'ಅಮರ್' ಸಿನಿಮಾದ ಕೊಡವ ಹಾಡಿಗೆ ಹೆಜ್ಜೆ ಹಾಕಿದ ದರ್ಶನ್-ರಚಿತಾ ರಾಮ್
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ 'ಅಮರ್' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಇದೇ ತಿಂಗಳ ಕೊನೆಯಲ್ಲಿ ಬಹು ನಿರೀಕ್ಷೆಯ ಅಮರ್ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೆ ಹಾಡುಗಳ ಮೂಲಕ ಕನ್ನಡ ಚಿತ್ರಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ 'ಅಮರ್'.
'ಅಮರ್' ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ. ಅಂಬಿ ಪುತ್ರನ ಮೊದಲ ಸಾಕಷ್ಟು ಹೊಸತನಗಳಿಂದ ಗಮನ ಸೆಳೆಯುತ್ತಿದೆ. ಸದ್ಯ ಚಿತ್ರದಿಂದ ಮೂರು ಹಾಡುಗಳು ರಿಲೀಸ್ ಆಗಿದ್ದು ಈ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಗಾನಪ್ರಿಯರ ಮನ ಗೆದ್ದಿರುವ 'ಅಮರ್' ಹಾಡುಗಳು ಮತ್ತೆ ಮತ್ತೆ ಕೇಳ ಬೇಕೆನಿಸುವಂತಿವೆ.
ಸದ್ಯ ಚಿತ್ರದಿಂದ ನಾಲ್ಕನೆ ಹಾಡನ್ನು ರಿಲೀಸ್ ಮಾಡುವ ತಯಾರಿಯಲ್ಲಿದೆ ಚಿತ್ರತಂಡ. ವಿಶೇಷ ಅಂದ್ರೆ ನಾಲ್ಕನೆ ಹಾಡು ತುಂಬಾ ವಿಭಿನ್ನವಾಗಿದೆಯಂತೆ. ಕಾರಣ ಕೊಡವ ಶೈಲಿಯ ಹಾಡು ಇದಾಗಿದ್ದು ಈ ಹಾಡಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಚಿತಾ ರಾಮ್ ಹೆಜ್ಜೆ ಹಾಕಿದ್ದಾರಂತೆ. ಮುಂದೆ ಓದಿ..

ಅಮರ್ ಚಿತ್ರದ ಹಾಡಿನಲ್ಲಿ ದರ್ಶನ್-ರಚಿತಾ
'ಅಮರ್' ಚಿತ್ರದ ನಾಲ್ಕನೆ ಹಾಡು ರಿಲೀಸ್ ಗೆ ರೆಡಿಯಾಗಿದೆ. ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರಂತೆ. ವಿಶೇಷ ಅಂದ್ರೆ ದರ್ಶನ್ ಪ್ರಮುಖ ಪಾತ್ರಕ್ಕೆ ಮಾತ್ರ ಬಣ್ಣ ಹಚ್ಚಿದ್ದಾರೆ ಎಂದುಕೊಳ್ಳಲಾಗಿತ್ತು. ಆದ್ರೆ ಡಿ ಬಾಸ್ ಒಂದು ಹಾಡಿಗೂ ಹೆಜ್ಜೆ ಹಾಕಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಹಾಡಿನ ಮೂಲಕ ದರ್ಶನ್ ಮತ್ತು ರಚಿತಾ ಜೋಡಿ ಮತ್ತೆ ಒಂದಾಗಿದೆ.

ಕೊಡವ ಶೈಲಿಯಲ್ಲಿದೆ ಅಮರ್ ಹಾಡು
ಸದ್ಯ 'ಅಮರ್' ಸಿನಿಮಾದಿಂದ ರಿಲೀಸ್ ಗೆ ತಯಾರಾಗಿರುವ ನಾಲ್ಕನೆ ಹಾಡು ಕೊಡವ ಭಾಷೆಯಲ್ಲಿ ಮೂಡಿ ಬಂದಿದೆಯಂತೆ. ಸಂಗೀತ ನಿರ್ದೇಶಕ ಮತ್ತು ಗಾಯಕ ಜೆಸ್ಸಿ ಗಿಫ್ಟ್ ದ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು, ಕಿರಣ್ ಕಾವೇರಪ್ಪ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಅಮರ್ ಚಿತ್ರಕ್ಕಿದೆ. ಕೊಡವ ಭಾಷೆಯಲ್ಲಿ ಇರುವ ಈ ಹಾಡನ್ನು ವಿಶೇಷವಾಗಿ ಕೊಡವ ಜನರಿಗೆ ಅರ್ಪಿಸುತ್ತಿದೆಯಂತೆ ಚಿತ್ರತಂಡ.

