ಅಭಿಮಾನಿಗಳಿಂದ ಪೊಲೀಸ್ ಪೇದೆಗೆ ಹಲ್ಲೆ: ಪ್ರತಿಕ್ರಿಯೆ ನೀಡಿದ ದರ್ಶನ್

Recommended Video

ನಮ್ಮ ಬಳಿಯೂ CC ಕ್ಯಾಮರಾ ಇದೆ ಎಂದು ಫ್ಯಾನ್ಸ್ ಬೆಂಬಲಕ್ಕೆ ನಿಂತ ದರ್ಶನ್

ದರ್ಶನ್ ಹುಟ್ಟುಹಬ್ಬದ ದಿನ ಅಭಿಮಾನಿಗಳು ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದರು ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆಯ ಬಗ್ಗೆ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ನಿರ್ಮಾಪಕಿ ಶ್ರುತಿ ನಾಯ್ಡು ಅವರ ಹೊಸ ಹೋಟೆಲ್ ಓಪನಿಂಗ್ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಕೊಂಚ ಕೋಪದಿಂದಲೇ ''ಎಲ್ಲಿ ಏನು ಕೇಳಬೇಕು..'' ಎಂದಿದ್ದಾರೆ.

ನಿಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳು ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ ಇದರ ಬಗ್ಗೆ ನೀವೇನು ಹೇಳುತ್ತೀರಿ ಎಂದರೆ, ''ಏನಾಗಿದೆ.. ನಮ್ಮ ಬಳಿಯೂ ಸಿಸಿ ಟಿವಿ ಇದೆ. ಹುಟ್ಟುಹಬ್ಬಕ್ಕೆ ಬಂದಿರುವವರು ಆ ರೀತಿ ಮಾಡಲು ಬಂದಿಲ್ಲ. ಏನಾಗಿದೆ ಇನ್ನು ಗೊತ್ತಿಲ್ಲ. ಇನ್ನು ನೋಡಬೇಕು.'' ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ.

Darshan Reaction About His Birthday Incident

ಹುಟ್ಟುಹಬ್ಬಕ್ಕೆ ಬಂದ ಅಭಿಮಾನಿಗಳು ಹಲ್ಲೆ ಮಾಡುವುದಿಲ್ಲ. ಆ ರೀತಿ ಮಾಡಿದವರು ಯಾರು ಎನ್ನುವುದು ತಿಳಿದಿಲ್ಲ. ಅದರ ಬಗ್ಗೆ ಪರಿಶೀಲನೆ ಮಾಡಬೇಕು ಎನ್ನುವುದು ದರ್ಶನ್ ಮಾತಾಗಿದೆ.

ಫೆಬ್ರವರಿ 15 ರಂದು ರಾತ್ರಿ ಪೊಲೀಸ್ ಪೇದೆ ದೇವರಾಜ್, ದರ್ಶನ್ ಮನೆ ಮುಂದೆ ಕೆಲಸ ಮಾಡುತ್ತಿರುವ ಸಮಯದಲ್ಲಿ ಅವರು ಮೇಲೆ ಹಲ್ಲೆ ನಡೆದಿದೆ. ಇದನ್ನು ದರ್ಶನ್ ಅಭಿಮಾನಿಗಳು ಮಾಡಿದ್ದಾರೆ ಎಂದು ದೇವರಾಜ್ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

More from Filmibeat

English summary
Actor Darshan reaction about his birthday incident. Constable Devaraj lodged complaint against Kannada Actor Darshan fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X