For Quick Alerts
  ALLOW NOTIFICATIONS  
  For Daily Alerts

  'ಚಕ್ರವರ್ತಿ' ಹುಟ್ಟಿದ್ದು 13 ವರ್ಷಗಳ ಹಿಂದೆ! ಇಷ್ಟು ಲೇಟ್ ಆಗಿದ್ಯಾಕೆ?

  By Bharath Kumar
  |

  ದರ್ಶನ್ ಅಭಿನಯದಲ್ಲಿ ಮೂಡಿ ಬರುತ್ತಿರುವ 'ಚಕ್ರವರ್ತಿ' ಚಿತ್ರ ಹುಟ್ಟಿಕೊಂಡಿದ್ದು 13 ವರ್ಷಗಳ ಹಿಂದೆ. ಆದ್ರೆ, 13 ವರ್ಷಗಳ ಹಿಂದೆ ಶುರುವಾದ ಸಿನಿಮಾ ಈಗ ರಿಲೀಸ್ ಗೆ ರೆಡಿಯಾಗಿದೆ.

  ನಿರ್ದೇಶಕ ಚಿಂತನ್ ಆಗಲೇ ದರ್ಶನ್ ಬಳಿ 'ಚಕ್ರವರ್ತಿ' ಕಥೆಯನ್ನ ಹೇಳಿದ್ದರು. ಆದ್ರೆ, ಅಷ್ಟು ವರ್ಷಗಳಿಂದ ಈ ಸಿನಿಮಾನ ದರ್ಶನ್ ಯಾಕೆ ಮಾಡ್ಲಿಲ್ಲ. 'ಚಕ್ರವರ್ತಿ' ಸಿನಿಮಾ ಮಾಡಲು ದಾಸ ವಿಳಂಬ ಮಾಡಿದ್ಯಾಕೆ?['ಚಕ್ರವರ್ತಿ' ಕಥೆ ಕುರಿತು ಕಡೆಗೂ ಸುಳಿವು ಕೊಟ್ಟ 'ದಾಸ' ದರ್ಶನ್.!]

  'ಚಕ್ರವರ್ತಿ' ಹುಟ್ಟಿಕೊಂಡಿದ್ದು ಹೇಗೆ ಎಂಬ ಇಂಟ್ರೆಸ್ಟಿಂಗ್ ಕಥೆಯನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

  'ಚಕ್ರವರ್ತಿ' ಕಥೆ ಹುಟ್ಟಿದ್ದು 13 ವರ್ಷದ ಹಿಂದೆ!

  'ಚಕ್ರವರ್ತಿ' ಕಥೆ ಹುಟ್ಟಿದ್ದು 13 ವರ್ಷದ ಹಿಂದೆ!

  ಚಿಂತನ್, ದಿನಕರ್, ಎಂ.ಎಸ್.ರಮೇಶ್ ಅವರ ಬಳಿ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದರು. ದರ್ಶನ್ ಅವರು 'ಸ್ವಾಮಿ' ಸಿನಿಮಾ ಮಾಡುತ್ತಿದ್ದರು. ಆ ಸಮಯದಲ್ಲಿ ಹುಟ್ಟಿಕೊಂಡ ಕಥೆಯೇ 'ಚಕ್ರವರ್ತಿ' [ಕರ್ನಾಟಕದಾಚೆಯೂ ಸುನಾಮಿ ಎಬ್ಬಿಸಲು 'ಚಕ್ರವರ್ತಿ' ರೆಡಿ!]

  ಕಥೆ ಕೇಳಿ ವೆಯ್ಟ್ ಮಾಡಿಸಿದ್ದ ದರ್ಶನ್

  ಕಥೆ ಕೇಳಿ ವೆಯ್ಟ್ ಮಾಡಿಸಿದ್ದ ದರ್ಶನ್

  ದರ್ಶನ್ ಅವರು ಆಗ ಬಿಟಿಎಂ ಲೇಔಟ್ ನಲ್ಲಿ ವಾಸವಾಗಿದ್ದರು. ದಿನಕರ್ ಮತ್ತು ಚಿಂತನ್ ಆಗ ದರ್ಶನ್ ಗೆ ಕಥೆ ಹೇಳಿದ್ದರಂತೆ. ಕಥೆ ಕೇಳಿ ಒಪ್ಪಿಕೊಂಡ ದರ್ಶನ್ ಈಗ ಬೇಡ ಸ್ವಲ್ಪ ದಿನ ಆದ್ಮೇಲೆ ಮಾಡೋಣ ಅಂತ ಹೇಳಿ ಸುಮ್ಮನಾಗಿದ್ದರಂತೆ. ದರ್ಶನ್ ಅವರು ನಾಲ್ಕೈದು ವರ್ಷ ಅಂದುಕೊಂಡಿದ್ದರಂತೆ. ಆದ್ರೆ, ಅದು 13 ವರ್ಷ ಆಗುತ್ತೆ ಎಂಬುದನ್ನ ಊಹೆ ಕೂಡ ಮಾಡಿರಲಿಲ್ಲವಂತೆ.[ಡೈಲಾಗ್ ಇಲ್ಲದ ಟ್ರೈಲರ್ ಹಿಂದಿನ ಕಥೆ ಬಿಚ್ಚಿಟ್ಟ ದರ್ಶನ್!]

