'ಡಿ ಬಾಸ್ ಯಾರು' ಎಂದು ಕೇಳಿದ್ದ ಸಿಎಂಗೆ ದರ್ಶನ್ ಪ್ರತಿಕ್ರಿಯೆ

Recommended Video

Lok Sabha Elections 2019 : ಎಚ್ ಡಿ ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ ನಟ ದರ್ಶನ್ | FILMIBEAT KANNADA

'ಚಾಲೆಂಜಿಂಗ್ ಸ್ಟಾರ್ ಅಂತೆ, ಡಿ ಬಾಸ್ ಅಂತೆ....ಡಿ ಬಾಸ್ ಅನ್ನೋದು ಸಿನಿಮಾದಲ್ಲಿ ಆಗಬಹುದು. ಜನಗಳಿಗೆ ಡಿ ಬಾಸ್ ಆಗೋಕೆ ಆಗಲ್ಲ. ರೈತರಿಗೆ ಡಿ ಬಾಸ್ ಆಗೋಕೆ ಯಾವತ್ತು ಸಾಧ್ಯವಿಲ್ಲ' ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಟ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದಕ್ಕೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ಮಾತಿಗೆ ಡಿ ಬಾಸ್ ಖ್ಯಾತಿಯ ದರ್ಶನ್ ತಮ್ಮದೇ ಸ್ಟೈಲ್ ನಲ್ಲಿ ತಿರುಗೇಟು ನೀಡಿದ್ದಾರೆ.

ಧರ್ಮ ಕೀರ್ತಿರಾಜ್ ಅಭಿನಯಿಸುತ್ತಿರುವ 'ಖಡಕ್' ಚಿತ್ರದ ಮುಹೂರ್ತ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ನಟ ದರ್ಶನ್ ಮಂಡ್ಯ ಚುನಾವಣೆ ಬಗ್ಗೆ ಹಾಗೂ ಸಿಎಂ ಹೇಳಿಕೆಯ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ರೆ, ದರ್ಶನ್ ರಿಯಾಕ್ಷನ್ ಹೇಗಿತ್ತು? ಮುಂದೆ ಓದಿ.....

ಅಭಿಮಾನಿಗಳ ಕೊಟ್ಟ ಪ್ರೀತಿಯ ಭಿಕ್ಷೆ

ಅಭಿಮಾನಿಗಳ ಕೊಟ್ಟ ಪ್ರೀತಿಯ ಭಿಕ್ಷೆ

'ಡಿ ಬಾಸ್ ಯಾರು' ಎಂದು ಕೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿದ ದರ್ಶನ್ ''ನಮ್ಮ ಮನೆಯಲ್ಲಿ ದರ್ಶನ್ ಅಂತ ಹೆಸರಿಟ್ಟರು. ಎಲ್ಲರಿಗೂ ಒಂದೊಂದು ಸ್ಟಾರ್ ಕೊಟ್ಟಾಗ ನನಗೊಂದು ಒಂದು ಸ್ಟಾರ್ ಕೊಟ್ಟರು. ಚಾಲೆಂಜಿಂಗ್ ಸ್ಟಾರ್ ಅಂದ್ರು. ಈಗ ದರ್ಶನ್, ಡಿ ಬಾಸ್ ಅಂತಾ ಕರೆಯುವುದು ಅವರೇ. ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿರುವ ಭಿಕ್ಷೆ ಅದು'' ಎಂದು ತಮ್ಮದೇ ಸ್ಟೈಲ್ ನಲ್ಲಿ ಹೇಳಿದರು.

