For Quick Alerts
  ALLOW NOTIFICATIONS  
  For Daily Alerts

  ಹುಲಿಗೆ 1 ಲಕ್ಷ, ಆನೆಗೆ 1.75 ಲಕ್ಷ: ಮೃಗಾಲಯಗಳ ರಕ್ಷಣೆಗೆ ನಿಂತ ನಟ ದರ್ಶನ್

  |

  ಕೊರೊನಾ ಲಾಕ್ ಡೌನ್ ನಿಂದ ಮಾನವ ಸಂಕುಲ ಮಾತ್ರವಲ್ಲ, ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳು ಸಹ ಸಂಕಷ್ಟದಲ್ಲಿವೆ. ಲಾಕ್ ಡೌನ್ ನಿಂದ ಮೃಗಾಲಯಗಳ ಗೇಟ್ ಮುಚ್ಚಿದ್ದು, ಪ್ರವಾಸಿಗರಿಗೂ ಎಂಟ್ರಿ ಇಲ್ಲ. ಪ್ರವಾಸಿಗರಿಲ್ಲದೆ ಮೃಗಾಲಯಗಳು ಸಂಕಷ್ಟದಲ್ಲಿವೆ. ಪ್ರವಾಸಿಗರ ಹಣದಿಂದ ಮೃಗಾಲಯದ ಬಹುತೇಕ ಖರ್ಚು ಸಾಗುತ್ತಿತ್ತು. ಆದರೀಗ ಮೃಗಾಲಯಗಳು ಕಷ್ಟದಲ್ಲಿವೆ.

  ಪ್ರಾಣಿಗಳನ್ನು ದತ್ತು ಪಡೆದು ಕಾಪಾಡಿ ಎಂದು ಮನವಿ ಮಾಡಿಕೊಂಡ Darshan | Filmibeat Kannada

  ಸಂಕಷ್ಟದಲ್ಲಿರುವ ಪ್ರಾಣಿ, ಪಕ್ಷಿಗಳ ನೆರವಿಗೆ ಚಾಲೆಂಜಿಂಗ್ ಸ್ಟಾರ್ ನಿಂತಿದ್ದಾರೆ. ಮೃಗಾಲಯಗಳಲ್ಲಿರುವ ಪ್ರಾಣಿಪಕ್ಷಿಗಳನ್ನು ಉಳಿಸಿ ಬೆಳಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಸುಮಾರು 9 ಮೃಗಾಲಯಗಳಿದ್ದು, ಕೊರೊನಾದಿಂದ ಸಂಕಷ್ಟದಲ್ಲಿವೆ. ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ನೆರವಾಗಿ ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ದರ್ಶನ್ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ.

  'ಪಾಗಲ್' ಚಿತ್ರದಲ್ಲಿ ಹೀರೋ ಆಗಿ ಅವಮಾನ ಎದುರಿಸಿದ್ದ 'ಮೆಜೆಸ್ಟಿಕ್' ಸತ್ಯ'ಪಾಗಲ್' ಚಿತ್ರದಲ್ಲಿ ಹೀರೋ ಆಗಿ ಅವಮಾನ ಎದುರಿಸಿದ್ದ 'ಮೆಜೆಸ್ಟಿಕ್' ಸತ್ಯ

  ಕರ್ನಾಟಕದಲ್ಲಿ 9 ಮೃಗಾಲಯಗಳಿವೆ

  ಕರ್ನಾಟಕದಲ್ಲಿ 9 ಮೃಗಾಲಯಗಳಿವೆ

  'ಕೋವಿಡ್ ಅನ್ನೋ ಮಹಾಮಾರಿ ಒಂದೂವರೆ ವರ್ಷದಿಂದ ಇಡೀ ನಮ್ಮ ದೇಶದಾದ್ಯಂತ ಎಲ್ಲರಿಗೂ ತೊಂದರೆ ಕೊಟ್ಟಿದೆ. ಮಾನವ ಕುಲಕ್ಕೆ ಎಷ್ಟೋ ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿ ಸಂಕುಲಕ್ಕೂ ಆಗಿದೆ. ಕರ್ನಾಟಕದಲ್ಲಿ 9 ಮೃಗಾಲಯಗಳಿವೆ. ಸುಮಾರು 5 ಸಾವಿರಕ್ಕೂ ಹೆಚ್ಚು ಪ್ರಾಣಿಗಳಿಗೆ.'

