twitter
    For Quick Alerts
    ALLOW NOTIFICATIONS  
    For Daily Alerts

    ಅಪರೂಪದ ದಾಖಲೆ ಬರೆದ ದರ್ಶನ್ 'ರಾಬರ್ಟ್'

    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಬಿಡುಗಡೆಯಾಗಿ ಸಕ್ಸಸ್ ಆಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಂಡಿದ್ದ ರಾಬರ್ಟ್ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬಿಸಿನೆಸ್ ಮಾಡಿತ್ತು. ವರದಿಗಳ ಪ್ರಕಾರ 100 ಕೋಟಿ ಕಲೆಕ್ಷನ್ ಮಾಡಿದೆ. ಆಮೇಲೆ ಅಮೆಜಾನ್ ಪ್ರೈಮ್‌ನಲ್ಲೂ ರಾಬರ್ಟ್ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

    ಆಗಸ್ಟ್ ತಿಂಗಳಲ್ಲಿ ರಾಬರ್ಟ್ ಸಿನಿಮಾ ಹಿಂದಿಗೆ ಡಬ್ ಆಗಿ ಕಿರುತೆರೆಯಲ್ಲಿ ಪ್ರೀಮಿಯರ್ ಕಂಡಿದೆ. ಅದಾದ ಕೆಲವು ದಿನದ ನಂತರ ಯೂಟ್ಯೂಬ್‌ನಲ್ಲಿ ರಾಬರ್ಟ್ ಹಿಂದಿ ವರ್ಷನ್ ಸಿನಿಮಾ ಅಪ್‌ಲೌಡ್ ಆಗಿತ್ತು. ಕೇವಲ 5 ದಿನದಲ್ಲಿ 20 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿತ್ತು. ಹೀಗೆ, ಸೌತ್‌ ಹಾಗೂ ಉತ್ತರ ಭಾರತದಲ್ಲಿಯೂ ರಾಬರ್ಟ್ ಸದ್ದು ಜೋರಾಗಿದ್ದು, ಈಗ ಮತ್ತೊಂದು ಅಪರೂಪದ ದಾಖಲೆ ತನ್ನ ಹೆಸರಿಗೆ ಬರೆದುಕೊಂಡಿದೆ. ಮುಂದೆ ಓದಿ...

    ದರ್ಶನ್ ಹೊಸ 'ಪ್ಯಾನ್ ಇಂಡಿಯಾ' ಸಿನಿಮಾದ ಹೆಸರು ಘೋಷಣೆದರ್ಶನ್ ಹೊಸ 'ಪ್ಯಾನ್ ಇಂಡಿಯಾ' ಸಿನಿಮಾದ ಹೆಸರು ಘೋಷಣೆ

    ಟ್ರೈಲರ್‌ಗೆ ಸಿಕ್ತು 100K ಕಾಮೆಂಟ್ಸ್

    ಟ್ರೈಲರ್‌ಗೆ ಸಿಕ್ತು 100K ಕಾಮೆಂಟ್ಸ್

    ರಾಬರ್ಟ್ ಸಿನಿಮಾದ ಕನ್ನಡ ಟ್ರೈಲರ್‌ ಯೂಟ್ಯೂಬ್‌ನಲ್ಲಿ ಅಪರೂಪದ ದಾಖಲೆಗೆ ಪಾತ್ರವಾಗಿದೆ. ಫೆಬ್ರವರಿ 16ಕ್ಕೆ ತೆರೆಕಂಡಿದ್ದ ಟ್ರೈಲರ್‌ಗೆ 100K (1 ಲಕ್ಷ) ಕಾಮೆಂಟ್ ಬಂದಿದೆ. ವರದಿಗಳ ಪ್ರಕಾರ, ಕನ್ನಡದ ಟ್ರೈಲರ್‌ವೊಂದಕ್ಕೆ 100K ಕಾಮೆಂಟ್ ಬಂದಿರುವುದು ಇದೇ ಮೊದಲ. ಸ್ಯಾಂಡಲ್‌ವುಡ್‌ನಲ್ಲಿ 100K ಕಾಮೆಂಟ್ ಪಡೆದ ಮೊದಲ ಟ್ರೈಲರ್ ರಾಬರ್ಟ್ ಎಂದು ಅಭಿಮಾನಿಗಳು ಸಂಭ್ರಸುತ್ತಿದ್ದಾರೆ.