ನಾನು ಎಲೆಕ್ಷನ್ ಗೆ ನಿಂತಿಲ್ಲ

ನಾನು ಎಲೆಕ್ಷನ್ ಗೆ ನಿಂತಿಲ್ಲ

''ನಾನು ಎಲೆಕ್ಷನ್ ಗೆ ನಿಂತಿಲ್ಲ, ನಾನು ಬರಿ ಪ್ರಚಾರಕ್ಕೆ ಹೋಗ್ತಿದ್ದೀನಿ. ಬರಿ ಪ್ರಚಾರಕ್ಕೆ ಹೋದ್ರೆ ಇಷ್ಟೆಲ್ಲಾ ಆಗ್ತಿದೆ ಅದರ ಬಗ್ಗೆ ನಾನು ಏನ್ ಹೇಳಲಿ'' ಎಂದು ಪ್ರಶ್ನಿಸಿದ್ದಾರೆ. ದರ್ಶನ್ ಹಾಗೂ ಯಶ್ ಇಬ್ಬರು ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ. ಅದನ್ನ ಜೆಡಿಎಸ್ ಕಾರ್ಯಕರ್ತರು ಹಾಗೂ ಸಿಎಂ ವಿರೋಧಿಸಿದ್ದರು.

ಇಂದು ಅಪ್ಪಾಜಿ ಇಲ್ಲ ಅಂತ ಮಾತಾಡ್ತಿದ್ದಾರೆ

ಇಂದು ಅಪ್ಪಾಜಿ ಇಲ್ಲ ಅಂತ ಮಾತಾಡ್ತಿದ್ದಾರೆ

''ನಾನು ಆಗಿನಿಂದಲೂ ಅಂಬರೀಶ್ ಅವರಿಗೆ ಪ್ರಚಾರ ಮಾಡ್ತಿದ್ದೀನಿ. ಆದ್ರೆ, ಆಗ ಇಷ್ಟೊಂದು ಹೆಸರು ಚರ್ಚೆಯಾಗ್ತಿರಲಿಲ್ಲ. ಇವತ್ತು ಅವರಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಮಾತನಾಡುತ್ತಿದ್ದಾರೆ'' ಎಂದು ನಟ ದರ್ಶನ್ ತಿಳಿಸಿದರು.

ಏಪ್ರಿಲ್ 2 ರಿಂದ ಮಂಡ್ಯದಲ್ಲಿ ದಾಸ

ಏಪ್ರಿಲ್ 2 ರಿಂದ ಮಂಡ್ಯದಲ್ಲಿ ದಾಸ

ಸುಮಲತಾ ಪರ ಯಾವಾಗ ಪ್ರಚಾರ ಮಾಡ್ತೀರಾ ಎಂದು ಕೇಳಿದ್ದಕ್ಕೆ ''ಏಪ್ರಿಲ್ 2ನೇ ತಾರೀಖಿನಿಂದ ಪ್ರಚಾರ ಆರಂಭಿಸುತ್ತೇವೆ. ಸದ್ಯಕ್ಕೆ ಬೇರೆ ಏನೂ ಪ್ಲಾನ್ ಆಗಿಲ್ಲ. ಮಾಡ್ಬೇಕು'' ಎಂದು ಸ್ಪಷ್ಟನೆ ನೀಡಿದ್ದಾರೆ.

ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದು ಯಾರು?

ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದು ಯಾರು?

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರು. ಈ ಬಗ್ಗೆ ಮಾತನಾಡಿದ ದರ್ಶನ್ ''ನಾನು ಏನ್ ಹೇಳಲಿ'' ಎಂದಷ್ಟೇ ಸುಮ್ಮನಾದರು. ''ಟೀಕೆಗಳಿಗೆ ನಾನು ಉತ್ತರ ಕೊಡಲ್ಲ. ನಾನು ಅವತ್ತೆ ಹೇಳಿದ್ದೀನಿ ಬೇಜಾರಾಗಲ್ಲ, ಕೋಪ ಮಾಡಿಕೊಳ್ಳಲ್ಲ, ನೊಂದುಕೊಳ್ಳಲ್ಲ'' ಅಂತ ಮತ್ತೆ ಅದನ್ನೇ ಪುನರುಚ್ಚರಣೆ ಮಾಡಿದರು.

More from Filmibeat

English summary
Chief minister hd kumaraswamy Questioned, who is D Boss?. Now, Challenging star darshan has react about hd kumaraswamy statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X