ಕೊಡವ ನೃತ್ಯ ಮಾಡಿದ್ದಾರೆ ನಿರೂಪ್ ಭಂಡಾರಿ
ಅಮರ್ ಚಿತ್ರದ ಮೋಸ್ಟ್ ಎಕ್ಸ್ ಪೆಕ್ಟೆಡ್ ಕೊಡುವ ಹಾಡಿಗೆ ನಟ ನಿರೂಪ್ ಭಂಡಾರಿ ನೃತ್ಯ ಮಾಡಿದ್ದಾರೆ. ಮೊದಲ ಬಾರಿಗೆ ದರ್ಶನ್ ಮತ್ತು ರಚಿತಾ ರಾಮ್ ಜೊತೆ ಹೆಜ್ಜೆ ಹಾಕಿದ್ದಾರೆ ನಿರೂಪ್. ಆದ್ರೆ ದರ್ಶನ್, ರಚಿತಾ ಮತ್ತು ನಿರೂಪ್ ಒಟ್ಟಿಗೆ ಒಂದೇ ಫ್ರೇಮಿನಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಮಾತ್ರ ಇನ್ನು ಬಹಿರಂಗ ಆಗಿಲ್ಲ. ಆದ್ರೆ ಮೂವರು ಒಂದೇ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಕಣ್ಣಿಗೆ ದೊಡ್ಡ ಹಬ್ಬವಾಗಿದೆ.

ಅತಿಥಿ ಪಾತ್ರದಲ್ಲಿ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಮರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಸಹೋದರ ಅಂತಾನೆ ಹೇಳುವ ಅಭಿಷೇಕ್ ಸಿನಿಮಾದಲ್ಲಿ ಡಿ ಬಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಯಾವ ಪಾತ್ರದ ಬಗ್ಗೆ ಚಿತ್ರತಂಡ ಬಹಿರಂಗ ಪಡಿಸಿಲ್ಲ. ನಟನೆ ಜೊತೆಗೆ ದಚ್ಚು ಒಂದು ಹಾಡಿನಲ್ಲೂ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಮೇ 31ಕ್ಕೆ ತೆರೆಗೆ ಬರುತ್ತಿದೆ ಅಮರ್
ಅಂಬರೀಶ್ ಪುತ್ರನ ಮೊದಲ ಸಿನಿಮಾ ಇದೆ ತಿಂಗಳ ಕೊನೆಯಲ್ಲಿ ರಿಲೀಸ್ ಆಗುತ್ತಿದೆ. ಇದೇ ತಿಂಗಳು 23ರಂದು ಸುಮಲತಾ ಅವರ ರಾಜಕೀಯ ಭವಿಷ್ಯ ಕೂಡ ನಿರ್ಧಾರ ಆಗಲಿದೆ. ಅಭಿಷೇಕ್ ಮೊದಲ ಸಿನಿಮಾ, ಅಂಬರೀಶ್ ಹುಟ್ಟುಹಬ್ಬ, ಈ ತಿಂಗಳು ಅಂಬಿ ಕುಟುಂಬಕ್ಕೆ ತೀರ ವಿಶೇಷವಾದ ತಿಂಗಳಾಗಿದೆ. ಅಮರ್ ಸಿನಿಮಾದಲ್ಲಿ ನಾಯಕಿಯಾಗಿ ತಾನ್ಯ ಹೋಪ್ ಕಾಣಿಸಿಕೊಂಡಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣ ಚಿತ್ರಕ್ಕಿದೆ.


Click it and Unblock the Notifications











