twitter
    For Quick Alerts
    ALLOW NOTIFICATIONS  
    For Daily Alerts

    ರಾಬರ್ಟ್ ಅಬ್ಬರ: ಮೊದಲ ದಿನವೇ ದಾಖಲೆ ಬರೆದ ದಾಸನ ಸಿನಿಮಾ

    |

    ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ಕಡೆ ರಾಬರ್ಟ್ ಸದ್ದು ಜೋರಾಗಿದೆ. ರಿಲೀಸ್‌ಗೂ ಮುಂಚೆ ಹಲವು ದಾಖಲೆಗಳನ್ನು ಬರೆದಿರುವ ಡಿ ಬಾಸ್ ಸಿನಿಮಾ ಈಗ ಮತ್ತೊಂದು ರೆಕಾರ್ಡ್ ತನ್ನ ಹೆಸರಿಗೆ ದಾಖಲಿಸಿದೆ.

    Recommended Video

    Roberrt ರೆಕಾರ್ಡ್ ನೋಡಲು ಕಾದು ಕುಳಿತ ಡಿ ಬಾಸ್ ಅಭಿಮಾನಿಗಳು | Darshan | Tharun Sudhir

    ಕರ್ನಾಟಕದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ರಾಬರ್ಟ್ ತೆರೆಗೆ ಬರ್ತಿದೆ. ಅದರ ಜೊತೆಗೆ ನೆರೆರಾಜ್ಯಗಳಲ್ಲೂ ದರ್ಶನ್ ಸಿನಿಮಾ ಅದ್ಧೂರಿ ಬಿಡುಗಡೆಗೆ ಸಜ್ಜಾಗಿದೆ. ಕೇರಳ, ದೆಹಲಿ, ತಮಿಳುನಾಡು ಸೇರಿದಂತೆ ಪ್ರಮುಖ ರಾಜ್ಯಗಳಲ್ಲೂ ರಾಬರ್ಟ್ ದರ್ಶನ ಕೊಡಲಿದೆ. ಕೊರೊನಾ ನಂತರ ಚಿತ್ರಮಂದಿರಕ್ಕೆ ಬರ್ತಿರುವ ಸ್ಯಾಂಡಲ್‌ವುಡ್‌ ಸಿನಿಮಾ ಬಿಸಿನೆಸ್ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಮೊದಲ ದಿನದ ಬಿಡುಗಡೆಯಲ್ಲೂ ರಾಬರ್ಟ್ ಹೊಸ ದಾಖಲೆ ಸೃಷ್ಟಿಸಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಏನದು?

    ಕರ್ನಾಟಕದಲ್ಲಿ 656 ಥಿಯೇಟರ್

    ಕರ್ನಾಟಕದಲ್ಲಿ 656 ಥಿಯೇಟರ್

    ಕರ್ನಾಟಕ ರಾಜ್ಯಾದ್ಯಂತ ಸುಮಾರು 656 ಚಿತ್ರಮಂದಿರಗಳಲ್ಲಿ ರಾಬರ್ಟ್ ಸಿನಿಮಾ ತೆರೆಕಾಣುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಸದ್ಯದ ವರದಿ ಪ್ರಕಾರ, ಕನ್ನಡ ಸಿನಿಮಾವೊಂದು ನಮ್ಮ ರಾಜ್ಯದಲ್ಲಿ ಇಷ್ಟು ದೊಡ್ಡ ಮಟ್ಟದ ಬಿಡುಗಡೆ ಕಾಣುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಪೊಗರು ಹಾಗೂ ಹೀರೋ ಸಿನಿಮಾ ಪ್ರದರ್ಶನವಾಗುತ್ತಿದ್ದ ಹಲವು ಚಿತ್ರಮಂದಿರಗಳು ರಾಬರ್ಟ್ ಪಾಲಾಗಿದೆ ಎಂಬ ವಿಚಾರವೂ ವರದಿಯಾಗಿದೆ.

