ಸ್ಪೋರ್ಟ್ಸ್ ಕಾರ್ ರೇಸರ್ ಆದ ದರ್ಶನ್: ಸಿನಿಮಾನಾ ಅಥವಾ ಕಾಂಪಿಟೇಶನ್.?

Recommended Video

ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡಿದ ನಟ ದರ್ಶನ್ | ಇದು ಸಿನಿಮಾಗೋ ಕಾಂಪಿಟೇಶನ್? | Oneindia Kannada

'ಕುರುಕ್ಷೇತ್ರ' ಸಿನಿಮಾ ಮುಗಿಸಿ 'ಯಜಮಾನ'ನಾಗಿರುವ ದರ್ಶನ್ ಮತ್ತೆರಡು ಚಿತ್ರಗಳಿಗೆ ಚಾಲನೆ ನೀಡಿದ್ದಾರೆ. ಸಿನಿಮಾ ಬಿಟ್ಟರೇ ದರ್ಶನ್ ಪ್ರಾಣಿಪ್ರಿಯರು ಮತ್ತು ಕಾರ್ ಕ್ರೇಜ್ ಹೆಚ್ಚು ಹೊಂದಿರುವ ನಟ ಎಂಬುದು ಗೊತ್ತಿರುವ ಸಂಗತಿ.

ಆದ್ರೆ, ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡುವ ಮಟ್ಟಿಗೆ ಕ್ರೇಜ್ ಹೊಂದಿದ್ದಾರೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಇದೀಗ ಈ ಸುದ್ದಿ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ಸ್ಪೋರ್ಟ್ಸ್ ಕಾರ್ ಚಲಾಯಿಸಿರುವ ವಿಡಿಯೋ ವೈರಲ್ ಆಗಿರುವುದು.

ಹೌದು, ದರ್ಶನ್ ಅವರು ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡಿರುವ ಎರಡು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನ ನೋಡಿ ಖುಷಿಯಾಗಿರುವ ಅಭಿಮಾನಿಗಳು ತಲೆಯಲ್ಲಿ ಹುಳಬಿಟ್ಕೊಂಡು ಯೋಚನೆ ಮಾಡ್ತಿದ್ದಾರೆ. ಅಷ್ಟಕ್ಕೂ, ದರ್ಶನ್ ಕಾರ್ ಡ್ರೈವ್ ಮಾಡಿದ್ದು ಎಲ್ಲಿ ಮತ್ತು ಯಾಕೆ.? ಮುಂದೆ ಓದಿ......

ಚಿತ್ರಕೃಪೆ: D - TEAM (R)

ಮೈಸೂರಿನಲ್ಲಿ ರೇಸರ್ ಆದ ದರ್ಶನ್

ಮೈಸೂರಿನಲ್ಲಿ ರೇಸರ್ ಆದ ದರ್ಶನ್

ನಿನ್ನೆ ಮೈಸೂರಿನಲ್ಲಿ ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ದರ್ಶನ್. ವೃತ್ತಿಪರ ರೇಸರ್ ಗಳಂತೆ ದಾಸ ಕಾರು ಚಲಾಯಿಸಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಅತಿವೇಗವಾತಿ ರೇಸರ್ ಗಳಂತೆ ಮಣ್ಣಿನ ರಸ್ತೆಯಲ್ಲಿ ಕಾರ್ ಡ್ರೈವ್ ಮಾಡಿದ್ದಾರೆ.

ಚಿತ್ರಕೃಪೆ: D - TEAM (R)

ಸಿನಿಮಾನ ಶೂಟಿಂಗ್.?

ಸಿನಿಮಾನ ಶೂಟಿಂಗ್.?

ದರ್ಶನ್ ಕಾರ್ ರೇಸ್ ಸುದ್ದಿ ಕೇಳಿ ಆರಂಭದಲ್ಲಿ ಇದ್ಯಾವುದು ಸಿನಿಮಾದಲ್ಲಿರಬಹುದು ಬಿಡಿ ಅಂದುಕೊಂಡಿದ್ರೆ ಅದು ತಪ್ಪು. ಯಾಕಂದ್ರೆ, ಇದು ಯಾವುದೇ ಸಿನಿಮಾ ಶೂಟಿಂಗ್ ಅಲ್ಲ. ಇಲ್ಲಿ ಯಾವುದೇ ಕ್ಯಾಮೆರಾ ಅಥವಾ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತಂತ್ರಜ್ಞರು ಇಲ್ಲ. ಇದು ಅದನ್ನ ಮೀರಿದ ರೇಸ್.

