'ಲಯನ್ ಕಿಂಗ್' ಎತ್ತಿ 'ಸಾರಥಿ' ಮಾಡಿದ್ವಿ ಯಾರು ಕೇಳಿದ್ರು; ನಟ ದರ್ಶನ್
ರಾಬರ್ಟ್ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ಗಳಿಸಿದೆ. ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ರಾಬರ್ಟ್ ಸಿನಿಮಾ ನೋಡಿದ್ರೆ ಬಾಷಾ, ಇಂದ್ರ ಸಿನಿಮಾದ ನೆನಪಾಗುತ್ತೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
Recommended Video
ಈ ಬಗ್ಗೆ ಡಿ ಬಾಸ್ ದರ್ಶನ್ ರಾಬರ್ಟ್ ಸಕ್ಸಸ್ ಮೀಟ್ ನಲ್ಲಿ ಮಾತನಾಡಿದ್ದಾರೆ. ರಾಬರ್ಟ್ ಸಿನಿಮಾವನ್ನು ಅಲ್ಲಿಂದ ಇಲ್ಲಿಂದನೆ ಎತ್ತಿರೋದು ಎಂದು ಹೇಳಿದ್ದಾರೆ. ಅನೇಕರು ಹೇಳಿದ್ರು ಇದು ಬಾಷಾ ಸಿನಿಮಾತರ ಅಂತ. 100 % ಹೌದು ಇಲ್ಲ ಅಂತ ನಾನು ಹೇಳಲ್ಲ. ಆದರೆ ಟ್ರೀಟ್ ಮೆಂಟ್ ಬೇರೆ ಇರುತ್ತೆ' ಎಂದರು.
ಇನ್ನು ಇದೆ ಸಮಯದಲ್ಲಿ ಸಾರಥಿ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. 'ಸಾರಥಿ ಚಿತ್ರವನ್ನು ಲಯನ್ ಸಿಂಗ್ ಸಿನಿಮಾದಿಂದ ಎತ್ತಿದ್ದೀವಿ, ಯಾರು ಕೇಳಿದ್ರು' ಎಂದಿದ್ದಾರೆ. ಲಯನ್ ಕಿಂಗ್ 2 ಎರಡನೇ ಭಾಗವನ್ನು ಎತ್ತಿ ಹಾಗೆ ಸಾರಥಿಯಲ್ಲಿ ಇಟ್ವಿ, ಯಾರು ಕೇಳಿಲ್ಲ ಎಂದು ಹೇಳುವ ಮೂಲಕ ಬೇರೆ ಸಿನಿಮಾಗಳಿಂದ ಕಾಪಿ ಮಾಡಿದ್ದೀರಾ ಎಂದು ಕೇಳಿಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ರಾಬರ್ಟ್ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಬರ್ಟ್ ಗೆಲುವಿನ ಸಂಭ್ರಮದಲ್ಲಿ ದರ್ಶನ್ ಮುಂದಿನ ಸಿನಿಮಾ ಮಾಡುವ ನಿರ್ಮಾಪಕರಿಗೆ ಒಂದು ಷರತ್ತನ್ನು ವಿಧಿಸಿದ್ದಾರೆ. 'ನನ್ನ ಸಿನಿಮಾ ನಿರ್ಮಾಣ ಮಾಡಲು ಬರುವ ನಿರ್ಮಾಪಕರು ಮೊದಲು ವಿತರಣೆ ಮಾಡುವುದು ಹೇಗೆ ಎಂದು ಚೆನ್ನಾಗಿ ಕಲಿತುಕೊಂಡು ಬನ್ನಿ. ಇಲ್ಲದಿದ್ದರೆ ಬರಬೇಡಿ' ಎಂದಿದ್ದಾರೆ.
ಸುಮ್ಮನೆ ಹಣ ಹಾಕಿ ನಂತರ ವಿತರಕರಿಗೆ ಲಾಭ ಕೊಟ್ಟು, ನಿರ್ಮಾಪಕರು ಕೈಸುಟ್ಟುಕೊಳ್ಳುವಂತಾಗುವುದು ಬೇಡ ಎಂದು ದರ್ಶನ್ ಹೇಳಿದ್ದಾರೆ.


Click it and Unblock the Notifications











