For Quick Alerts
  ALLOW NOTIFICATIONS  
  For Daily Alerts

  ಪ್ರಣಮ್ ದೇವರಾಜ್ ಬಗ್ಗೆ ದರ್ಶನ್ ಮೆಚ್ಚುಗೆ ಮಾತು

  By Pavithra
  |

  ಚಾಲೆಂಜಿಂಗ್ ಸ್ಟಾರ್ ತಾವು ಸಿನಿಮಾರಂಗದಲ್ಲಿ ಸ್ಟಾರ್ ಆದ ನಂತರ ತಮ್ಮ ಸುತ್ತಾ ಮುತ್ತಲಿರುವ ಸ್ನೇಹಿತರನ್ನು ಜೊತೆಯಲ್ಲೇ ಬೆಳೆಸಬೇಕೆಂಬ ಆಸೆಯನ್ನು ಹೊತ್ತುಕೊಂಡಿರುವ ಕಲಾವಿದ. ಅದರಂತೆಯೇ ತಮ್ಮ ಜೊತೆಯಲ್ಲಿರುವವರಿಗೆ ಹಾಗೂ ಅವರ ಸಿನಿಮಾಗಳಿಗೂ ಬೆಂಬಲ ನೀಡುತ್ತಾ ಬಂದಿದ್ದಾರೆ.

  ಇತ್ತೀಚಿಗಷ್ಟೆ ನಟ ಪ್ರಣಮ್ ದೇವರಾಜ್ ಅಭಿನಯದ 'ಕುಮಾರಿ21ಎಫ್' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಪ್ರಣಮ್ ದೇವರಾಜ್ ಅವರನ್ನು ಚಿತ್ರರಂಗಕ್ಕೆ ಸಂತಸದಿಂದ ಬರಮಾಡಿಕೊಂಡಿದ್ದಾರೆ.

  'ಕುಮಾರಿ21F' ಟ್ರೇಲರ್ ಬಿಡುಗಡೆ ಮಾಡಲಿರುವ ಡಿ ಬಾಸ್ 'ಕುಮಾರಿ21F' ಟ್ರೇಲರ್ ಬಿಡುಗಡೆ ಮಾಡಲಿರುವ ಡಿ ಬಾಸ್

  ಇದೇ ವೇಳೆ ಪ್ರಣಮ್ ಹಾಗೂ ಪ್ರಜ್ವಲ್ ಇಬ್ಬರ ಜೊತೆಗಿನ ಒಡನಾಟದ ಬಗ್ಗೆಯೂ ದರ್ಶನ್ ಬಿಟ್ಟುಕೊಟ್ಟಿದ್ದಾರೆ. ಸಾಕಷ್ಟು ವರ್ಷಗಳಿಂದ ಪ್ರಜ್ವಲ್ ಹಾಗೂ ಪ್ರಣಮ್ ಅವರನ್ನು ನೋಡುತ್ತಾ ಬಂದಿದ್ದು ಪ್ರಣಮ್ ಚಿತ್ರರಂಗಕ್ಕೆ ಬರುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.

  Darshan released the movie Kumari 21F trailer

  'ಕುಮಾರಿ 21 ಎಫ್' ಈಗಿನ ಟ್ರೆಂಡ್ ಗೆ ತಕ್ಕಂತ ಕಥಾಹಂದರ ಹೊಂದಿರುವ ಸಿನಿಮಾ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ. ಇದೇ ಮೊದಲ ಬಾರಿಗೆ ಪ್ರಣಮ್ ನಾಯಕನಾಗಿ ನಟಿಸುತ್ತಿದ್ದು, ನಿಧಿ ಕುಶಾಲಪ್ಪ ನಾಯಕಿಯಾಗಿ ನಟಿಸಿದ್ದಾರೆ. ಶ್ರೀಮನ್ ವೇಮುಲ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಂಪತ್ ಕುಮಾರ್ ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ.

  English summary
  Kannada actor Darshan released the movie 'Kumari 21F' trailer. Pranam Devaraj is acting in 'Kumari 21f' film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X