For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಕೈ ಸೇರಿತು ಸೈಮಾ ಪ್ರಶಸ್ತಿ: ಇದು ಮೂರನೇ ಅವಾರ್ಡ್

  |

  2019ನೇ ಸಾಲಿನ ಸೈಮಾ ಪ್ರಶಸ್ತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಯಜಮಾನ' ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ ಸೇರಿದಂತೆ ಎಂಟು ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದೆ. ಒಟ್ಟು 11 ವಿಭಾಗದಲ್ಲಿ ಯಜಮಾನ ಸಿನಿಮಾ ನಾಮಿನೇಟ್ ಆಗಿತ್ತು. ಹೈದರಾಬಾದ್‌ನಲ್ಲಿ ನಡೆದ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ನಟ ದರ್ಶನ್ ಪಾಲ್ಗೊಂಡಿರಲಿಲ್ಲ. ದಾಸನ ಪರವಾಗಿ ನಿರ್ಮಾಪಕಿ ಶೈಲಜಾ ನಾಗ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದರು.

  ಏರ್ ಪೋರ್ಟ್ ನಿಂದ ನೇರವಾಗಿ ಡಿ ಬಾಸ್ ಮನೆಗೆ ಬಂದ ಯಜಮಾನ ನಿರ್ಮಾಪಕಿ

  ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದ ನಂತರ ನೇರವಾಗಿ ಡಿ ಬಾಸ್‌ ಮನೆಗೆ ಭೇಟಿ ನೀಡಿದ ನಿರ್ಮಾಪಕಿ ಶೈಲಜಾ ನಾಗ್, ದರ್ಶನ್ ಅವರ ಕೈಗೆ ಸೈಮಾ ಪ್ರಶಸ್ತಿ ಸೇರಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ಶೈಲಜಾ ನಾಗ್ ಅವರೇ ಟ್ವಿಟ್ಟರ್, ಫೇಸ್‌ಬುಕ್, ಇನ್ಸ್ಟಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ.

  ಸೈಮಾ 2020: 'ಲವ್‌ ಮಾಕ್ಟೆಲ್' ಅತ್ಯುತ್ತಮ ಸಿನಿಮಾ, ಡಾಲಿ ಅತ್ಯುತ್ತಮ ನಟಸೈಮಾ 2020: 'ಲವ್‌ ಮಾಕ್ಟೆಲ್' ಅತ್ಯುತ್ತಮ ಸಿನಿಮಾ, ಡಾಲಿ ಅತ್ಯುತ್ತಮ ನಟ

  ಇನ್ನು 2019ನೇ ಸಾಲಿನ ಸೈಮಾದಲ್ಲಿ ಯಜಮಾನ ಚಿತ್ರಕ್ಕೆ ಹೆಚ್ಚು ಪ್ರಶಸ್ತಿ ಸಿಕ್ಕ ಹಿನ್ನೆಲೆ ಟ್ವಿಟ್ಟರ್ ಮೂಲಕ ದರ್ಶನ್ ಶುಭಕೋರಿದ್ದರು. ಜೊತೆಗೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. 'ಯಜಮಾನ' ಚಿತ್ರದ ಅಭೂತಪೂರ್ವ ಯಶಸ್ಸು ಹಾಗೂ ಸಿಗುತ್ತಿರುವ ಮನ್ನಣೆಗೆ ನಮ್ಮ ಸೆಲೆಬ್ರಿಟಿಗಳೇ ಮುಖ್ಯ ಕಾರಣ. ನಮ್ಮ ತಂಡ ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ. #SIIMA ಆಯೋಜಕರಿಗೂ ನಮ್ಮ ತಂಡದಿಂದ ಹೃದಯಪೂರ್ವಕ ಧನ್ಯವಾದಗಳು'' ಎಂದಿದ್ದರು. ಮುಂದೆ ಓದಿ....

  ಸೈಮಾ 2019: 'ಯಜಮಾನ'ಗೆ ಪ್ರಶಸ್ತಿಗಳ ಸುರಿಮಳೆಸೈಮಾ 2019: 'ಯಜಮಾನ'ಗೆ ಪ್ರಶಸ್ತಿಗಳ ಸುರಿಮಳೆ

  ಎಂಟು ವಿಭಾಗದಲ್ಲಿ ಯಜಮಾನಗೆ ಪ್ರಶಸ್ತಿ

  ಎಂಟು ವಿಭಾಗದಲ್ಲಿ ಯಜಮಾನಗೆ ಪ್ರಶಸ್ತಿ

  ಅತ್ಯುತ್ತಮ ನಟ (ದರ್ಶನ್)

  ಅತ್ಯುತ್ತಮ ಸಿನಿಮಾ (ಯಜಮಾನ)

  ಅತ್ಯುತ್ತಮ ನಿರ್ದೇಶಕ (ವಿ ಹರಿಕೃಷ್ಣ-ಪೊನ್ ಕುಮಾರ್)

