For Quick Alerts
  ALLOW NOTIFICATIONS  
  For Daily Alerts

  ಕಾರ್ ಓಡಿಸುವಾಗ ದಯವಿಟ್ಟು ಅಕ್ಕ-ಪಕ್ಕ ಬರಬೇಡಿ; ಅಭಿಮಾನಿಗಳಿಗೆ ದರ್ಶನ್ ಮನವಿ

  |

  ಚಾಲೆಂಜಿಂಗ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಹುಬ್ಬಳ್ಳಿ ರೈಲ್ವೇ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು, ರಾಬರ್ಟ್ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದಾರೆ.

  ಉ.ಕರ್ನಾಟಕದ ಜನ ಮಾಡಿದ ಸಹಾಯ ನೆನಪಿಸಿಕೊಂಡ ಡಿ ಬಾಸ್ | Roberrt Pre Release Event Hubli | Filmibeat Kannada

  ರಾಬರ್ಟ್ ಕಾರ್ಯಕ್ರಮದಲ್ಲಿ ದರ್ಶನ್ ಏನು ಮಾತನಾಡಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲವಾಗಿತ್ತು. ಡಿ ಬಾಸ್ ವೇದಿಕೆ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅಭಿಮಾನಿಗಳ ಡಿ ಬಾಸ್ ಜೈಕಾರದ ಕೂಗು ಜೋರಾಗಿತ್ತು. ವೇದಿಕೆ ಮೇಲೆ ಚಪ್ಪಲಿ ಬಿಟ್ಟು ಮಾತು ಪ್ರಾರಂಭಿಸಿದ ದರ್ಶನ್ ಉತ್ತರ ಕರ್ನಾಟಕ ಮಂದಿಯ ಪ್ರೀತಿಯನ್ನು ಹಾಡಿ ಹೊಗಳಿದರು.

  'ನಾವು ಯಾವ ಜಾತಿಗೋಸ್ಕರ ಹುಟ್ಟಿಲ್ಲ'- ಹುಬ್ಬಳ್ಳಿಯಲ್ಲಿ ದರ್ಶನ್ ಖಡಕ್ ಮಾತು'ನಾವು ಯಾವ ಜಾತಿಗೋಸ್ಕರ ಹುಟ್ಟಿಲ್ಲ'- ಹುಬ್ಬಳ್ಳಿಯಲ್ಲಿ ದರ್ಶನ್ ಖಡಕ್ ಮಾತು

  ಇದೇ ಸಮಯದಲ್ಲಿ ದರ್ಶನ್ ಅಭಿಮಾನಿಗಳಲ್ಲಿ ಬಹುಮುಖ್ಯವಾದ ಮನವಿ ಮಾಡಿಕೊಂಡಿದ್ದಾರೆ. ನನ್ನ ಕಾರನ್ನು ದಯವಿಟ್ಟು ಚೇಸ್ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ಮುಂದೆ ಓದಿ...

  ಅಭಿಮಾನಿಗಳಲ್ಲಿ ದರ್ಶನ್ ಮನವಿ

  ಅಭಿಮಾನಿಗಳಲ್ಲಿ ದರ್ಶನ್ ಮನವಿ

  'ಸೆಲೆಬ್ರಿಟಿಗಳಿಗೆ ಒಂದು ಮಾತು ಕೇಳುತ್ತೇನೆ. ಅಭಿಮಾನಿಗಳಿಗೆ ನಾನು ಬೈದಿದ್ದೀನಿ. ತಲೆಮೇಲೆ ಹೊಡೆದಿದ್ದೀನಿ. ಇವತ್ತು ಕರ್ನಾಟಕದಾದ್ಯಂತ ಇರುವ ಅಭಿಮಾನಿಗಳಿಗೆ ಈ ಸಂದೇಶ ಹೋಗಲಿ ಎಂದು ಹೇಳುತ್ತಿದ್ದೀನಿ. ದಯಮಾಡಿ ನಾನು ಕಾರು ಓಡಿಸುವಾಗ ನನ್ನ ಅಕ್ಕ ಅಪ್ಪ ಬೈಕ್ ನಲ್ಲಿ ಬರಬೇಡಿ. ನಿಮ್ಮ ಪಾದಾರವಿಂದಗಳಿಗೆ ನಾನು ಕೇಳಿಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ.

