೋಟಿ ದಾಟಿದೆ ಸಮೀಪ ಆಗುತ್ತದೆ. ಮೊದಲಿನಿಂದಲೂ ಫೋರ್ಡ್ ಸಂಸ್ಥೆ ಎಂಡೊವೆರಾ ಕಾರು ಮಾರಾಟ ಮಾಡುತ್ತಲೇ ಬರುತ್ತಿದೆ. ಆದರೆ ಈಗ ದರ್ಶನ್ ಖರೀದಿಸಿರುವುದು ಸಂಪೂರ್ಣ ಹೊಸ ಮಾದರಿಯ ಎಂಡೊವೆರಾ ಕಾರು.

  ತಮ್ಮ ಕಾರಿಗೆ ಸಾಕಷ್ಟು ಮಾಡಿಫಿಕೇಶನ್‌ಗಳನ್ನು ದರ್ಶನ್ ಮಾಡಿಸಿದ್ದು ಅದ್ಭುತ ಆಫ್‌ ರೋಡ್ ಲುಕ್ ಅನ್ನು ನೀಡಿದ್ದಾರೆ. ಬಿಳಿ ಬಣ್ಣದ ಗೂಳಿಯಂತೆ ಘೇಂಡಾಮೃಗದಂತೆ ದೈತ್ಯವಾಗಿ, ಗಂಭೀರವಾಗಿ ಕಾರು ಕಾಣುತ್ತಿದೆ. ದರ್ಶನ್‌ರ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  ದರ್ಶನ್‌ರ ಹೊಸ ಕಾರಿನ ಎಕ್ಸ್ ಶೋರೂಂ ಬೆಲೆ 36 ಲಕ್ಷ ಇದ್ದು, ರಸ್ತೆ ತೆರಿಗೆ, ವಿಮೆ ಇತ್ಯಾದಿ-ಇತ್ಯಾದಿ ಸೇರಿ 50 ಲಕ್ಷ ವಾಗುತ್ತದೆ. ಇನ್ನು ದರ್ಶನ್ ಸಾಕಷ್ಟು ಮಾಡಿಫಿಕೇಶನ್‌ಗಳನ್ನು ಮಾಡಿಸಿದ್ದು, ಇದಕ್ಕೆ ಹೆಚ್ಚುವರಿ ಹಣ ತಗುಲಿರುವುದರಲ್ಲಿ ಅನುಮಾನವಿಲ್ಲ.

  ಇತ್ತೀಚೆಗೆ ಹಲವು ಕನ್ನಡ ನಟ-ನಟಿಯರು ಹೊಸ ಕಾರುಗಳನ್ನು ಖರೀದಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಇತ್ತೀಚೆಗಷ್ಟೆ ದುಬಾರಿ ಕ್ಯು8 ಆಡಿ ಕಾರು ಖರೀದಿಸಿದ್ದಾರೆ. ಇದೀಗ ಸಿನಿಮಾಕ್ಕೂ ಪಾದಾರ್ಪಣೆ ಮಾಡಿರುವ ನಟಿ ಮೇಘನಾ ಶೆಟ್ಟಿ ಒಂದೇ ದಿನ ಎರಡು ಕಾರು ಖರೀದಿಸಿದರು. ಬಿಎಂಡಬ್ಲು ಹಾಗೂ ಎಂಜಿ ಹೆಕ್ಟರ್ ಕಾರು ಖರೀದಿಸಿದರು ಈ ನಟಿ. ನಟ ಶೈನ್ ಶೆಟ್ಟಿ ಬಿಎಂಡಬ್ಲು ಕಾರು ಖರೀದಿಸಿದ್ದಾರೆ. 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್ ಬೆಂಜ್ ಕಾರು ಖರೀದಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಇದೇ ಜನವರಿಯಲ್ಲಿ ರೇಂಜ್ ರೋವರ್ ಕಾರು ಖರೀದಿಸಿದ್ದರು. ನಟ ಚಂದು ಗೌಡ ಆಡಿ ಕಾರು ಖರೀದಿಸಿದ್ದರು. ಬಿಗ್ ಬಾಸ್ ವಿನ್ನರ್ ಶಶಿ ಮಿನಿ ಕೂಪರ್ ಕಾರು ಖರೀದಿಸಿದ್ದರು. ನಿರ್ದೇಶಕ ಸಂತೋಶ್ ಆನಂದ್‌ರಾಮ್ ಬಿಎಂಡಬ್ಲು ಕಾರು ಖರೀದಿಸಿದರು.

  ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟ ದರ್ಶನ್ ಕೆಲವು ದಿನಗಳ ಹಿಂದಷ್ಟೆ ಹೊಸ ಸಿನಿಮಾ ಘೋಷಿಸಿದ್ದಾರೆ. 'ಯಜಮಾನ' ಸಿನಿಮಾವನ್ನು ತೆರೆಗೆ ತಂದಿದ್ದ ತಂಡವೇ ಮತ್ತೆ ಒಂದಾಗಿದ್ದು ಶೈಲಜಾ ನಾಗ್ ನಿರ್ಮಾಣದಲ್ಲಿ ಹರಿಕೃಷ್ಣ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ 'ಕ್ರಾಂತಿ' ಎಂದು ಹೆಸರಿಡಲಾಗಿದೆ.

  ದರ್ಶನ್‌ ನಟಿಸುತ್ತಿದ್ದ 'ರಾಜ ವೀರ ಮದಕರಿ' ಸಿನಿಮಾದ ಚಿತ್ರೀಕರಣ ಸದ್ಯಕ್ಕೆ ನಿಂತಿದೆ. ದರ್ಶನ್‌ ಸೂಚನೆಯಂತೆ ಸಿನಿಮಾವನ್ನು ನಿಲ್ಲಿಸಲಾಗಿದೆ ಎನ್ನಲಾಗುತ್ತಿದೆ. 'ರಾಜ ವೀರ ಮದಕರಿ' ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣ ಈಗಾಗಲೇ ಆಗಿತ್ತು. ಆದರೆ ಹಠಾತ್ತನೆ ಚಿತ್ರೀಕರಣ ಬಂದ್ ಮಾಡಲಾಗಿದೆ.

  English summary
  Darshan purchased new car ford endeavour. Darshan fully modified the new car. Darshan's new car's video getting viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X