ಮಹಿಳಾ ಅಭಿಮಾನಿ ಗೋಳಾಟ ತಾಳಲಾರದೆ ಬೆನ್ನು ಹಿಡಿದುಕೊಂಡೇ ಓಡಿದ ದರ್ಶನ್: ವಿಡಿಯೋ ವೈರಲ್
ಕನ್ನಡ ಚಿತ್ರರಂಗದಲ್ಲಿ ಡೈ ಹಾರ್ಡ್ ಫ್ಯಾನ್ ಅನ್ನು ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಎಲ್ಲೇ ಹೋದರೂ ದರ್ಶನ್ ಕಂಡರೆ ಅವರ ಅಭಿಮಾನಿಗಳು ಅಡ್ಡ ಹಾಕುತ್ತಾರೆ. ಅವರೊಂದಿಗೆ ಮಾತಾಡುವುದಕ್ಕೆ ಹಂಬಲಿಸುತ್ತಾರೆ. ಆದರೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ದರ್ಶನ್ ತಮ್ಮ ಅಭಿಮಾನಿಗಳನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಾರಿ ಹುಟ್ಟುಹಬ್ಬದ ವೇಳೆನೂ ಅಭಿಮಾನಿಗಳನ್ನು ಭೇಟಿ ಮಾಡಿಲ್ಲ.
ಆದರೆ, ಪ್ರತಿ ದಿನ ಮನೆಯ ಮುಂದೆ ಬರುವ ಅಭಿಮಾನಿಗಳಿಗೆ ಶೇಕ್ ಹ್ಯಾಂಡ್ ಕೊಟ್ಟು ಭೇಟಿ ಮಾಡುತ್ತಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಹೆಚ್ಚು ಹೊತ್ತು ಅಭಿಮಾನಿಗಳೊಂದಿಗೆ ಕಾಲ ಕಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ದರ್ಶನ್ ಅವಕಾಶ ಸಿಕ್ಕಾಗ ತಮ್ಮ ಮನೆ ಮುಂದೆ ಬರುವ ಅಭಿಮಾನಿಗಳನ್ನು ಪ್ರೀತಿಯಿಂದ ಮಾತಾಡಿಸಿ ಕಳುಹಿಸುತ್ತಿದ್ದಾರೆ.

ಹೀಗೆ ಅಭಿಮಾನಿಗಳನ್ನು ಭೇಟಿ ಮಾಡುವಾಗ ಮಹಿಳೆಯೊಬ್ಬರ ಗೋಳಾಟ ನೋಡಲಾಗದೆ ತಪ್ಪಿಕೊಂಡು ಓಡಿ ಹೋಗಿ ಕಾರು ಹತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ? ಮಹಿಳಾ ಅಭಿಮಾನಿಯ ಅಭಿಮಾನಕ್ಕೆ ಹೆದರಿದ್ದೇಕೆ ದರ್ಶನ್? ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಇಂದು (ಮಾರ್ಚ್ 7) ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ದರ್ಶನ್ ನಿವಾಸದ ಮುಂದೆ ಅಭಿಮಾನಿಗಳು ಸೇರಿದ್ದರು. ಎಂದಿನಂತೆ ಅವರನ್ನು ದರ್ಶನ್ ಭೇಟಿಯಾಗುವುದಕ್ಕೆ ಮುಂದಾಗಿದ್ದರು. ಆ ಗುಂಪಿನಲ್ಲಿ ಮಹಿಳಾ ಅಭಿಮಾನಿ ಕೂಡ ಇದ್ದರು. ತಮ್ಮ ಅಭಿಮಾನಿಗಳನ್ನು ಭೇಟಿಯಾಗುತ್ತಾ ಬರುತ್ತಿದ್ದ ದರ್ಶನ್‌ಗೆ ಫೀಮೇಲ್ ಫ್ಯಾನ್ ಎದುರಾಗಿದ್ದಾರೆ. ಅವರೊಂದಿಗೆ ಮಾತಾಡ ಬೇಕು ಅಂತ ಆ ಮಹಿಳಾ ಅಭಿಮಾನಿ ಹಠ ಹಿಡಿದಿದ್ದರು.
