twitter
    For Quick Alerts
    ALLOW NOTIFICATIONS  
    For Daily Alerts

    ಮಂಡ್ಯ ಪ್ರಚಾರದಲ್ಲಿ ಈ ನಾಲ್ಕು ಹೆಸರನ್ನ ಪದೇ ಪದೇ ನೆನಪಿಸುತ್ತಿರುವ ದರ್ಶನ್

    |

    Recommended Video

    ಇನ್ನೂ 100 ವರ್ಷ ಆದ್ರೂ ಈ 4 ಹೆಸರು ಯಾರು ಮರೆಯೊಲ್ಲ ನೆನಪಿರಲಿ..!

    ಮಂಡ್ಯ ಚುನಾವಣಾ ಪ್ರಚಾರದಲ್ಲಿರುವ ನಟ ದರ್ಶನ್, ಬಹುತೇಕ ಕಡೆ ಒಂದು ಮಾತನ್ನ ಹೇಳುತ್ತಲೇ ಇದ್ದಾರೆ. ದರ್ಶನ್ ಹೋದ ಕಡೆಯಲ್ಲೆಲ್ಲಾ ಡಿ ಬಾಸ್, ಡಿ ಬಾಸ್ ಎಂದು ಘೋಷಣೆಗಳು ಮೊಳಗುತ್ತಿದೆ. ಹಾರಗಳು, ಪಟಾಕಿಗಳ ಸದ್ದು ಕೇಳುತ್ತಿದೆ. ಜೈಕಾರಗಳು ಹೆಚ್ಚುತ್ತಿದೆ.

    ಇದೆಲ್ಲದರ ಮಧ್ಯೆ ದರ್ಶನ್ ಅವರು ನಾಲ್ಕು ಜನರನ್ನ ಪದೇ ಪದೇ ನೆನಪಿಸಿಕೊಳ್ಳುತ್ತಿದ್ದಾರೆ. ಡಾ ರಾಜ್, ಡಾ ವಿಷ್ಣುವರ್ಧನ್, ಶಂಕರ್ ನಾಗ್ ಮತ್ತು ಅಂಬರೀಶ್ ಹೆಸರುಗಳನ್ನ ಪ್ರಸ್ತಾಪಿಸುತ್ತಿದ್ದಾರೆ.

    ಮತ್ತೆ 'ಜೋಡೆತ್ತುಗಳ' ಕಾಲೆಳೆದ ಸಿಎಂ ಕುಮಾರಸ್ವಾಮಿ ಮತ್ತೆ 'ಜೋಡೆತ್ತುಗಳ' ಕಾಲೆಳೆದ ಸಿಎಂ ಕುಮಾರಸ್ವಾಮಿ

    'ದರ್ಶನ್ ಅಲ್ಲ ದರ್ಶನ್ ಅಂತವರು ಯಾರೇ ಬಂದರೂ, ಇನ್ನೂ ನೂರು ವರ್ಷವಾದರೂ ಡಾ ರಾಜ್, ಡಾ ವಿಷ್ಣುವರ್ಧನ್, ಶಂಕರ್ ನಾಗ್ ಮತ್ತು ಅಂಬರೀಶ್ ಹೆಸರನ್ನು ಅಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ' ಎಂದು ನಟ ದರ್ಶನ್ ಹೇಳುತ್ತಿದ್ದಾರೆ.

    Darshan Remembered legends names in mandya campaign

    ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖಿಲ್ ಹೇಳಿದ್ದು ಹೀಗೆದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖಿಲ್ ಹೇಳಿದ್ದು ಹೀಗೆ

    ''ನಿಮ್ಮ ಬಳಿ ಏನೇ ಕೊಟ್ಟು ಏನು ಬೇಕಾದರೂ ತಗೋಬಹುದು. ಆದ್ರೆ, ನಮ್ಮ ಮನಸ್ಸಿನಲ್ಲಿರುವ ಅಭಿಮಾನಿವನ್ನ ತಗೊಳ್ಳುವುದಕ್ಕೆ ಆಗಲ್ಲ. ಈ ಎಲ್ಲರಿಗೂ ನಿಮ್ಮ ಸೇವೆ ಮಾಡಲು ಅವಕಾಶ ಕೊಟ್ಟಿದ್ದೀರಾ. ಈಗ ಸುಮಲತಾ ಅವರು ನಿಮ್ಮ ಸೇವೆ ಮಾಡಲು ಅವಕಾಶ ಕೇಳುತ್ತಿದ್ದಾರೆ. ಒಂದು ಅವಕಾಶ ಕೊಡಿ'' ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಡಿ ಬಾಸ್ ಮತಯಾಚನೆ ಮಾಡುತ್ತಿದ್ದಾರೆ.

    ಇನ್ನು ಸುಮಲತಾ ಪರ ಮೂರನೇ ದಿನ ಪ್ರಚಾರ ಮಾಡುತ್ತಿರುವ ದರ್ಶನ್, ಮಂಡ್ಯ, ಶ್ರೀರಂಗಪಟ್ಟಣದ ಹಳ್ಳಿಗಳಲ್ಲಿ ಮತಯಾಚನೆ ಮಾಡಿದ್ರು. ನೆಚ್ಚಿನ ನಟನಿಗೆ ಎಲ್ಲಾ ಕಡೆಯೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಸುಮಲತಾ ಅವರನ್ನ ಗೆಲ್ಲಿಸುವ ಭರವಸೆ ನೀಡುತ್ತಿದ್ದಾರೆ.

    English summary
    Kannada actor, challenging star darshan has Remembering the kannada industry legends names like dr rajkumar, dr vishnuvardhan, ambarish and shankarnag in mandya campaign.
    Wednesday, April 3, 2019, 16:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X