  ಅತ್ಯುತ್ತಮ ನಟಿ (ವಿಮರ್ಶಾತ್ಮಕ) ರಶ್ಮಿಕಾ ಮಂದಣ್ಣ

  ಅತ್ಯುತ್ತಮ ಸಂಗೀತ ನಿರ್ದೇಶಕ (ವಿ ಹರಿಕೃಷ್ಣ)

  ಅತ್ಯುತ್ತಮ ಹಿನ್ನೆಲೆ ಗಾಯಕ (ಶಿವನಂದಿ ಹಾಡು)

  ಅತ್ಯುತ್ತಮ ಹಾಸ್ಯನಟ (ಸಾಧುಕೋಕಿಲಾ)

  ಅತ್ಯುತ್ತಮ ಪೋಷಕ ನಟ (ದೇವರಾಜ್)

  ದರ್ಶನ್‌ಗೆ ಮೂರನೇ ಸೈಮಾ

  ದರ್ಶನ್‌ಗೆ ಮೂರನೇ ಸೈಮಾ

  ದರ್ಶನ್‌ಗೆ ಇದುವರೆಗೂ ಎರಡು ಚಿತ್ರಕ್ಕಾಗಿ ಸೈಮಾ ಪ್ರಶಸ್ತಿ ಸಿಕ್ಕಿತ್ತು. ಈಗ ಯಜಮಾನ ಸಿನಿಮಾದೊಂದಿಗೆ ಅದರ ಸಂಖ್ಯೆ ಮೂರಕ್ಕೆ ಏರಿದೆ. ಇದಕ್ಕೂ ಮುಂಚೆ 2012ರಲ್ಲಿ ಸಾರಥಿ ಚಿತ್ರಕ್ಕಾಗಿ ಅತ್ಯುತ್ತಮ ನಟ ಸೈಮಾ ಅವಾರ್ಡ್ ಪಡೆದಿದ್ದರು. ಅದಾದ ನಂತರ 2013ರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಟನೆಗಾಗಿ ಸೈಮಾ ಪ್ರಶಸ್ತಿ ಪಡೆದಿದ್ದರು. ಈಗ 2019ನೇ ಸಾಲಿನಲ್ಲಿ ಯಜಮಾನ ಚಿತ್ರಕ್ಕೆ ಸೈಮಾ ಪಡೆದುಕೊಂಡಿದ್ದಾರೆ.

  'ಕ್ರಾಂತಿ' ಶುರು ಮಾಡಿದ ದಾಸ

  'ಕ್ರಾಂತಿ' ಶುರು ಮಾಡಿದ ದಾಸ

  'ಯಜಮಾನ' ಸಿನಿಮಾದ ಯಶಸ್ಸಿನ ಬಳಿಕ ನಿರ್ಮಾಪಕಿ ಶೈಲಜಾ ನಾಗ್ ಅವರ ಜೊತೆ ಮತ್ತೊಂದು ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದರು. ಆ ಸಿನಿಮಾ ಈಗ ಆರಂಭವಾಗಿದ್ದು, ಗೌರಿ-ಗಣೇಶ ಹಬ್ಬದ ಪ್ರಯುಕ್ತ ಟೈಟಲ್ ಲಾಂಚ್ ಆಗಿತ್ತು. ದರ್ಶನ್ 55ನೇ ಸಿನಿಮಾ ಇದಾಗಿದ್ದು, ಕ್ರಾಂತಿ ಎಂದು ಹೆಸರಿಡಲಾಗಿದೆ. ವಿ ಹರಿಕೃಷ್ಣ ಈ ಚಿತ್ರಕ್ಕೆ ಸ್ವತಂತ್ರವಾಗಿ ನಿರ್ದೇಶನ ಮಾಡ್ತಿದ್ದಾರೆ. ಸದ್ಯಕ್ಕೆ ಪೂರ್ವ ತಯಾರಿ ಮಾಡುತ್ತಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲಿದೆ.

  ಯಜಮಾನ ಸಿನಿಮಾ ಬಗ್ಗೆ

  ಯಜಮಾನ ಸಿನಿಮಾ ಬಗ್ಗೆ

  ವಿ ಹರಿಕೃಷ್ಣ ಮತ್ತು ಪೊನ್ ಕುಮಾರ್ ಜಂಟಿಯಾಗಿ ಈ ಸಿನಿಮಾ ನಿರ್ದೇಶಿಸಿದ್ದರು. ಮೀಡಿಯಾ ಹೌಸ್ ಸ್ಟುಡಿಯೋಸ್ ಅಡಿ ಶೈಲಜಾ ನಾಗ್ ನಿರ್ಮಾಣ ಮಾಡಿದ್ದರು. ದರ್ಶನ್ ನಾಯಕನಾಗಿದ್ದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ದೇವರಾಜ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಸಾಧು ಕೋಕಿಲಾ ಸೇರಿದಂತೆ ಹಲವರು ನಟಿಸಿದ್ದರು. ವಿಮರ್ಶಾತ್ಮಕವಾಗಿ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಸಕ್ಸಸ್ ಆಗಿತ್ತು.

  English summary
  Kannada Actor Darshan receives siima award from Yajamana film producer Shylaja Nag. yesterday she taken award behalf of darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X