twitter
    For Quick Alerts
    ALLOW NOTIFICATIONS  
    For Daily Alerts

    'ಮಾಯಾಂಗನೆ ಸುಮಲತಾ' ಟೀಕೆಗೆ ದರ್ಶನ್ ಹೇಳಿದ್ದು ಮತ್ತದೇ ಉತ್ತರ

    |

    Recommended Video

    Lok Sabha Elections 2019 : ಸುಮಲತಾ ಅವರು ಜಯಲಲಿತಾ ಮೀರಿಸುವಂತಹ ಮಾಯಾಂಗನೆ .

    ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚುನಾವಣಾ ಪ್ರಚಾರಕ್ಕೆ ನಟ ದರ್ಶನ್ ಧುಮುಕಿದ ಮೊದಲ ದಿನವೇ, ಅದರ ಪರಿಣಾಮ ಹೇಗಿರುತ್ತೆ ಎಂಬುದು ಅವರ ಅರಿವಿಗೆ ಬಂತು. ಆಗಲೇ ದಾಸ ನಿರ್ಧರಿಸಿಬಿಟ್ಟರು ಕೋಪ ಮಾಡಿಕೊಳ್ಳಬಾರದು, ಬೇಜಾರಗಬಾರದು, ನೊಂದುಕೊಳ್ಳಬಾರದು ಅಂತ.

    ಅಲ್ಲಿಂದ ಯಾರೂ ಏನೇ ಟೀಕೆ ಮಾಡಿದ್ರು, ಆರೋಪ ಮಾಡಿದ್ರು ಯಾವುದಕ್ಕೂ ದರ್ಶನ್ ರಿಯಾಕ್ಟ್ ಮಾಡ್ತಿಲ್ಲ. ಎಲ್ಲವನ್ನ ಕೂಲ್ ಆಗಿ ತೆಗೆದುಕೊಂಡು ಅಬ್ಬರದ ಪ್ರಚಾರ ಮಾಡ್ತಿದ್ದಾರೆ.

    ಮಂಡ್ಯ ಎಫೆಕ್ಟ್: ಒಂದೇ ಚಿತ್ರದಲ್ಲಿ ದರ್ಶನ್-ಯಶ್ ನಟನೆ.! ಮಂಡ್ಯ ಎಫೆಕ್ಟ್: ಒಂದೇ ಚಿತ್ರದಲ್ಲಿ ದರ್ಶನ್-ಯಶ್ ನಟನೆ.!

    ಹೇಗಾದರೂ ಮಾಡಿ ಸುಮಲತಾ ಅವರನ್ನ ಗೆಲ್ಲಿಸಲೇ ಬೇಕು ಎಂದು ಪಣತೊಟ್ಟು ಸತತವಾಗಿ ಮಂಡ್ಯದ ಹಳ್ಳಿ ಹಳ್ಳಿಯಲ್ಲೂ ಮತಯಾಚನೆ ಮಾಡ್ತಿದ್ದಾರೆ. ಈ ನಡುವೆ ಜೆಡಿಎಸ್ ನಾಯಕ ಶಿವರಾಮೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಅವರು ಹೇಳಿಕೆಗಳಿಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ. ಈ ಪ್ರಶ್ನೆಗಳನ್ನ ಕೇಳಿ ಮಾತನಾಡಬೇಕು ಎನಿಸಿದರೂ ಡಿ ಬಾಸ್ ಮಾತ್ರ, ಮತ್ತದೇ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ, ಆ ಪ್ರಶ್ನೆಗಳೇನು? ಮುಂದೆ ಓದಿ...

    'ಸುಮಲತಾ ಮಾಯಾಂಗನೆ' ಎಂದು ಟೀಕೆ

    'ಸುಮಲತಾ ಮಾಯಾಂಗನೆ' ಎಂದು ಟೀಕೆ

    ಜೆಡಿಎಸ್ ಸಂಸದ ಶಿವರಾಮೇಗೌಡ ಅವರು ಮತ್ತೆ ಸುಮಲತಾ ಅಂಬರೀಶ್ ಬಗ್ಗೆ ಟೀಕೆ ಮಾಡಿದ್ದು, 'ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನ ಮೀರಿಸುವಂತಹ ಮಾಯಾಂಗನೆ ಸುಮಲತಾ' ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ನೀವು ಏನು ಹೇಳ್ತೀರಾ ಎಂದಿದ್ದಕ್ಕೆ ನಟ ದರ್ಶನ್ 'ನಾವು ಕೋಪ ಮಾಡಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ನೊಂದುಕೊಳ್ಳುವುದಿಲ್ಲ' ಎಂದಿದ್ದಾರೆ.

    ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು? ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು?

    ಸುಮಲತಾ ಬಿಜೆಪಿ ಅಭ್ಯರ್ಥಿ ಅಂತೆ.!