ದರ್ಶನ್ ಆ ಮಹಿಳಾ ಅಭಿಮಾನಿಗೆ ತಮ್ಮ ಬೆನ್ನು ನೋವು ಇದೆ. ಹೆಚ್ಚು ಹೊತ್ತು ನಿಲ್ಲಲು ಆಗುವುದಿಲ್ಲ ಎಂದು ಹೇಳಿದ್ದರು. ಆದರೂ, ಆ ಮಹಿಳಾ ಅಭಿಮಾನಿ ತನ್ನ ಹಠವನ್ನು ಬಿಡಲಿಲ್ಲ. ದರ್ಶನ್ ಕೈ ಹಿಡಿದುಕೊಂಡಿದ್ದರು. ಆ ಮಹಿಳಾ ಅಭಿಮಾನಿಗೆ ದರ್ಶನ್ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದರೂ ಅದಕ್ಕೆ ಒಪ್ಪಲೇ ಇಲ್ಲ. ಹೀಗಾಗಿ ಅವರಿಂದ ತಪ್ಪಿಸಿಕೊಂಡು ಹೋಗಿ ಕಾರು ಹತ್ತಿದ್ದಾರೆ. ಹಾಗಂತ ಆಗಲೂ ಆ ಮಹಿಳಾ ಅಭಿಮಾನಿ ಬಿಟ್ಟಿಲ್ಲ.
ಮಹಿಳಾ ಅಭಿಮಾನಿಯನ್ನು ಹೇಗೋ ಸಮಾಧಾನ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದರು. ಆದರೂ, ಅವರನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಬೆನ್ನು ಹಿಡಿದುಕೊಂಡೇ ಹೋಗಿ ಕಾರು ಹತ್ತಿದ್ದರು. ಕಾರಿನಲ್ಲಿ ಕೂತು ಬೆನ್ನು ನೋವು ಬಿಟ್ಟು ಬಿಡಮ್ಮ ಎಂದರೂ ಆ ಮಹಿಳಾ ಅಭಿಮಾನಿ ದರ್ಶನ್ ಅನ್ನು ಬಿಡಲಿಲ್ಲ. ಕಾರಿನ ಡೋರ್ ಅನ್ನು ಹಿಡಿದು ಎಳೆದಾಡುವುದಕ್ಕೆ ಶುರು ಮಾಡಿದ್ದಾರೆ. ದರ್ಶನ್ ಜೊತೆ ಮಾತಾಡಲೇಬೇಕು ಅಂತ ಗೋಳಾಡಿದ್ದಾರೆ.
ಈ ವಿಡಿಯೋದಲ್ಲಿ ದರ್ಶನ್ ತಮ್ಮ ಕಾರಿನ ಕಿಟಕಿಯನ್ನು ಏರಿಸುವುದಕ್ಕೆ ಪ್ರಯತ್ನ ಪಡುವುದು ಕಾಣಿಸುತ್ತೆ. ಆದರೂ, ಅದು ಸಾಧ್ಯವಾಗುವುದಿಲ್ಲ. ಕಿಟಕಿಗೆ ಕೈ ಹಾಕಿ ಎಳೆಯುವುದಕ್ಕೆ ಪ್ರಯತ್ನ ಮಾಡಿದ್ದಾರೆ. ಬೇಡಿ, ಗೋಳಾಟ ಮಾಡುವುದನ್ನು ನೋಡಲಾರದೆ, ದರ್ಶನ್ ಮತ್ತೆ ಕಾರಿನಿಂದ ಇಳಿದು ತಮ್ಮ ಮಹಿಳಾ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಆ ಮಹಿಳೆಯನ್ನು ಸಮಾಧಾನ ಮಾಡಿದ್ದಾರೆ. ಇದೇ ವಿಡಿಯೋ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.
ಇನ್ನು ದರ್ಶನ್ ಶೀಘ್ರದಲ್ಲಿಯೇ 'ಡೆವಿಲ್' ಸಿನಿಮಾ ಶುರು ಮಾಡಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಮಿಲನ ಪ್ರಕಾಶ್ ನಿರ್ದೇಶಿಸುತ್ತಿರುವ ಈ ಸಿನಿಮಾ ಕಳೆದ ಏಳೆಂಟು ತಿಂಗಳಿನಿಂದ ನಿಂತಿತ್ತು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದರಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಈಗ ಜಾಮೀನಿನ ಮೇಲೆ ಹೊರ ಬಂದಿರುವುದರಿಂದ ದರ್ಶನ್ ಮತ್ತೆ ಶೂಟಿಂಗ್ ಶುರು ಮಾಡಲಿದ್ದಾರೆ.


Click it and Unblock the Notifications