  ದಯವಿಟ್ಟು ಪ್ರಾಣಿಗಳನ್ನು ದತ್ತು ಪಡೆಯಿರಿ

  ದಯವಿಟ್ಟು ಪ್ರಾಣಿಗಳನ್ನು ದತ್ತು ಪಡೆಯಿರಿ

  'ಈ ಮೃಗಾಲಯಗಳನ್ನು ನೋಡಲು ದೇಶದಾದ್ಯಂತ ಜನ ಬರ್ತಾರೆ. ಅದರಿಂ ಸಹಾಯವಾಗುತ್ತಿತ್ತು. ಆದರೀಗ ಕೊರೊನಾದಿಂದ ಯಾರು ಬರ್ತಿಲ್ಲ. ಮೃಗಾಲಯಗಳು ಸಂಕಷ್ಟದಲ್ಲಿವೆ. ಹಾಗಾಗಿ ಸಣ್ಣ ಸಹಾಯ ಮಾಡಿ, ಸಹಾಯ ಎನ್ನುವುದಕ್ಕಿಂತ ಪ್ರೀತಿ ಎನ್ನಬಹುದು. ಎಲ್ಲರ ಮನೆಯಲ್ಲೂ ಪ್ರಾಣಿ ಸಾಕಲಿಕ್ಕೆ ಆಗಲ್ಲ. ಆದರೆ ಸಾಕುವ ಹಾಗೆ ಮಾಡಬಹುದು.'

  ಹುಲಿಗೆ 1 ಲಕ್ಷ ರೂ, ಅನೆಗೆ 1.75 ಲಕ್ಷ ರೂ.

  'ಒಂದು ಹಕ್ಕಿಗೆ 1 ಸಾವಿರ, ಹುಲಿಗೆ 1 ಲಕ್ಷ, ಆನೆಗೆ 1.75 ಲಕ್ಷ ಆಗುತ್ತೆ. ಈ ಹಣವನ್ನು ಒಂದು ವರ್ಷಕ್ಕೆ ಕೊಡಬೇಕು. ದಯಮಾಡಿ ಈ ಪ್ರಾಣಿ ಸಂಕುಲವನ್ನು ಉಳಿಸಲು, ಮೃಗಾಲಯಗಳನ್ನು ಬೆಳಸಲಿಕ್ಕೆ ಎಲ್ಲರೂ ಕೈ ಜೋಡಿಸಿ. ಕೋವಿಡ್ ನಲ್ಲಿ ಎಲ್ಲರೂ ಒಂದಾಗೋಣ' ಎಂದು ದರ್ಶನ್ ಮನವಿ ಮಾಡಿದ್ದಾರೆ.

  ಪ್ರಾಣಿಗಳ ಮೇಲೆ ದರ್ಶನ್ ಗೆ ವಿಶೇಷ ಪ್ರೀತಿ

  ಪ್ರಾಣಿಗಳ ಮೇಲೆ ದರ್ಶನ್ ಗೆ ವಿಶೇಷ ಪ್ರೀತಿ

  ದರ್ಶನ್ ಮೈಸೂರು ಮೃಗಾಲಯ‍‍ಕ್ಕೆ ಭೇಟಿ ನೀಡಿದ್ದು, ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು ಹಾಗೂ ಪ್ರಾಣಿ ಸಂಕುಲ ರಕ್ಷಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ದರ್ಶನ್ ಗೆ ಪ್ರಾಣಿ ಪಕ್ಷಿಗಳ ಮೇಲೆ ದರ್ಶನ್ ವಿಶೇಷವಾದ ಪ್ರೀತಿ. ಬಿಡುವಿನ ವೇಳೆಯಲ್ಲಿ ಮೈಸೂರಿನ ತೋಟದ ಮನೆಯಲ್ಲಿ ಸಮಯ ಕಳೆಯುವ ದರ್ಶನ್, ಹೆಚ್ಚಾಗಿ ತೋಟದ ಮನೆಯ ಪ್ರಾಣಿ-ಪಕ್ಷಿಗಳನ್ನು ನೋಡಿಕೊಳ್ಳುತ್ತಿರುತ್ತಾರೆ. ಆಗಾಗ ಕರ್ನಾಟಕದ ಮೃಗಾಲಯಗಳಿಗೂ ಭೇಟಿ ನೀಡುತ್ತಿರುತ್ತಾರೆ.

  English summary
  Darshan Requests Fans to Adopt Animals From karnataka Zoos Duning this covid-19 Pandemic crisis.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X