ದರ್ಶನ್ ಭೇಟಿ ಬೆನ್ನಲ್ಲೇ ಹಿರಿಯ ಪತ್ರಕರ್ತನನ್ನು ಹೊಗಳಿ ಇತರರ ಕಿವಿ ಹಿಂಡಿದ ರಕ್ಷಿತಾ!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸಿಲುಕಿಕೊಂಡಿರುವುದು ದೇಶಾದ್ಯಂತ ಸದ್ದು ಮಾಡ್ತಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಈ ಸುದ್ದಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಸ್ಟಾರ್ ನಟನೊಬ್ಬ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಕನ್ನಡ ಮಾಧ್ಯಮಗಳಲ್ಲಿ ಈ ಸುದ್ದಿ ನಿರಂತವಾಗಿ ಪ್ರಸಾರವಾಗುತ್ತಾ ಬರುತ್ತಿದೆ.
ಕಳೆದ 22 ದಿನಗಳಿಂದ ನಟ ದರ್ಶನ್ ಬಂಧನ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಪೊಲೀಸರ ವಿಚಾರಣೆ ತನಿಖೆಯ ಬಗ್ಗೆಯೂ ಕ್ಷಣಕ್ಷಣದ ಮಾಹಿತಿನನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಇನ್ನು ಕೆಲ ಮಾಧ್ಯಮಗಳಲ್ಲಿ ಬಳಸುತ್ತಿರುವ ಭಾಷೆಯ ಬಗ್ಗೆ ನಟಿ ರಕ್ಷಿತಾ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

"ರಂಗನಾಥ್ ಸರ್(ಪಬ್ಲಿಕ್ ಟಿವಿ) ಸುದ್ದಿ ಓದುವುದನ್ನು ಕೇಳುವುದಕ್ಕೆ ಬಹಳ ವಿಭಿನ್ನವಾಗಿರುತ್ತದೆ. ಅಷ್ಟೇ ಚೆನ್ನಾಗಿರುತ್ತದೆ ಅಲ್ವಾ? ಅವರು ಬಹಳ ನಾಜೂಕಾಗಿ ನಯವಾಗಿ ಒಳ್ಳೆಯ ಪದಗಳನ್ನು ಬಳಸಿ ಮಾತನಾಡುತ್ತಾರೆ. ಆ ವಿಚಾರದಲ್ಲಿ ಅವರು ಪ್ರತ್ಯೇಕವಾಗಿ ನಿಲ್ಲುತ್ತಾರೆ ಅಲ್ವಾ? ಕೆಲವರು ಸುದ್ದಿವಾಚಕರಾಗಿದ್ದು ಬಹಳ ಕೆಟ್ಟ ಭಾಷೆ ಬಳಸುತ್ತಾರೆ. ಸಾರ್ವಜನಿಕ ವೇದಿಕೆಯಾದ ಮಾಧ್ಯಮಗಳಲ್ಲಿ ಅದನ್ನು ಕೇಳುವುದಕ್ಕೆ ಚೆನ್ನಾಗಿರಲ್ಲ"
"ರಂಗನಾಥ್ ಸರ್ ಬಹಳ ಪ್ರಬುದ್ಧರು. ಅವರು ನಿಜಕ್ಕೂ ಸಾಕಷ್ಟು ಜನ ಸುದ್ದಿವಾಚಕರಿಗೆ ಪ್ರೇರಣೆ. ಇದು ನನಗೆ ಅನ್ನಿಸಿದ್ದು. ಹಂಚಿಕೊಳ್ಳಬೇಕು ಎನಿಸಿದ್ದು. ಇವತ್ತು ಎಲ್ಲರಿಗೂ ಒಳ್ಳೆ ದಿನ ಅಂದುಕೊಳ್ತೀನಿ" ಎಂದು ರಕ್ಷಿತ್ ಪ್ರೇಮ್ ಬರೆದುಕೊಂಡಿದ್ದಾರೆ. ಶನಿವಾರ(ಜೂನ್ 29) ರಕ್ಷಿತಾ ಪತಿ ಪ್ರೇಮ್ ಜೊತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ದರ್ಶನ್ ಜೊತೆ ಮಾತನಾಡಿ ಬಂದಿದ್ದಾರೆ.
"15-20 ದಿನಗಳಿಂದ ಏನೇನು ಆಗಿದೆಯೋ, ನೀವು ಮಾಧ್ಯಮದವರು ಏನೇನು ತೋರಿಸುತ್ತಿದ್ದಿರೋ ಅದು ಅತ್ಯಂತ ದುರಾದೃಷ್ಟಕರ. ನಾನು ಏನು ಹೇಳುವುದಕ್ಕೆ ಇಷ್ಟ ಪಡುತ್ತೇನೆ ಅಂದರೆ, ಕಾನೂನಿಗಿಂತ ಯಾರೂ ದೊಡ್ಡವರಲ್ಲ" ಎಂದು ರಕ್ಷಿತಾ ಪ್ರೇಮ್ ಹೇಳಿದ್ದರು.

ನಿರ್ದೇಶಕ ಪ್ರೇಮ್ ಮಾತನಾಡಿ, "ದರ್ಶನ್ ನಮಗೂ ಸ್ನೇಹಿತರು ಎಲ್ಲರಿಗೂ ಸ್ನೇಹಿತರು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಕರಣ ಕೋರ್ಟ್‌ನಲ್ಲಿದೆ. ಹಾಗಾಗಿ ನಾವ್ಯಾರೂ ಏನೂ ಮಾತಾಡುವುದಕ್ಕೆ ಹೋಗಬಾರದು. ರೇಣುಕಾಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೇಳುತ್ತಾ, ಕಾನೂನು ಪ್ರಕಾರ ಏನೆಲ್ಲ ಆಗಬೇಕೋ ಅದೆಲ್ಲ ಆಗುತ್ತಿದೆ. ಕಾನೂನು ಪ್ರಕಾರ ಯಾವುದೂ ದೊಡ್ಡದಲ್ಲ. ಇದರ ಮೇಲೆ ದಯವಿಟ್ಟು ಏನೂ ಕೇಳುವುದಕ್ಕೆ ಹೋಗಬೇಡಿ." ಎಂದಿದ್ದರು.


Click it and Unblock the Notifications











