Just In
Don't Miss!
- News
ಬಿಟ್ ಕಾಯಿನ್ ಮೌಲ್ಯ ಮತ್ತೆ $60,000 ಗಡಿ ದಾಟಿ ಏರಿಕೆ
- Sports
IPL: SRH vs KKR, Live: ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Automobiles
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಮ್ಮರ್ ಕಾರ್ ಮಾರಿದ್ದೇಕೆ ದರ್ಶನ್? ಮತ್ತೊಂದು ದುಬಾರಿ ಕಾರಿನ ಮೇಲೆ ಕಣ್ಣಿಟ್ಟ ಡಿ ಬಾಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಾರ್, ಬೈಕ್ ಗಳ ಮೇಲಿರುವ ಕ್ರೇಜ್ ಬಗ್ಗೆ ಗೊತ್ತಿರುವ ವಿಚಾರ. ಡಿ ಬಾಸ್ ಮನೆಯಲ್ಲಿ ಸಾಕಷ್ಟು ಕಾರುಗಳಿವೆ. ಯಾವುದೇ ಕಾರ್ ಇಷ್ಟವಾದ್ರೆ ಸಾಕು ಅದು ಕೆಲವೇ ದಿನಗಳಲ್ಲಿ ದರ್ಶನ್ ಮನೆಯ ಕಾರ್ ಶೆಡ್
ಸೇರಿರುತ್ತೆ.
ಪ್ರಾಣಿ, ಪಕ್ಷಿಗಳ ಪ್ರೀತಿಯ ಜೊತೆಗೆ ದರ್ಶನ್ ಗೆ ವಾಹನಗಳ ಮೇಲೂ ಅಷ್ಟೆ ಪ್ರೀತಿ. ದರ್ಶನ್ ಮನೆಯಲ್ಲಿ ಲಕ್ಷದಿಂದ ಕೋಟಿ ಬೆಲೆ ಬಾಳುವ ವಿಭಿನ್ನ ಕುರುಗಳಿವೆ. ಆಡಿ, ಬೆನ್ಜ್, ರೇಂಜ್ ರೋವರ್, ಫಾರ್ಚೂನರ್, ಮಿನಿ ಕೂಪರ್, ಸ್ಕಾರ್ಪಿಯೋ, ಲ್ಯಾಂಬೋರ್ಗಿನಿ ಕಾರು ಸೇರಿದಂತೆ ದುಬಾರಿ ಬೆಲೆಯ ಕಾರಿಗಳಿಗೆ. ಈ ಕಾರುಗಳ ಜೊತೆಗೆ ದರ್ಶನ್ ಹಮ್ಮರ್ ಕಾರಿನ ಯಜಮಾನ ಕೂಡ ಆಗಿದ್ದರು. ಮುಂದೆ ಓದಿ..

ಹಮ್ಮರ್ ನ ಯಜಮಾನ ಆಗಿದ್ದರು ದರ್ಶನ್
ಹಮ್ಮರ್ ಮೇಲಿನ ಪ್ರೀತಿಯಿಂದ ಅದನ್ನು ಕಾರನ್ನು ಖರೀದಿಸಿದ್ದ ದರ್ಶನ್ ಕೆಲವೇ ವರ್ಷಗಳಲ್ಲಿ ಮಾರಿದ್ದಾರೆ. 2008ರಲ್ಲಿ ದರ್ಶನ್ ಹಮ್ಮರ್ ಹೆಚ್ 3 ಕಾರನ್ನು ದುಬೈ ಯಿಂದ ಆಮದು ಮಾಡಿಕೊಂಡಿದ್ದರು. ಆಫ್ ರೋಡಿಗೂ ಸೈ ಎನಿಸುವ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್. ಹಮ್ಮರ್ ಎಚ್ 3 ಅಂದ್ರೆ ಆವೇಶದ ಕಾರು ಅಂತಾನು ಹೇಳುತ್ತಾರೆ. ಅಂದರೆ ಥೇಟ್ ದರ್ಶನ್ ಹಾಗೆಯೆ ಎಂದರೂ ತಪ್ಪಾಗಲ್ಲ.

