twitter
    For Quick Alerts
    ALLOW NOTIFICATIONS  
    For Daily Alerts

    ಕಾವೇರಿ ತೀರ್ಪಿನ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯೆ: ಏನಂದ್ರು.?

    By Bharath Kumar
    |

    ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಡಬಲ್ ಧಮಾಕ. ಇಂದು ದಾಸನ ಹುಟ್ಟುಹಬ್ಬದ ಸಂಭ್ರಮ. ಎಲ್ಲ ಅಭಿಮಾನಿಗಳು ದರ್ಶನ್ ನಿವಾಸದ ಎದುರು ಜಾತ್ರೆ ಮಾಡುತ್ತಿದ್ದು, ಅಭಿಮಾನಿಗಳ ಜೊತೆ ಸಂಭ್ರಮಿಸುತ್ತಿದ್ದರು ದರ್ಶನ್.

    ಆದ್ರೆ, ಈ ಸಂತಸವನ್ನ ಮತ್ತಷ್ಟು ಹೆಚ್ಚಿಸಿದ್ದು ಕಾವೇರಿ ಜಲ ವಿವಾದದ ಬಗ್ಗೆ ಸುಂಪ್ರಿ ಕೋರ್ಟ್ ನೀಡಿದ ತೀರ್ಪು. ಈ ತೀರ್ಪಿನ ಬಗ್ಗೆ ಸ್ವತಃ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ.

    ಸುಪ್ರೀಂ ಕೋರ್ಟ್ ಕಾವೇರಿ ತೀರ್ಪಿಗೆ ಯಾರು, ಏನೆಂದರು?

    ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕರ್ನಾಟಕದ ಪರವಾಗಿದ್ದು, ಅದರಲ್ಲೂ ಬೆಂಗಳೂರು ಜನರಿಗೆ ಸ್ವಲ್ಪ ಸಮಾಧಾನ ತರುವಂತಿದೆ ಎನ್ನಲಾಗಿದೆ. ಹಾಗಿದ್ರೆ, ಸರ್ವೋಚ್ಚ ನ್ಯಾಯಾಲಯ ನೀಡಿರುವ ಜಡ್ಜ್ ಮೆಂಟ್ ನಲ್ಲಿ ಏನಿದೆ? ಈ ತೀರ್ಪಿನ ಬಗ್ಗೆ ಬಾಕ್ಸ್ ಆಫೀಸ್ ಸುಲ್ತಾನ್ ಏನಂದ್ರು? ಮುಂದೆ ಓದಿ.....

    ಕಾವೇರಿ ತೀರ್ಪು ಅದ್ರೆ ಭಯ

    ಕಾವೇರಿ ತೀರ್ಪು ಅದ್ರೆ ಭಯ

    ''ಕಾವೇರಿ ಗಲಾಟೆ ಸುಮಾರು ವರ್ಷದಿಂದ ನಡೆಯುತ್ತಲೇ ಇದೆ. ಕಾವೇರಿ ತೀರ್ಪು ಬಂತು ಅಂದ್ರೆ ಎಲ್ಲರಿಗೂ ಒಂಥರಾ ಭಯ ಶುರುವಾಗುತ್ತೆ. ಎಲ್ಲಿ ಬಂದ್ ಆಗುತ್ತೆ, ಎಲ್ಲಿ ಕರ್ಫ್ಯೂ ಹಾಕ್ತಾರೆ ಅಂತ'' - ದರ್ಶನ್, ನಟ

    ದರ್ಶನ್ 'ರಿಯಲ್ ಹೀರೋ', 'ಚಿನ್ನದಂತ ವ್ಯಕ್ತಿ' ಎಂದ ಸ್ಟಾರ್ ನಟ, ಯಾರದು?ದರ್ಶನ್ 'ರಿಯಲ್ ಹೀರೋ', 'ಚಿನ್ನದಂತ ವ್ಯಕ್ತಿ' ಎಂದ ಸ್ಟಾರ್ ನಟ, ಯಾರದು?

    ಹುಟ್ಟುಹಬ್ಬಕ್ಕೆ ಸಿಹಿ ಸುದ್ದಿ

    ಹುಟ್ಟುಹಬ್ಬಕ್ಕೆ ಸಿಹಿ ಸುದ್ದಿ

    ''ಆದ್ರೆ, ಈ ದಿನ ಎಲ್ಲರ ಮನೆಯಲ್ಲೂ ಹಬ್ಬದ ವಾತಾವರಣವಿರುತ್ತೆ. ಯಾಕಂದ್ರೆ ಒಳ್ಳೆ ಸುದ್ದಿ ಸಿಕ್ಕಿದೆ. ಅದರಲ್ಲೂ ನನ್ನ ಹುಟ್ಟುಹಬ್ಬದ ದಿನ ಈ ಸುದ್ದಿ ಸಿಕ್ಕಿರೋದು ನನಗೆ ಖುಷಿ ಕೊಟ್ಟಿದೆ'' ಎಂದು ದರ್ಶನ್ ಪ್ರತಿಕ್ರಿಯಿಸಿದ್ದಾರೆ.

    ಕರ್ನಾಟಕಕ್ಕೆ ಸಿಹಿ ತಂದ ತೀರ್ಪು

    ಕರ್ನಾಟಕಕ್ಕೆ ಸಿಹಿ ತಂದ ತೀರ್ಪು

    ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕದ ಪರ ವಕೀಲರೂ ಹೇಳುವಂತೆ ಈ ತೀರ್ಪಿನಿಂದ ಕರ್ನಾಟಕ ಒಂದಿಷ್ಟು ನಿರಾಳ ಆಗಬಹುದಾಗಿದೆ. ಹದಿನಾಲ್ಕು ಟಿಎಂಸಿ ಅಡಿ ನೀರು ರಾಜ್ಯದ ಪಾಲಿಗೆ ಉಳಿತಾಯ ಆಗಲಿದ್ದು, ಬೆಂಗಳೂರಿಗೆ ಹೆಚ್ಚುವರಿಯಾಗಿ ನಾಲ್ಕು ಟಿಎಂಸಿ ಅಡಿ ನೀರು ದೊರೆಯಲಿದೆ.

    ಕಾವೇರಿ ಅಂತಿಮ ತೀರ್ಪು: ತಮಿಳನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ

    ತೀರ್ಪಿಗೆ ಸ್ವಾಗತ

    ತೀರ್ಪಿಗೆ ಸ್ವಾಗತ

    ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನ ಕರ್ನಾಟಕ ಸರ್ಕಾರ ಸೇರಿದಂತೆ ರಾಜಕೀಯ ನಾಯಕರು ಸ್ವಾಗತಿಸಿದ್ದಾರೆ. ಇದು ಕರ್ನಾಟಕಕ್ಕೆ ಸಮಾಧಾನ ತಂದಿದೆ. ಪೂರ್ತಿ ತೀರ್ಪು ಕಾದು ನೋಡೋಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಸುಪ್ರೀಂ ಕೋರ್ಟ್ ಕಾವೇರಿ ತೀರ್ಪಿಗೆ ಯಾರು, ಏನೆಂದರು?

    English summary
    Supreme court pronounced Cauvery verdict on Friday. It favors Karnataka to some extent. Kannada actor Challenging star darshan reaction about cauvery water dispute.
    Friday, February 16, 2018, 19:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X