    ಸುಮಲತಾ ಬಿಜೆಪಿ ಅಭ್ಯರ್ಥಿ ಅಂತೆ.!

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ 'ಸುಮಲತಾ ಅವರು ಬಿಜೆಪಿ ಅಭ್ಯರ್ಥಿ, ಸುಮ್ಮನೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ವೋಟ್ ಹಾಕಬೇಡಿ' ಎಂದು ಹೇಳಿದ್ದಾರೆ. ಈ ಬಗ್ಗೆ ನೀವೇನು ಹೇಳ್ತೀರಾ ಅಂದ್ರೆ, ''ಆ ಹೇಳಿಕೆ ನನಗೆ ಗೊತ್ತಿಲ್ಲ'' ಅಂದ್ರು.

    ಹಸುವಿನ ಹಾಲು ಕರೆದು 'ರೈತ' ಎಂದು ಸಾಬೀತು ಮಾಡಿದ ದರ್ಶನ್ ಹಸುವಿನ ಹಾಲು ಕರೆದು 'ರೈತ' ಎಂದು ಸಾಬೀತು ಮಾಡಿದ ದರ್ಶನ್

    ಸಿನಿಮಾದವರು ಬರಿ ಸಿನಿಮಾಗೆ ಮಾತ್ರ

    ಸಿನಿಮಾದವರು ಬರಿ ಸಿನಿಮಾಗೆ ಮಾತ್ರ

    'ಸಿನಿಮಾದವರು ಬರಿ ಸಿನಿಮಾಗೆ ಮಾತ್ರ ಇರಬೇಕು' ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿದ್ದರು. ಈ ಬಗ್ಗೆ ಮಾತನಾಡಿದ ದರ್ಶನ್ ''ನಾವು ಸಿನಿಮಾದವರು ಸಿನಿಮಾಗೆ ಮಾತ್ರ ಸೀಮಿತವಾಗಿದ್ದೀವಿ. ಆದ್ರೆ, ಇಲ್ಲಿ ಮನೆ ಮಕ್ಕಳ ರೀತಿ ಕೆಲಸ ಮಾಡ್ತಿದ್ದೀವಿ' ಎಂದು ತಿರುಗೇಟು ನೀಡಿದರು.

    "ಮಗನೇ ದರ್ಶನ್ ನೀನು ಈ ಕಾರಣಕ್ಕೆ ಇಷ್ಟ": ಸುಮಲತಾ ಹೀಗೆ ಹೇಳಿದ್ದೇಕೆ ?

    ಟೂರಿಂಗ್ ಟಾಕೀಸ್ ಖಾಲಿ ಆಗುತ್ತಂತೆ

    ಟೂರಿಂಗ್ ಟಾಕೀಸ್ ಖಾಲಿ ಆಗುತ್ತಂತೆ

    ಸುಮಲತಾ ಅವರದ್ದು ಟೂರಿಂಗ್ ಟಾಕೀಸ್. ಫಲಿತಾಂಶ ಬಂದ್ಮೇಲೆ ಅದು ಖಾಲಿ ಆಗುತ್ತೆ ಅಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ 'ನೋಡಲಿ ಬಿಡಿ' ಎಂದಷ್ಟೇ ದರ್ಶನ್ ಉತ್ತರಿಸಿದರು.

    ಪ್ರಚಾರದ ವೇಳೆ ದಾಸನ ಈ ನಡೆಯನ್ನು ಮೆಚ್ಚಿಕೊಂಡ ಅಭಿಮಾನಿಗಳುಪ್ರಚಾರದ ವೇಳೆ ದಾಸನ ಈ ನಡೆಯನ್ನು ಮೆಚ್ಚಿಕೊಂಡ ಅಭಿಮಾನಿಗಳು

    ಸೈನಿಕರನ್ನ ಕಡೆಗಣಿಸಬಾರದು

    ಸೈನಿಕರನ್ನ ಕಡೆಗಣಿಸಬಾರದು

    ಎಚ್.ಡಿ ಕುಮಾರಸ್ವಾಮಿ ಅವರ ಸೈನಿಕರನ್ನ ಅವಮಾನಿಸಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ದರ್ಶನ್ 'ಅವರ ಹೇಳಿಕೆ ಹಿಂದೆ ಮುಂದೆ ಏನು ಇದೆಯೋ ಗೊತ್ತಿಲ್ಲ. ಆದ್ರೆ, ಸೈನಿಕರನ್ನ ಕಡೆಗಣಿಸಬಾರದು. ರೈತರು ಹೇಗೋ ಸೈನಿಕರು ಹಾಗೆ. ಅವರು ಅಲ್ಲಿ ಇರೋದ್ರಿಂದಲೇ ನಾವು ಇಲ್ಲಿ ಸುಖವಾಗಿ ಇರೋದು'' ಎಂದರು.

    English summary
    Kannada actor, challenging star darshan has respond some of the allegation of Jds leaders.
    Friday, April 12, 2019, 18:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X