    ಹಿಂದಿಯಲ್ಲಿ ರಾಬರ್ಟ್ ಅಬ್ಬರ: 5 ದಿನದಲ್ಲಿ 20 ಮಿಲಿಯನ್ ವೀಕ್ಷಣೆಹಿಂದಿಯಲ್ಲಿ ರಾಬರ್ಟ್ ಅಬ್ಬರ: 5 ದಿನದಲ್ಲಿ 20 ಮಿಲಿಯನ್ ವೀಕ್ಷಣೆ

    ಅಭಿಮಾನಿಗಳಿಂದ ಸಂಭ್ರಮ

    ಅಭಿಮಾನಿಗಳಿಂದ ಸಂಭ್ರಮ

    ರಾಬರ್ಟ್ ಸಿನಿಮಾದ ಟ್ರೈಲರ್ 100K ಕಾಮೆಂಟ್ ಸಾಧನೆ ಮಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ಯೂಟ್ಯೂಬ್‌ನಲ್ಲಿ ಪ್ರಸ್ತುತ 92K ಕಾಮೆಂಟ್ ತೋರಿಸುತ್ತಿದೆ. 100K ಆಗಿತ್ತು, ಮತ್ತೆ 92k ಹೇಗೆ ಎಂಬ ಅಚ್ಚರಿಯೂ ಎದುರಾಗಿದ್ದು, ತಾಂತ್ರಿಕ ದೋಷ ಉಂಟಾಗಿರಬಹುದು ಎನ್ನಲಾಗಿದೆ.

    ಹಿಂದಿ ವರ್ಷನ್‌ಗೆ ಭರ್ಜರಿ ರೆಸ್‌ಪಾನ್ಸ್

    ಹಿಂದಿ ವರ್ಷನ್‌ಗೆ ಭರ್ಜರಿ ರೆಸ್‌ಪಾನ್ಸ್

    ರಾಬರ್ಟ್ ಹಿಂದಿ ವರ್ಷನ್ ಸಿನಿಮಾಗೆ ಯೂಟ್ಯೂಬ್‌ನಲ್ಲಿ ಭರ್ಜರಿ ರೆಸ್‌ಪಾನ್ಸ್ ಸಿಕ್ಕಿದೆ. 37 ಮಿಲಿಯನ್ ವೀಕ್ಷಣೆ ಪಡೆದಿರುವ ರಾಬರ್ಟ್, 500K ಲೈಕ್ಸ್ ಪಡೆದುಕೊಂಡಿದೆ. 500K ಲೈಕ್ಸ್ ಪಡೆದ ನಾಲ್ಕನೇ ಕನ್ನಡ ಸಿನಿಮಾ ರಾಬರ್ಟ್.

    ತರುಣ್ ಸುಧೀರ್ ನಿರ್ದೇಶನ

    ತರುಣ್ ಸುಧೀರ್ ನಿರ್ದೇಶನ

    ಅಂದ್ಹಾಗೆ, ರಾಬರ್ಟ್ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದರು. ಈ ಹಿಂದೆ 'ಚೌಕ' ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದ ಡಿ ಬಾಸ್‌ಗೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು. ರಾಬರ್ಟ್ ಸಿನಿಮಾಗೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹಾಕಿದ್ದಾರೆ. ಆಶಾ ಭಟ್ ರಾಬರ್ಟ್ ಚಿತ್ರದೊಂದಿಗೆ ಕನ್ನಡಕ್ಕೆ ಎಂಟ್ರಿಯಾದರು. ಇನ್ನುಳಿದಂತೆ ರವಿಶಂಕರ್, ಜಗಪತಿ ಬಾಬು, ವಿನೋದ್ ಪ್ರಭಾಕರ್, ರವಿ ಕಿಶನ್, ಶಿವರಾಜ್ ಕೆ ಆರ್ ಪೇಟೆ, ಚಿಕ್ಕಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ.

    ದರ್ಶನ್ 'ಕ್ರಾಂತಿ'

    ದರ್ಶನ್ 'ಕ್ರಾಂತಿ'

    ರಾಬರ್ಟ್ ಸಿನಿಮಾ ಆದ್ಮೇಲೆ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಜವೀರ ಮದಕರಿ ನಾಯಕ ಚಿತ್ರ ಆರಂಭಿಸಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಈ ಚಿತ್ರದ ಶೂಟಿಂಗ್‌ಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ಈ ನಡುವೆ ಯಜಮಾನ ನಿರ್ಮಾಪಕಿ ಶೈಲಜಾ ನಾಗ್ ಜೊತೆ 55ನೇ ಸಿನಿಮಾಗೆ ಚಾಲನೆ ಕೊಟ್ಟಿದ್ದು, ಆ ಚಿತ್ರಕ್ಕೆ 'ಕ್ರಾಂತಿ' ಎಂದು ಹೆಸರಿಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ವಿ ಹರಿಕೃಷ್ಣ ಈ ಚಿತ್ರಕ್ಕೆ ಸ್ವತಂತ್ರವಾಗಿ ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ಹೆಸರು ಮತ್ತು ಸಿನಿಮಾ ಪಕ್ಕಾ ಆಗಿದ್ದು, ಉಳಿದ ಕಲಾವಿದರು ಹಾಗೂ ಚಿತ್ರೀಕರಣ ದಿನಾಂಕ ಯಾವಾಗ ಎನ್ನುವುದು ಕುತೂಹಲವಾಗಿ ಉಳಿದುಕೊಂಡಿದೆ.

    English summary
    Challenging star Darshan's Roberrt becomes the 1st trailer in Kannada to have 100K comments on YouTube.
    Tuesday, September 14, 2021, 14:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X