twitter
    For Quick Alerts
    ALLOW NOTIFICATIONS  
    For Daily Alerts

    'ಅಪ್ಪ ಇಂಡಸ್ಟ್ರಿಯಲ್ಲಿ ಇದ್ರೆ ಬೆಳೆಯೋದು ಕಷ್ಟ' ಎಂದ ದರ್ಶನ್

    |

    Recommended Video

    ಚಾಣಾಕ್ಷ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ದರ್ಶನ್ ಹೀಗ್ ಹೇಳಿದ್ಯಾಕೆ? | FILMIBEAT KANNADA

    ಅಪ್ಪ ಚಿತ್ರರಂಗದಲ್ಲಿ ಇದ್ದರೆ, ಅವರ ಮಕ್ಕಳು ಕೂಡ ಅದೇ ಹಾದಿಯಲ್ಲಿ ನಡೆಯುತ್ತಾರೆ. ಎಲ್ಲ ಭಾಷೆಗಳಲ್ಲಿ ಅನೇಕ ಸ್ಟಾರ್ ಗಳ ಮಕ್ಕಳು ತಂದೆ, ತಾಯಿಯಂತೆ ಚಿತ್ರರಂಗಕ್ಕೆ ಪ್ರವೇಶ ಮಾಡಿ ಅದೇ ಸಂಪ್ರದಾಯವನ್ನು ಮುಂದುವರೆಸುತ್ತಾರೆ.

    ಬ್ಯಾಗ್ರಾಂಡ್ ಇದ್ದು, ಅಪ್ಪ ಅಥವಾ ಫ್ಯಾಮಿಲಿ ಹೆಸರು ಇದ್ದರೆ, ಚಿತ್ರರಂಗದಲ್ಲಿ ಸುಲಭವಾಗಿ ಬೆಳೆಯಬಹುದು ಎನ್ನುವುದು ಅನೇಕರ ಅಂದಾಜು. ಆದರೆ, ಅಪ್ಪ ಚಿತ್ರರಂಗದಲ್ಲಿ ಇದ್ದರೆ ಮಕ್ಕಳಿಗೆ ಎಷ್ಟೊಂದು ಕಷ್ಟ ಎದುರಾಗುತ್ತದೆ ಎಂದು ದರ್ಶನ್ ಹೇಳಿದ್ದಾರೆ.

    'D 53' ಪೋಸ್ಟರ್ ಹಿಂದಿನ ಪ್ರತಿಭಾವಂತ ಇವರೇ 'D 53' ಪೋಸ್ಟರ್ ಹಿಂದಿನ ಪ್ರತಿಭಾವಂತ ಇವರೇ

    ಅಪ್ಪ ದೊಡ್ಡ ನಟ ಆಗಿದ್ದರೂ ದರ್ಶನ್ ತಮ್ಮ ಪರಿಶ್ರಮದಿಂದ ಮೇಲೆ ಬಂದಿದ್ದಾರೆ. ಚಿತ್ರರಂಗದಲ್ಲಿ ನಟರ ಮಕ್ಕಳ ಕಷ್ಟ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಮುಂದೆ ಓದಿ...

    'ಚಾಣಾಕ್ಷ' ಚಿತ್ರದ ಕಾರ್ಯಕ್ರಮ

    'ಚಾಣಾಕ್ಷ' ಚಿತ್ರದ ಕಾರ್ಯಕ್ರಮ

    ನಟ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ಅಭಿನಯದ 'ಚಾಣಾಕ್ಷ' ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ನಟ ದರ್ಶನ್ ಆಗಮಿಸಿದ್ದರು. ಈ ವೇಳೆ ಧರ್ಮ ಕೀರ್ತಿರಾಜ್ ಬಗ್ಗೆ ಮಾತನಾಡಿದ ದರ್ಶನ್ ಅಪ್ಪನ ಹೆಸರಿದ್ದರೇ ಇಂಡಸ್ಟ್ರಿಯಲ್ಲಿ ಬೆಳೆಯುವುದು ಕಷ್ಟ ಎಂದರು.

    ನಮ್ಮಷ್ಟು ಇನ್ಯಾರು ಕಷ್ಟಪಟ್ಟಿಲ್ಲ

    ನಮ್ಮಷ್ಟು ಇನ್ಯಾರು ಕಷ್ಟಪಟ್ಟಿಲ್ಲ

    ''ಅವ್ರ ತಂದೆ ಇಂಡಸ್ಟ್ರಿಯಲ್ಲಿ ಇದ್ರೂ, ಹಾಗಾಗಿ ಅವರು ಚಿತ್ರರಂಗಕ್ಕೆ ಬಂದು ಬಿಟ್ಟರು. ಎಂಬ ಮಾತುಗಳನ್ನು ನಮಗೆ ಎಲ್ಲರೂ ಹೇಳುತ್ತಾರೆ. ಆದರೆ, ನಮ್ಮ ಅಪ್ಪಂದಿರು ಇಂಡಸ್ಟ್ರಿಯಲ್ಲಿ ಇರೋದಕ್ಕೆ ನಮ್ಮಷ್ಟು ಇನ್ಯಾರು ಕಷ್ಟಪಟ್ಟಿಲ್ಲ.'' ಎಂದಿದ್ದಾರೆ ದರ್ಶನ್.

    'ಕುರುಕ್ಷೇತ್ರ' ನೋಡಿದ ರಾಕ್ ಲೈನ್ ಏನಂದ್ರು, ಜಗ್ಗೇಶ್ ನುಡಿದ ಭವಿಷ್ಯವೇನು.? 'ಕುರುಕ್ಷೇತ್ರ' ನೋಡಿದ ರಾಕ್ ಲೈನ್ ಏನಂದ್ರು, ಜಗ್ಗೇಶ್ ನುಡಿದ ಭವಿಷ್ಯವೇನು.?

