For Quick Alerts
  ALLOW NOTIFICATIONS  
  For Daily Alerts

  ಹೋಟೆಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ಪ್ರಕರಣ: ಸಂತ್ರಸ್ತನ ವಿಚಾರಣೆ ನಡೆಸಿದ ಪೊಲೀಸರು

  By ಮೈಸೂರು ಪ್ರತಿನಿಧಿ
  |

  ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಡೆತ ತಿಂದ ನೌಕರ ಗಂಗಾಧರ್ ಅನ್ನು ವಿಚಾರಣೆ ಮಾಡಲಾಗುತ್ತಿದೆ.

  ನಟ ದರ್ಶನ್ ಹಾಗೂ ಸ್ನೇಹಿತರು ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೈಸೂರು ಪೊಲೀಸ್ ಆಯುಕ್ತರಿಗೆ ನಿನ್ನೆಯೇ ಸೂಚನೆ ನೀಡಿದ್ದರು.

  ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ಸಂದೇಶ್ ಪ್ರಿನ್ಸ್ ಹೋಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

  ನಜರಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ

  ಸಂದೇಶ್ ಹೋಟೆಲ್ ಗೆ ಆಗಮಿಸಿದ ಎಸಿಪಿ ಶಶಿಧರ್, ಇನ್ಸ್ಪೆಕ್ಟರ್ ಶ್ರೀಕಾಂತ್ ಗಂಗಾಧರ್ ಅನ್ನು ಸತತ ಒಂದು ಗಂಟೆಗೂ ಹೆಚ್ಚು ಸಮಯದಿಂದ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯನ್ನು ವಿಡಿಯೋ ರೆಕಾರ್ಡ್ ಹಾಗೂ ಲಿಖಿತ ದಾಖಲೆ ಮಾಡಿಕೊಳ್ಳುತ್ತಿದ್ದಾರೆ.

  ಹೋಟೆಲ್ ಸಪ್ಲೇಯರ್ ಗೆ ಹೊಡೆದ ದರ್ಶನ್ ಅಂಡ್ ಗ್ಯಾಂಗ್ : ಇಂದ್ರಜಿತ್ ಲಂಕೇಶ್ | Filmibeat Kannada

  ಎಸಿಪಿಯನ್ನ ಬರಮಾಡಿಕೊಂಡ ಹೋಟೆಲ್ ಮಾಲೀಕ ಸಂದೇಶ್. ಘಟನೆ ನಡೆದ ಸ್ಥಳಕ್ಕೆ ಎಸಿಪಿಯನ್ನ‌ ಕರೆದೊಯ್ದು ಮಾಹಿತಿ ನೀಡಿದ್ದಾರೆ. ಹೈ ಪ್ರೋಫೈಲ್ ಪ್ರಕರಣ ಆದ ಕಾರಣ ಪೊಲೀಸರ ಮೇಲೆ ಹೆಚ್ಚಿನ ಒತ್ತಡ ಇದೆ. ಸಿಸಿಟಿವಿ ಪೋಟೇಜ್ ಅನ್ನು ಪೊಲೀಸರು ಪರಿಶೀಲಿಸುವ ಸಾಧ್ಯತೆ ಇದೆ.

  English summary
  Darshan beaten up hotel staff in Mysore: Police visited Sandesh prince hotel and started investigation. Police inquiring Gangaraju who allegedly beaten up by Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X