ದುಬಾರಿ ಕಾರು ಬಿಟ್ಟು ರೈತ ಮಿತ್ರ ಟ್ರ್ಯಾಕ್ಟರ್ ಓಡಿಸುತ್ತಿರುವ ಡಿ ಬಾಸ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇರುವ ಕಾರ್ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ದರ್ಶನ್ ಬಳಿ ವೆರೈಟಿ ಕಾರುಗಳಿಗೆ. ಮಾರುತಿ 800 ಕಾರಿನಿದಂದ ಲ್ಯಾಂಬರ್ಗಿನಿ ವರೆಗೂ ಎಲ್ಲಾ ರೀತಿಯ ಕಾರುಗಳ ಕಲೆಕ್ಷನ್ ಇವೆ. ಕಾರ್ ಕಲೆಕ್ಷನ್ ಮಾಡುವುದು ದರ್ಶನ್ ಗೆ ತುಂಬಾ ಇಷ್ಟ. ಹೊಸ ಹೊಸ ಕಾರುಗಳು ಅವರ ಮನೆಗೆ ಎಂಟ್ರಿ ಕೊಡುತ್ತಿರುತ್ತೆ. ಇದೀಗ ದರ್ಶನ್ ಟ್ರ್ಯಾಕ್ಟರ್ ಖರೀದಿಸಿದ್ದಾರೆ.
Recommended Video
ಪ್ರಾಣಿಗಳು, ವಾಹನ ಮತ್ತು ಫೋಟೋಗ್ರಫಿ ಎಂದರೆ ತುಂಬಾ ಇಷ್ಟ ಪಡುವ ದರ್ಶನ್, ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳನ್ನು ಸಾಕುತ್ತಿರುವ ವಿಡಿಯೋ ಆಗಾಗ ವೈರಲ್ ಆಗುತ್ತಿರುತ್ತೆ. ಇದೀಗ ದರ್ಶನ್ ದುಬಾರಿ ಕಾರುಗಳನ್ನು ಬಿಟ್ಟು ರೈತ ಮಿತ್ರ ಟ್ರ್ಯಾಕ್ಟರ್ ಹತ್ತಿರುವ ವಿಡಿಯೋ ಫ್ಯಾನ್ ಪೇಜ್ ಗಳಲ್ಲಿ ಹರಿದಾಡುತ್ತಿದೆ.
ಹೌದು, ಡಿ ಬಾಸ್ ಖರೀದಿಸಿರುವ ಹೊಸ ಟ್ರ್ಯಾಕ್ಟರ್ ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ. ಲಾಕ್ ಡೌನ್ ನಲ್ಲಿ ದರ್ಶನ್ ಹೆಚ್ಚಾಗಿ ಮೈಸೂರಿನ ಫಾರ್ಮ್ ಹೌಸ್ ನಲ್ಲಿಯೇ ಕಾಲಕಳೆಯುತ್ತಿದ್ದಾರೆ.

ಪ್ರೀತಿಯ ಪ್ರಾಣಿಗಳ ಜೊತೆಯೇ ಹೆಚ್ಚು ಸಮಯ ಕಳೆಯುತ್ತಿರುವ ದರ್ಶನ್ ಇತ್ತೀಚಿಗೆ ಟ್ರ್ಯಾಕ್ಟರ್ ಓಡಿಸಿ ಅಚ್ಚರಿ ಮೂಡಿಸಿದ್ದಾರೆ. ಗೆಳೆಯರನ್ನು ಅಕ್ಕ-ಪಕ್ಕ ಕೂರಿಸಿಕೊಂಡು ಟ್ರ್ಯಾಕ್ಟರ್ ಓಡಿಸುತ್ತಿರುವ ದರ್ಶನ್ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸರಳತೆಗೆ ಇನ್ನೊಂದು ಹೆಸರು ದರ್ಶನ್. ಸಾಮಾನ್ಯ ವ್ಯಕ್ತಿಯಂತೆ ದರ್ಶನ್ ರಸ್ತೆಯಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿರುವುದನ್ನು ನೋಡಿ ಅಭಿಮಾನಿಗಳು ಹಾಡಿಹೊಗಳುತ್ತಿದ್ದಾರೆ.
ಸದ್ಯ ಸಿನಿಮಾಗೆ ಸಂಬಂಧಿಸಿದ ಯಾವುದೆ ಕೆಲಸಗಳು ನಡೆಯುತ್ತಿಲ್ಲ. ರಾಬರ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದರೆ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ರಾಬರ್ಟ್ ರಿಲೀಸ್ ಮುಂದಿವರ್ಷ ಎಂದು ಹೇಳಲಾಗುತ್ತಿದೆ. ಜೊತೆಗೆ ಮದಕರಿ ನಾಯಕ ಚಿತ್ರೀಕರಣ ಸಹ ಮುಂದಕ್ಕೆ ಹೋಗಿದೆ ಹಾಗಾಗಿ ದರ್ಶನ್ ಸದ್ಯ ಫಾರ್ಮ್ ಹೌಸ್ ನಲ್ಲಿ ಗೆಳೆಯರ ಜೊತೆ ಕಾಲಕಳೆಯುತ್ತಿದ್ದಾರೆ.


Click it and Unblock the Notifications











