ತನ್ನ ಹೆಸರು ಬಳಸಿ ಕೆಟ್ಟ ಕೆಲಸ ಮಾಡಿದವರಿಗೆ ಡಿ ಬಾಸ್ ವಾರ್ನಿಂಗ್
Recommended Video

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮನಸ್ಸು ಬಂದಂತೆ ಪೋಸ್ಟ್ ಹಾಕುವವರು. ಟ್ರೋಲ್ ಮಾಡುವವರು ಹೆಚ್ಚಾಗಿದ್ದಾರೆ. ಅದಷ್ಟೇ ಅಲ್ಲದೆ ಸ್ಟಾರ್ ನಟ-ನಟಿಯರ ಹೆಸರನ್ನ ಬಳಸಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿ ಸಮಸ್ಯೆ ಹುಟ್ಟು ಹಾಕುವವರು ಜಾಸ್ತಿ ಆಗುತ್ತಿದ್ದಾರೆ. ಸದ್ಯ ಇಂಥದೊಂದು ಸಮಸ್ಯೆ ಎದುರಾಗಿದ್ದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ .
ದಾಸನ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಆ ಮೂಲಕ ಸಿ ಎಂ ಕುಮಾರಸ್ವಾಮಿ ಅವರನ್ನು ಅವಹೇಳನ ಮಾಡಿರುವ ವಿಚಾರ ಬೆಳಗ್ಗೆಯಷ್ಟೇ ತಿಳಿದು ಬಂದಿತ್ತು. ಈ ವಿಚಾರ ಸುದ್ದಿ ಆಗುತ್ತಿದ್ದಂತೆ ನಟ ದರ್ಶನ್ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಇತ್ತೀಚಿಗೆ ತಿಳಿದು ಬಂದಿರುವಂತೆ ನನ್ನ ಹೆಸರಲ್ಲಿ ಕೆಲವು ಕಿಡಿಗೇಡಿಗಳ ಅನೇಕ ನಕಲಿ ಫೇಸ್ ಬುಕ್ ಖಾತೆಗಳಿವೆ. ಈ ಖಾತೆಗಳಿಂದ ಕೆಲವು ವ್ಯಕ್ತಿಗಳ ಮೇಲೆ ಅವಹೇಳನಕಾರಿ ಹೇಳಿಕೆಗಳು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಸೈಬರ್ ಕ್ರೈಂ ಡಿಪಾರ್ಟ್ಮೆಂಟ್ ಈ ರೀತಿ ಸೋಶಿಯಲ್ ಮೀಡಿಯಾ ದುರ್ಬಳಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈ ಕೊಳ್ಳುವುದಾಗಿ ಹೇಳಿದ್ದಾರೆ. ದಯಮಾಡಿ ಯಾರೂ ಇಂತಹ ಕೆಲಸಗಳಲ್ಲಿ ತೊಡಗಬೇಡಿ ಎಂದು ಕಳಕಳಿಯ ವಿನಂತಿ"

ತಮ್ಮ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿದೆ ಎನ್ನುವುದು ತಿಳಿದ ನಂತರ ದರ್ಶನ್ ಸೈಬರ್ ಕ್ರೈಂ ನವರಿಗೆ ತಿಳಿಸಿದ್ದಾರೆ. ಆದಷ್ಟು ಬೇಗ ಆ ಅಕೌಂಟ್ ಯಾರು ಹುಟ್ಟು ಹಾಕಿದ್ದಾರೆ ಎನ್ನುವುದು ಕೂಡ ಪತ್ತೆ ಆಗಲಿದೆ.


Click it and Unblock the Notifications