    ಹೊಸ ನಿರ್ದೇಶಕರ ಕನಸು ಭಗ್ನಗೊಳಿಸಿದ ನಟ ದರ್ಶನ್ ನಿರ್ಧಾರ!ಹೊಸ ನಿರ್ದೇಶಕರ ಕನಸು ಭಗ್ನಗೊಳಿಸಿದ ನಟ ದರ್ಶನ್ ನಿರ್ಧಾರ!

    ಮೊದಲ ದಿನವೇ ಅತಿ ಹೆಚ್ಚು ಶೋ

    ಮೊದಲ ದಿನವೇ ಅತಿ ಹೆಚ್ಚು ಶೋ

    100ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ದಾಸನ ಸಿನಿಮಾ ರಿಲೀಸ್ ಆಗುತ್ತಿದೆ. ರಾಬರ್ಟ್ ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಮೊದಲ ದಿನ ಎಲ್ಲ ಚಿತ್ರಗಳು ಸೇರಿ 2786 ಶೋಗಳು ರಾಬರ್ಟ್ ಸಿನಿಮಾ ಪ್ರದರ್ಶನ ಕಾಣಲಿದೆ. ಇದು ಸ್ಯಾಂಡಲ್‌ವುಡ್ ಪಾಲಿಗೆ ನೂತನ ದಾಖಲೆ.

    ಆಂಧ್ರ-ತೆಲಂಗಾಣದಲ್ಲಿ ಹೇಗಿದೆ?

    ಆಂಧ್ರ-ತೆಲಂಗಾಣದಲ್ಲಿ ಹೇಗಿದೆ?

    ಕರ್ನಾಟಕದಲ್ಲಿ ಮಾತ್ರವಲ್ಲ ಅಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ ರಾಬರ್ಟ್ ಹವಾ ಜೋರಾಗಿದೆ. ಮೊದಲ ದಿನ ಆಂಧ್ರದಲ್ಲಿ 433 ಶೋಗಳು, ತೆಲಂಗಾಣದಲ್ಲಿ 407 ಶೋಗಳು ರಾಬರ್ಟ್ ಪಡೆದುಕೊಂಡಿದೆ. ಒಟ್ಟಾರೆ ಮೂರು ರಾಜ್ಯಗಳಿಂದ ಮೊದಲ ದಿನ 3723 ಶೋ ಆಯೋಜನೆಯಾಗಿದೆ.

    ರಾಮನ ಸೆಟ್‌ ಹಿಂದಿನ ರೋಚಕ ಕಹಾನಿ ಬಿಚ್ಚಿಟ್ಟ ರಾಬರ್ಟ್ ಮಾಸ್ಟರ್ರಾಮನ ಸೆಟ್‌ ಹಿಂದಿನ ರೋಚಕ ಕಹಾನಿ ಬಿಚ್ಚಿಟ್ಟ ರಾಬರ್ಟ್ ಮಾಸ್ಟರ್

    50 ಕೋಟಿಗೂ ಅಧಿಕ ಖರ್ಚು?

    50 ಕೋಟಿಗೂ ಅಧಿಕ ಖರ್ಚು?

    ರಾಬರ್ಟ್ ಸಿನಿಮಾ ಬಹಳ ದೊಡ್ಡ ವೆಚ್ಚದಲ್ಲಿ ತಯಾರಾಗಿದೆ. ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರ ನಿರ್ಮಾಣ ಮಾಡಿದ್ದು. ಸುಮಾರು 50 ಕೋಟಿಗೂ ಅಧಿಕ ಬಂಡವಾಳ ಹಾಕಲಾಗಿದೆ. ರಿಲೀಸ್‌ಗೂ ಮುಂಚೆಯೇ 100 ಕೋಟಿ ಬಿಸಿನೆಸ್ ಮಾಡಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಈ ನಡುವೆ ಮೊದಲ ದಿನ ರಾಬರ್ಟ್ ಸಿನಿಮಾ ಎಷ್ಟು ಗಳಿಸಬಹುದು ಎನ್ನುವುದರ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

    English summary
    Challenging star Darshan starrer Roberrt movie set to release on march 11th all over Karnataka and Andhra Pradesh.
    Wednesday, March 10, 2021, 19:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X