  'ಚಕ್ರವರ್ತಿ'ಗೆ ಆರಂಭದಲ್ಲೇ ವಿಘ್ನ!

  'ಚಕ್ರವರ್ತಿ'ಗೆ ಆರಂಭದಲ್ಲೇ ವಿಘ್ನ!

  'ಚಕ್ರವರ್ತಿ' ಮಾಡ್ಬೇಕು ಅಂತ ನಿರ್ಧರಿಸಿ ಎಲ್ಲ ರೆಡಿಯಾಗಿ, ಶೂಟಿಂಗ್ ಶುರುವಾಗುವ ಹೊತ್ತಿಗೆ ಚಿತ್ರದ ನಿರ್ಮಾಪಕರು ಚಿತ್ರದಿಂದ ಹಿಂದೆ ಸರಿದರಂತೆ. ಈ ಸಿನಿಮಾ ಈಗ ಮಾಡೋಕೆ ಆಗಲ್ಲ. ಹಣದ ಸಮಸ್ಯೆಯಿದೆ ಎಂದು ನಿರ್ಮಾಪಕರು ಕೈಬಿಟ್ಟರಂತೆ.[ಮೊಟ್ಟಮೊದಲ ಬಾರಿಗೆ ಫೇಸ್ ಬುಕ್ ಲೈವ್: ಚಿಂತನ್ ನ ಕೊಂಡಾಡಿದ ದರ್ಶನ್.!]

  ನಿರ್ಮಾಪಕರಿಗಾಗಿ ತಲೆಕೆಡಿಸಿಕೊಂಡಿದ್ದ ದಾಸ

  ನಿರ್ಮಾಪಕರಿಗಾಗಿ ತಲೆಕೆಡಿಸಿಕೊಂಡಿದ್ದ ದಾಸ

  ಈ ಸಮಯದಲ್ಲಿ ದರ್ಶನ್ ಅವರು ಏನ್ ಮಾಡೋದು ಎಂದು ತಲೆಕೆಡಿಸಿಕೊಂಡರಂತೆ. ಗೊತ್ತಿರುವವರನ್ನ ಈ ಸಿನಿಮಾ ಮಾಡಿ ಎಂದು ಕೇಳಿದ್ದರಂತೆ. ಇಂತಹ ಟೈಮ್ ನಲ್ಲಿ ಸಿಕ್ಕವರೇ ನಿರ್ಮಾಪಕ ಕಮ್ ನಟ ಸಿದ್ದಾಂತ್.['ಮಲ್ಟಿಪ್ಲೆಕ್ಸ್' ಇತಿಹಾಸದಲ್ಲಿ ಯಾರು ಮಾಡಿರದ ದಾಖಲೆ ಬರೆದ 'ಚಕ್ರವರ್ತಿ']

  ಸಿದ್ದಾಂತ್ ನಿರ್ಮಾಪಕರಾಗಿದ್ದು ಹೇಗೆ?

  ಸಿದ್ದಾಂತ್ ನಿರ್ಮಾಪಕರಾಗಿದ್ದು ಹೇಗೆ?

  ಸಿದ್ದಾಂತ್ ಅವರನ್ನ ದರ್ಶನ್ ಅವರು 'ಎ.ಕೆ.57' ಚಿತ್ರದ ಮುಹೂರ್ತದ ವೇಳೆ ನೋಡಿದ್ದರಂತೆ. ಚಿತ್ರದ ನಿರ್ಮಾಪಕರಿಗಾಗಿ ಯೋಚನೆ ಮಾಡುತ್ತಿದ್ದಾಗ ಸಿದ್ದಾಂತ್ ಸಿಕ್ಕಿದ್ರು. ಅಲ್ಲಿಂದ ಶುರುವಾದ 'ಚಕ್ರವರ್ತಿ' ಯಶಸ್ವಿಯಾಗಿ ಕಂಪ್ಲೀಟ್ ಆಗಿ ತೆರೆ ಅಬ್ಬರಿಸಲು ಸಿದ್ದವಾಗಿದೆ.[ಅಭಿಮಾನಿಗಳು ಕೊಡುತ್ತಿರುವ ಭಿಕ್ಷೆ ಇದು: 'ದರ್ಶನ್ ಹೀಗೆ ಹೇಳಿದ್ಯಾಕೆ?]

  English summary
  Challenging Star Darshan Talk About Director Chinthan. and he revals Story Behind the Chakravarthy Making.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X