  ಜೀವನ ಹಾಳುಮಾಡಿಕೊಳ್ಳಬೇಡಿ

  ಜೀವನ ಹಾಳುಮಾಡಿಕೊಳ್ಳಬೇಡಿ

  'ಯಾಕಾಗಿ ಹೇಳುತ್ತಿದ್ದೇನೆ ಎಂದರೆ ನೀವು ಮೊಬೈಲ್ ಇಟ್ಟುಕೊಂಡು ಬರೋದು, ಒಂದು ಫೋಟೋ, ಲೈಕ್ಸ್, ಕಾಮೆಂಟ್ಸ್ ಇಂದ ಜೀವನ ಹಾಳು ಮಾಡಿಕೊಳ್ಳಬೇಡಿ. ನಾವು 110, 120 ವೇಗದಲ್ಲಿ ಹೋಗುತ್ತಿರುತ್ತೇವೆ. ಪಕ್ಕದಲ್ಲಿ ನೀವು ಬೈಕ್ ನಲ್ಲಿ ಬರ್ತೀರಾ, ದಯವಿಟ್ಟು ಯೋಚನೆ ಮಾಡಿ.

  'ರಾಬರ್ಟ್' ಪ್ರಿ ರಿಲೀಸ್ ಕಾರ್ಯಕ್ರಮ: ಉತ್ತರ ಕರ್ನಾಟಕ ಜನರ ಮುಂದೆ ಚಪ್ಪಲಿ ಬಿಟ್ಟು ಮಾತನಾಡಿದ್ದೇಕೆ ದರ್ಶನ್?'ರಾಬರ್ಟ್' ಪ್ರಿ ರಿಲೀಸ್ ಕಾರ್ಯಕ್ರಮ: ಉತ್ತರ ಕರ್ನಾಟಕ ಜನರ ಮುಂದೆ ಚಪ್ಪಲಿ ಬಿಟ್ಟು ಮಾತನಾಡಿದ್ದೇಕೆ ದರ್ಶನ್?

  ಏನಾದ್ರು ಆದರೆ ನಿಮ್ಮ ಕುಟುಂಬದ ಗತಿ ಏನು?

  ಏನಾದ್ರು ಆದರೆ ನಿಮ್ಮ ಕುಟುಂಬದ ಗತಿ ಏನು?

  'ಬದುಕಿದ್ರೆ ಮತ್ತೊಮ್ಮೆ ನನ್ನನ್ನು ನೋಡುತ್ತೀರಾ. ನನ್ನ ಕಥೆ ಹಾಳಾಗಿ ಹೋಗಲಿ. ನೀವು ನನ್ನನ್ನು ನೋಡದೆ ಇದ್ರು ಪರವಾಗಿಲ್ಲ. ಮನೆಯಲ್ಲಿ ನಿಮ್ಮನ್ನು ನಂಬಿಕೊಂಡ ವಯಸ್ಸಾದ ತಂದೆ-ತಾಯಿ, ಕುಟುಂಬದವರು ಇರುತ್ತಾರೆ ನಿಮಗೇನಾದ್ರು ಹೆಚ್ಚು ಕಮ್ಮಿ ಆದರೆ ಅವರ ಗತಿ ಏನು?' ಎಂದು ಕೇಳಿದ್ದಾರೆ.

  ಹೀಗೆ ಹೇಳಿದೆ ಅಂತ ಬೇಸರ ಮಾಡಿಕೊಳ್ಳಬೇಡಿ

  ಹೀಗೆ ಹೇಳಿದೆ ಅಂತ ಬೇಸರ ಮಾಡಿಕೊಳ್ಳಬೇಡಿ

  'ಏನಾದರು ಆದರೆ ನಿಮ್ಮ ಮನೆಯವರು ಸಾಯೋವರೆಗೂ ನನ್ನನ್ನು ದೂಷಿಸುತ್ತಾರೆ. ಅದು ನಿಮಗೆ ಇಷ್ಟಾನಾ. ನಾನು ನಿಮ್ಮಲ್ಲಿ ಕೇಳಿಕೊಳ್ಳುವುದು ಇಷ್ಟೆ ದಯಮಾಡಿ ಅಕ್ಕ ಪಕ್ಕದಲ್ಲಿ ಬರಬೇಡಿ. ಬದುಕಿದ್ರೆ ನಿನ್ನೊಂದು ಸಾರಿ ನನ್ನನ್ನು ನೋಡುತ್ತೀರಿ. ದಯಮಾಡಿ ಇದನ್ನು ಕೇಳಿಸಿಕೊಳ್ಳಿ. ಹೀಗೆ ಹೇಳಿದೆ ಅಂತ ಬೇಸರ ಮಾಡಿಕೊಳ್ಳಬೇಡಿ' ಎಂದು ಹುಬ್ಬಳ್ಳಿ ನೆಲದಲ್ಲಿ ನಿಂತು ದರ್ಶನ್ ಎಲ್ಲಾ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

  English summary
  Darshan requests his fans to not to chase or follow my car in Roberrt pre release event in Hubli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X