twitter
    For Quick Alerts
    ALLOW NOTIFICATIONS  
    For Daily Alerts

    ಖಡಕ್ ಟ್ರೈಲರ್ ಮೂಲಕ 'ಟಕ್ಕರ್' ಕೊಟ್ಟು ಸಿನಿಮಾ ನೋಡಿ ಅಂತಿದೆ ಟೀಮ್

    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧಿ ಮನೋಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿರುವ ಮೊದಲ ಸಿನಿಮಾ 'ಟಕ್ಕರ್'. ಈ ಸಿನಿಮಾವೀಗ ಬಿಡುಗಡೆಗೆ ಸಿದ್ದವಾಗಿದೆ. ಮೇ 6ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಭರವಸೆಯ ನಟನ ಎಂಟ್ರಿ ಕೊಡುತ್ತಿದ್ದಾರೆ.

    ಮನೋಜ್ ಕುಮಾರ್ ಬೆಳ್ಳಿ ಪರದೆ ಮೇಲೆ ಮಿಂಚಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮನೋಜ್ ಕುಮಾರ್‌ ಮೊದಲ ಚಿತ್ರಕ್ಕೆ ಜೋಡಿಯಾಗಿ 'ಕನ್ನಡತಿ' ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ 'ಟಕ್ಕರ್' ಸಿನಿಮಾದ ಅಪ್ಡೇಟ್‌ಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮಾಸ್ ಪೋಸ್ಟರ್, ಹಾಡು ಹಾಗೂ ಟೀಸರ್‌ಗಳು ಭರವಸೆ ಮೂಡಿಸಿವೆ. ಇದೀಗ ಚಿತ್ರದ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಟ್ರೇಲರ್ ಬಿಡುಗಡೆಯಾಗಿದೆ.

    'ಟಕ್ಕರ್' ಚಿತ್ರದ ಮಾಸ್ ಅಂಡ್ ಥ್ರಿಲ್ಲಿಂಗ್ ಟ್ರೈಲರ್ ಬಿಡುಗಡೆಯಾಗಿದೆ. ಕಂಟೆಂಟ್ ನೋಡಿದ ಮೇಲೆ 'ಟಕ್ಕರ್' ಮತ್ತಷ್ಟು ಕಿಕ್ಕೇರಿಸಿದೆ. ಮನೋಜ್ ಕುಮಾರ್ ಹೊಸಮುಖ ಎನಿಸಿದಷ್ಟು ಅಭಿನಯ ತೋರಿದ್ದಾರೆ. ಪ್ರೇಕ್ಷಕರನ್ನು ಸೆಳೆಯುವ ಇಂಟ್ರಸ್ಟಿಂಗ್ ವಿಷಯಗಳು ಚಿತ್ರದಲ್ಲಿದೆ ಅನ್ನೋದು ಜಾಹೀರಾಗಿದೆ. ಸಿನಿಮಾ ಟ್ರೈಲರ್ ಸದ್ದು ಮಾಡಿದ್ದಷ್ಟೇ ಸಿನಿಮಾ ಕೂಡ ಟಕ್ಕರ್ ಕೊಡುವ ಹಾಗಿದ್ದರೆ, ಸಿನಿಮಾ ಗೆದ್ದ ಸಿಹಿಯನ್ನು ಮನೋಜ್ ಸವಿಯೋದ್ರಲ್ಲಿ ಅನುಮಾನವೇ ಇಲ್ಲ.

    Darshan relative Manoj kumar and Rajani Raghvan Starrer Takkar Movie Releasing On May 6th

    ದರ್ಶನ್ ಸಂಬಂಧಿ ಮನೋಜ್ ಕುಮಾರ್ ನಟಿಸಿದ ಸಿನಿಮಾವನ್ನು ರಘು ಶಾಸ್ತ್ರಿ ಚಿತ್ರಕ್ಕೆ ಕಥೆ- ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 'ರನ್ ಆಂಟನಿ' ರಘು ಶಾಸ್ತ್ರ ನಿರ್ದೇಶಿಸಿದ ಮೊದಲ ಸಿನಿಮಾ. ಇದೀಗ 'ಟಕ್ಕರ್' ಮೂಲಕ ಮತ್ತೊಮ್ಮೆ ಮನರಂಜನೆ ನೀಡಲು ಬಂದಿದ್ದಾರೆ. 'ಟಕ್ಕರ್'ನಲ್ಲಿ ಸೈಬರ್ ಕ್ರೈಂ ಕಥೆಯನ್ನು ಹೊತ್ತು ಬಂದಿದ್ದಾರೆ.

    ಥ್ರಿಲ್ಲಿಂಗ್ ಎಲಿಮೆಂಟ್ ಜೊತೆ ಮಾಸ್ ಆಕ್ಷನ್, ಪ್ರೇಮ್ ಕಹಾನಿ ಎಲ್ಲವೂ ಇರುವ 'ಟಕ್ಕರ್' ಮೇ 6ಕ್ಕೆ ಪ್ರೇಕ್ಷಕರ ಮಡಿಲಿಗೆ ಬೀಳಲಿದೆ. ಬೆರಳ ತುದಿಯಲ್ಲೇ ಪ್ರಪಂಚ ತೋರಿಸುವ ಮೊಬೈಲ್ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಹೆಣ್ಣು ಮಕ್ಕಳ ಖಾಸಗಿತನಕ್ಕೆ ಮಾರಕ. ಅದು ಹೇಗೆ? ಯಾವ ರೀತಿ? ಅನ್ನೋದನ್ನು ಸಿನಿಮ್ಯಾಟಿಕ್ ಆಗಿ, ಪವರ್ ಫುಲ್ ಆಗಿ 'ಟಕ್ಕರ್'ನಲ್ಲಿ ಹೇಳಲಾಗಿದೆ.

    Darshan relative Manoj kumar and Rajani Raghvan Starrer Takkar Movie Releasing On May 6th

    ಸೈಬರ್ ಕ್ರೈಂ ಕಥೆಗೆ ಬೇಕಾದ ತಾಂತ್ರಿಕ ಶ್ರೀಮಂತಿಕೆ 'ಟಕ್ಕರ್' ಸಿನಿಮಾದಲ್ಲಿದೆ. ಅದು ಟ್ರೈಲರ್‌ನಲ್ಲೂ ಸಾಬೀತಾಗಿದೆ. 'ರಂಗಿತರಂಗ', 'ವಿಕ್ರಾಂತ್ ರೋಣ' ಖ್ಯಾತಿಯ ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಕೆ.ಎಂ ಪ್ರಕಾಶ್ ಸಂಕಲನ 'ಟಕ್ಕರ್' ಚಿತ್ರಕ್ಕಿದೆ. ಭಜರಂಗಿ ಲೋಕಿ, ಸುಮಿತ್ರ, ಸಾಧುಕೋಕಿಲ ಸೇರಿದಂತೆ ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 'ಹುಲಿರಾಯ' ಸಿನಿಮಾ ಖ್ಯಾತಿಯ ನಿರ್ಮಾಪಕ ನಾಗೇಶ್ ಕೋಗಿಲು ಎಸ್ ಎಲ್ ಎನ್ ಕ್ರಿಯೇಷನ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

    English summary
    Darshan relative Manoj kumar and Rajani Raghvan Starrer Takkar Movie Releasing On May 6th, Know More.
    Friday, April 29, 2022, 14:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X