    ನಮ್ಮ ಕಥೆ ಮುಗಿಯಿತು

    ನಮ್ಮ ಕಥೆ ಮುಗಿಯಿತು

    ''ಒಬ್ಬ ನಾರ್ಮಲ್ ಆಗಿ ಬಂದವನು ಹೇಗೋ ಇಂಡಸ್ಟ್ರಿಯಲ್ಲಿ ತೂರಿಕೊಂಡು ಬರಬಹುದು. ಆದರೆ, ನಮಗೆ ಬರುವಾಗಲೇ ತಲೆಯಲ್ಲಿ ಅನೇಕ ವಿಷಯ ಓಡುತ್ತಿರುತ್ತದೆ. ಅವರ ತಂದೆ ಹಾಗೆ ಮಾಡುತ್ತಿದ್ದರು, ಇವನು ಯಾಕೆ ಹೀಗೆ ಮಾಡುತ್ತಾನೆ ಅಂತ ಹೇಳಿ ಬಿಟ್ಟರೆ ನಮ್ಮ ಕಥೆ ಮುಗಿಯಿತು.'' - ದರ್ಶನ್, ನಟ

    ನಾವು ಉಳಿದುಕೊಂಡಿರುವುದು ಹೆಚ್ಚು

    ನಾವು ಉಳಿದುಕೊಂಡಿರುವುದು ಹೆಚ್ಚು

    ''ಈ ರೀತಿಯ ಎಲ್ಲ ಮಾತುಗಳನ್ನು ಮೀರಿ ಇವತ್ತು ಇವತ್ತಿನ ವರೆಗೆ ನಾವು ಬಂದಿರುವುದು, ಇವತ್ತು ನಾವು ಉಳಿದುಕೊಂಡಿರುವುದು ಹೆಚ್ಚು. ಅದು ದೊಡ್ಡ ಸಾಧನೆ ಅಂತ ಅಲ್ಲ. ತಕ್ಕ ಮಟ್ಟಿಗೆ ಬಂದಿದ್ದೇವೆ. ಇನ್ನೂ ಮಾಡುವುದು ತುಂಬ ಇದೆ.'' - ದರ್ಶನ್, ನಟ

    ಮಕ್ಕಳ ಭವಿಷ್ಯಕ್ಕಾಗಿ ಮಕ್ಕಳ ರಕ್ಷಣೆಗೆ ನಿಂತ 'ಯಜಮಾನ' ಮಕ್ಕಳ ಭವಿಷ್ಯಕ್ಕಾಗಿ ಮಕ್ಕಳ ರಕ್ಷಣೆಗೆ ನಿಂತ 'ಯಜಮಾನ'

    ವೇದಿಕೆ ಮೇಲೆ ಖಳ ನಟರ ಮಕ್ಕಳು

    ವೇದಿಕೆ ಮೇಲೆ ಖಳ ನಟರ ಮಕ್ಕಳು

    ಕಾರ್ಯಕ್ರಮದ ವೇದಿಕೆ ಮೇಲೆ ಕನ್ನಡ ಖಳನಟರ ಮಕ್ಕಳಾದ ತರುಣ್ ಸುಧೀರ್, ವಿನೋದ್ ಪ್ರಭಾಕರ್, ಧರ್ಮ ಕೀರ್ತಿ ರಾಜ್ ಇದ್ದರೂ. ಈ ಎಲ್ಲರ ಮನಸ್ಸಿನ ನೋವನ್ನು ದರ್ಶನ್ ಹೇಳಿದರು. ಅವರಿಗೂ ಕೂಡ ದರ್ಶನ್ ಮಾತು ಬಹಳ ಇಷ್ಟ ಆಯ್ತು.

    ಚಿತ್ರಕ್ಕೆ ಶುಭ ಹಾರೈಕೆ

    ಚಿತ್ರಕ್ಕೆ ಶುಭ ಹಾರೈಕೆ

    'ಚಾಣಾಕ್ಷ' ಚಿತ್ರದ ಬಗ್ಗೆ ಮಾತನಾಡಿದ ದರ್ಶನ್ '' ಸಿನಿಮಾದ ಹಾಡುಗಳು, ಟ್ರೇಲರ್ ಗಳು ಚೆನ್ನಾಗಿದೆ. ಧರ್ಮಗೆ 'ನವಗ್ರಹ' ಸಿನಿಮಾದಲ್ಲಿ ಕ್ಯಾಬರಿಸ್ ಅಂತ ಹೇಳುತ್ತಿದ್ದೇವು. ಅಲ್ಲಿಂದ ಈಗ ಅವರು ಆಕ್ಷನ್ ಹೀರೋ ಆಗಿ ಬೆಳೆದಿದ್ದಾರೆ. ಧರ್ಮ ಹಾಗೂ ನಾಯಕಿಯರು ಹಾಡುಗಳಲ್ಲಿ ತುಂಬ ಚೆನ್ನಾಗಿ ಕಾಣುತ್ತಾರೆ. ನಿರ್ದೇಶಕ, ನಿರ್ಮಾಪಕ ಇಡೀ ತಂಡಕ್ಕೆ ಒಳ್ಳೆಯದಾಗಲಿ.'' ಎಂದು ಶುಭ ಕೋರಿದರು.

    Read more about: darshan sandalwood
    English summary
    Kannada actor Darshan released Dharma Keerthiraj's 'Chanaksha' kannada movie audio.
    Thursday, November 15, 2018, 14:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X