ಹಮ್ಮರ್ ಮಾರಿದ್ದೇಕೆ ದಾಸಾ?
ಆದರೀಗ ದರ್ಶನ್ ಬಳಿ ಹಮ್ಮರ್ ಇಲ್ಲ. ವರ್ಷಗಳ ಹಿಂದೆಯೇ ಮಾರಿದ್ದಾರೆ. ಹಮ್ಮರ್ ಸೇಲ್ ಮಾಡಲು ಕಾರಣ ಸರ್ವಿಸ್ ಸಮಸ್ಯೆ. ಹೌದು ಹಮ್ಮರ್ ಕಾರನ್ನು ಸರ್ವೀಸ್ ಮಾಡಿಸಬೇಕೆಂದರೆ ದುಬೈಯಿಂದನೆ ಮೆಕಾನಿಕ್ ಕರೆಸಿಕೊಳ್ಳಬೇಕು. ಹಮ್ಮರ್ ಯಾರ ಬಳಿ ಇದೆಯೋ ಎಲ್ಲರೂ ಒಮ್ಮೆಗೆ ಮಾತನಾಡಿಕೊಂಡು ದುಬೈಯಿಂದ ಕರೆಸಿ ಸರ್ವೀಸ್ ಮಾಡಿಸಬೇಕು. ಸರ್ವೀಸ್ ಖರ್ಚು ಸಹ ದುಬಾರಿಯಾಗಿರುತ್ತೆ. ಜೊತೆಗೆ ಮೈಲೇಜ್ ಕೂಡ ತೀರಾ ಕಡಿಮೆ. ಕೇವಲ 6 ಕಿಮೀ ಮೈಲೇಜ್ ನೀಡುತ್ತೆ. ಈ ಎಲ್ಲಾ ತಲೆನೋವಿನಿಂದ ದರ್ಶನ್ ಹಮ್ಮರ್ ಕಾರನ್ನು ಮಾರಿದ್ದಾರೆ.

ಬೆಂಟ್ಲಿ ಕಾರಿನ ಮೇಲೆ ದರ್ಶನ್ ಕಣ್ಣು
ಹೊಸ ಕಾರುಗಳು ಬಂದರೆ ಸಾಕು ಅದು ದರ್ಶನ್ ಬಳಿ ಇರಬೇಕು. ಸದ್ಯ ದರ್ಶನ್ ಕಣ್ಣಿಟ್ಟಿರುವುದು ಬೆಂಟ್ಲಿ ಕಾರಿನ ಮೇಲೆ. ಇದು ಕೂಡ ತುಂಬಾ ದುಬಾರಿ ಕಾರುಗಳಲ್ಲಿ ಒಂದು. 3.05 ಕೋಟಿಗೂ ಅಧಿಕ ಬೆಲೆಯ ಬೆಂಟ್ಲಿ ಕಾರು ಖರೀದಿಸಬೇಕು ಎನ್ನುವುದು ದರ್ಶನ್ ಅವರ ಮುಂದಿನ ಟಾರ್ಗೆಟ್.

ಬೆಂಟ್ಲಿ ಖರೀದಿಸಲು ಹಿಂದೇಟು ಹಾಕುತ್ತಿರುವುದೇಕೆ?
ಆದರೆ ಬೆಂಟ್ಲಿ ಕಾರನ್ನು ಖರೀದಿಸಲು ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ. ಯಾಕೆಂದರೆ ಸರ್ವೀಸ್ ಸೆಂಟರ್ ಕೂಡ ಕರ್ನಾಟಕದಲ್ಲಿಲ್ಲ. ಸರ್ವೀಸ್ ಮಾಡಿಸಬೇಕಾದರೆ ದೆಹಲಿಗೆ ಹೋಗಬೇಕು. ಈ ಒಂದು ಸಮಸ್ಯೆಯಿಂದ ಬೆಂಟ್ಲಿ ಕಾರನ್ನು ಖರೀದಿಸಲು ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ದಕ್ಷಿಣ ಭಾರತದಲ್ಲಿ ಸರ್ವೀಸ್ ಸ್ಟೇಷನ್ ಓಪನ್ ಆದರೆ ಬೆಂಟ್ಲಿ ದರ್ಶನ್ ಕಾರ್ ಶೆಡ್ ಸೇರುವುದು ಪಕ್ಕಾ.