ಅಭಿಮಾನಿಗಳಿಗೆ ಪ್ರೀತಿಗೆ ತಲೆಬಾಗಿದ 'ದಾಸ': ದರ್ಶನ್ ಕಡೆಯಿಂದ ಇನ್ನೊಂದು ಮನವಿ
Recommended Video

ನಟ ದರ್ಶನ್ ಈ ವರ್ಷದ ತಮ್ಮ ಹುಟ್ಟುಹಬ್ಬದ ದಿನ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳ ಜೊತೆ ಸೇರಿ ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.
ಯಾವುದೇ ಅದ್ದೂರಿತನ ಇಲ್ಲದೆ, ಸರಳವಾಗಿ ಈ ವರ್ಷ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿ ಎಂದು ದರ್ಶನ್ ಗೆ ಅಭಿಮಾನಿಗಳು ಮನವಿ ಮಾಡಿದ್ದರು. ಇದಕ್ಕೆ ಗಿಫ್ಟ್, ಕೇಕ್ ಬದಲು ಆಹಾರ ಪದಾರ್ಥಗಳನ್ನು ನೀಡುತ್ತೇವೆ ಎಂದು ಅಭಿಮಾನಿಗಳು ಮುಂದೆ ಬಂದಿದ್ದರು. ಈ ಅಭಿಮಾನಿಗಳ ಪ್ರೀತಿಗೆ ದಾಸ ತಲೆ ಭಾಗಿಯಾಗಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ದರ್ಶನ್ ನಾಲ್ಕು ಸಾಲು ಬರೆದುಕೊಂಡಿದ್ದಾರೆ.

''ಇತ್ತೀಚೆಗೆ ಕೆಲವು ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ಪ್ರಯುಕ್ತ ನನ್ನ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತಂದು ನೀಡುತ್ತೇವೆ, ಅದನ್ನು ಸಿದ್ದಗಂಗಾ ಮಠ ಹಾಗೂ ಕೆಲವು ಅನಾಥಾಶ್ರಮಕ್ಕೆ ತಲುಪಿಸಿ ಎಂದು ಕೇಳಿಕೊಂಡು ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಬಿಟ್ಟಿರುವುದು ತುಂಬಾ ಸಂತೋಷದ ವಿಷಯ, ನನ್ನ ಹುಟ್ಟು ಹಬ್ಬಕ್ಕೆ ನೀವುಗಳು ಕೊಡುತ್ತಿರುವ ಉಡುಗೊರೆ ಎಂದು ತಿಳಿದು ಅದನ್ನು ಪ್ರತಿ ಜಿಲ್ಲೆಯ ಒಂದು ಅನಾಥಾಶ್ರಮಕ್ಕೆ, ಒಂದು ವೃದ್ಧಾಶ್ರಮಕ್ಕೆ ಹಾಗೂ ಸಿದ್ದಗಂಗಾ ಮಠಕ್ಕೆ ತಲುಪಿಸುವ ಜವಾಬ್ದಾರಿಯನ್ನು ತುಂಬಾ ಸಂತೋಷದಿಂದ ನಾನೇ ತೆಗೆದು ಕೊಳ್ಳುತ್ತೇನೆ. ಆದಷ್ಟು ಬಟ್ಟೆ ಬ್ಯಾಗ್ ಗಳನ್ನೇ ಬಳಸಿ.'' ಎಂದು ಅಭಿಮಾನಿಗಳ ಕಾರ್ಯಕ್ಕೆ ದರ್ಶನ್ ಮೆಚ್ಚುಗೆ ಸೂಚಿಸಿದ್ದಾರೆ.
ಅಭಿಮಾನಿಗಳು ನೀಡುವ ಆಹಾರ ಪದಾರ್ಥವನ್ನು ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸಿದ್ದಗಂಗಾ ಮಠಕ್ಕೆ ದರ್ಶನ್ ನೀಡಲಿದ್ದಾರೆ.


Click it and Unblock the Notifications