ಕೇವಲ ಹ್ಯವಾಸಕ್ಕಾಗಿ ಇರಬಹುದಾ.?

ಕೇವಲ ಹ್ಯವಾಸಕ್ಕಾಗಿ ಇರಬಹುದಾ.?

ಮೊದಲೇ ದರ್ಶನ್ ಅವರಿಗೆ ಕಾರ್ ಕ್ರೇಜ್ ಹೆಚ್ಚಿದೆ. ಹೀಗಿದ್ಮೇಲೆ ರೇಸ್ ಕಾರ್ ಡ್ರೈವ್ ಮಾಡಬೇಕು ಎಂಬ ಆಸೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಕಾರ್ ಡ್ರೈವ್ ಮಾಡಿರಬಹುದು ಎಂಬ ಊಹೆ. ಆದ್ರೆ, ಅಷ್ಟಕ್ಕೆ ಸಮಾಧಾನವಾಗುವಂತಿಲ್ಲ. ಯಾಕಂದ್ರೆ, ಅದರ ಹಿಂದೆ ಬೇರೆಯದ್ದೆ ಸುದ್ದಿ ಕೇಳಿಬರುತ್ತಿದೆ.

ಕಾಂಪಿಟೇಶನ್ ಇರಬಹುದಾ.?

ಕಾಂಪಿಟೇಶನ್ ಇರಬಹುದಾ.?

ಸಿನಿಮಾ ಮತ್ತು ಹ್ಯವಾಸವನ್ನ ಬಿಟ್ಟು ಇದು ಯಾವುದಾದರೂ ಕಾಂಪಿಟೇಶನ್ ಗೆ ಸಿದ್ಧತೆ ಇರಬಹುದಾ.? ಯಾಕಂದ್ರೆ, ಹೀಗೊಂದು ಮಾತು ಕೂಡ ಕೇಳಿಬರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ರೇಸಿಂಗ್ ನಲ್ಲಿ ಪಾಲ್ಗೊಳ್ಳಲು ಡಿ ಬಾಸ್ ತಯಾರಿ ನಡಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಈ ಬಗ್ಗೆಯೂ ಮಾಹಿತಿ ಇಲ್ಲ.

ದರ್ಶನ್ ಬಳಿ ವರ್ಲ್ಡ್ ಕ್ಲಾಸ್ ಕಾರ್ ಗಳು

ದರ್ಶನ್ ಬಳಿ ವರ್ಲ್ಡ್ ಕ್ಲಾಸ್ ಕಾರ್ ಗಳು

ದರ್ಶನ್ ಬಳಿ ಸದ್ಯಕ್ಕೆ ಮಿನಿ ಕೂಪರ್, ಫಾರ್ಚೂನರ್, ಬೆಂಜ್, ರೇಂಜ್ ರೋವರ್, ಐ-20, ಆಡಿ ಕ್ಯೂ 7, Porsche, ಜಾಗ್ವಾರ್, ಸೇರಿದಂತೆ ಹಲವು ಕಾರ್ ಗಳಿವೆ. ಅತಿ ಹೆಚ್ಚು ಬೆಲೆಯ ಕಾರು 'ಲಂಬೋರ್ಗಿನಿ' ಚಕ್ರವರ್ತಿ ಬಳಿ ಇದೆ. ಇತ್ತಿಚೇಗಷ್ಟೆ ಈ ಕಾರನ್ನ ದರ್ಶನ್ ಖರೀದಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಒಟ್ನಲ್ಲಿ, ದರ್ಶನ್ ಬಳಿ ಇಷ್ಟೆಲ್ಲ ಕಾರುಗಳಿದ್ದು, ದಾಸನ ಕಾರ್ ಕ್ರೇಜ್ ಹೇಗಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ.

More from Filmibeat

English summary
Challenging star darshan rides sports car in mysore. now video is goes viral on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X