ನಾವಿಬ್ಬರು ಜೋಡಿ ಎತ್ತು: ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಬೆಂಬಲಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ನಿಂತಿದ್ದಾರೆ. ಕಿಚ್ಚ ಸುದೀಪ್ ಅವರ ಪ್ರಚಾರಕ್ಕೆ ಬರೋದು ಅನುಮಾನ ಎಂದು ಸ್ವತಃ ಅವರೇ ಹೇಳಿದ್ದರು.
ಕಳೆದ ವಾರ ಸುಮಲತಾ ಸ್ಪರ್ಧೆ ವಿಚಾರವಾಗಿ ಮಾತನಾಡಿದ್ದ ಸುದೀಪ್ ''ಸುಮಲತಾ ಅವರನ್ನ ಗೆಲ್ಲಿಸಲು ದರ್ಶನ್ ಇದ್ದಾರೆ, ಅವರೊಬ್ಬರಿದ್ರೆ ಬೇರೆ ಹೋಗುವ ಅಗತ್ಯವಿರಲ್ಲ'' ಎಂದು ಹೇಳಿದ್ದರು.
ಮಂಡ್ಯ ಚುನಾವಣೆಯಲ್ಲಿ ತಾನು ತಟಸ್ಥ, ಚಿತ್ರೀಕರಣವಿರುವ ಕಾರಣದಿಂದ ಪ್ರಚಾರಕ್ಕೆ ಹೋಗಲು ಕಷ್ಟ ಎಂದು ತಿಳಿಸಿದ್ದರು. ಇದೀಗ, ಸುದೀಪ್ ಹೇಳಿದ್ದ ಹೇಳಿಕೆಯನ್ನ ದರ್ಶನ್ ಅವರ ಮುಂದೆ ಇಡಲಾಯಿತು. ಅದಕ್ಕೆ ಅವರು ಇನ್ನೊಂದು ರೀತಿಯಲ್ಲಿ ಉತ್ತರಿಸಿದ್ದಾರೆ. ಹಾಗಿದ್ರೆ, ಸುದೀಪ್ ಹೇಳಿಕೆಗೆ ದರ್ಶನ್ ಏನಂದ್ರು?

ನಮ್ಮ ಹೀರೋ ಇದ್ದಾರೆ
ಸುಮಲತಾ ಅವರನ್ನ ಗೆಲ್ಲಿಸಲು ದರ್ಶನ್ ಒಬ್ಬರು ಸಾಕು ಎಂಬ ಮಾತನ್ನ ಒಪ್ಪದ ದರ್ಶನ್, 'ನಮ್ಮ ಜೊತೆ ನಮ್ಮ ಹೀರೋ (ಯಶ್) ಕೂಡ ಇದ್ದಾರೆ ಎಂದು ಹೇಳುವ ಮೂಲಕ ಒಟ್ಟಿಗೆ ಸುಮಲತಾ ಅವರನ್ನ ಗೆಲ್ಲಿಸಲು ಮುಂದಾಗಿದ್ದೇವೆ ಎಂದರು. ಇಬ್ಬರು ಪ್ಲಾನ್ ಮಾಡಿ ಪ್ರಚಾರ ಮಾಡಿ, ಹೇಗಾದರೂ ಮಾಡಿ ಅಂಬರೀಶ್ ಪತ್ನಿಯನ್ನ ಗೆಲ್ಲಿಸಬೇಕಂಬ ಛಲಕ್ಕೆ ಬಿದ್ದಿರಬೇಕು.

ನಮ್ಮದು ಜೋಡಿ ಎತ್ತಿನ ಗಾಡಿ
'ನಾವು ಜೋಡಿ ಎತ್ತಿನ ಗಾಡಿ ಹೊಡಿಯುತ್ತಿದ್ದೇವೆ' ಎಂದು ಹೇಳುವ ಮೂಲಕ ನಾನು ಮತ್ತು ಯಶ್ ಇಬ್ಬರು ಸುಮಲತಾ ಅವರನ್ನ ಗೆಲ್ಲಿಸಲು ನಿಂತಿದ್ದೇವೆ ಎಂದು ದರ್ಶನ್ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲಿಗೆ ಮಂಡ್ಯ ಅಖಾಡದಲ್ಲಿ ಡಿ ಬಾಸ್ ಮತ್ತು ರಾಕಿ ಬಾಯ್ ಇಬ್ಬರು ಧೂಳೆಬ್ಬಿಸುವ ಸೂಚನೆ ಸಿಕ್ಕಿದೆ.

ಜನ ಸೇರ್ತಾರೆ, ಮತ ಬರುತ್ತಾ?
ಸಹಜವಾಗಿ ಯಶ್ ಮತ್ತು ದರ್ಶನ್ ಬರ್ತಿದ್ದಾರೆ ಅಂದ್ರೆ ಜನಸಾಗರವೇ ಸೇರುತ್ತೆ. ಆದ್ರೆ, ಆ ಜನ ಸಾಗರ ಸುಮಲತಾ ಅವರ ಪರವಾಗಿ ಮತ ಆಗಿ ಪರಿವರ್ತನೆ ಆಗುತ್ತಾ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ. ಯಾಕಂದ್ರೆ, ಈ ಹಿಂದೆ ಸಿನಿಮಾರಂಗದವರಾದ ಅಂಬರೀಶ್ ಸೋತ್ತಿದ್ದಾರೆ, ರಮ್ಯಾನೂ ಸೋತಿದ್ದಾರೆ ಎಂಬ ಉದಾಹರಣೆ ನಮ್ಮ ಕಣ್ಣ ಮುಂದಿದೆ.

ಅಂಬಿಗೆ ಪ್ರಚಾರ ಮಾಡಿದ್ದ ದರ್ಶನ್
ಹಾಗ್ನೋಡಿದ್ರೆ, ದರ್ಶನ್ ಅವರು ಅಂಬರೀಶ್ ಪರ ಮೂರ್ನಾಲ್ಕು ಚುನಾವಣೆಯಲ್ಲಿ ಮತಯಾಚನೆ ಮಾಡಿದ್ದಾರೆ. ಮೂರು ಎಂಎಲ್ಎ ಎಲೆಕ್ಷನ್ ಮತ್ತು ಒಂದು ಎಂಪಿ ಎಲೆಕ್ಷನ್ ನಲ್ಲಿ ಡಿ ಬಾಸ್ ಮಂಡ್ಯ ರಸ್ತೆಯಲ್ಲಿ ಪ್ರಚಾರ ಮಾಡಿದ್ರು. ಆ ಸಂದರ್ಭದಲ್ಲಿ ಸುಮಲತಾ ಕೂಡ ದರ್ಶನ್ ಜೊತೆಯಿದ್ದರು. ಇದೀಗ, ಸುಮಲತಾ ಅವರೇ ಸ್ಪರ್ಧಿಸಿದ್ದು, ಅವರ ಪರವಾಗಿ ದರ್ಶನ್ ಪ್ರಚಾರ ಮಾಡಲಿದ್ದಾರೆ.


Click it and Unblock the Notifications











