For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ಜಾತ್ರೆ: ಸಿದ್ದೇಶ್ವರ ಥಿಯೇಟರ್‌ನಲ್ಲಿ ರಾರಾಜಿಸುತ್ತಿದೆ ಡಿ ಬಾಸ್ 13 ಕಟೌಟ್

  |

  ಸ್ಯಾಂಡಲ್‌ವುಡ್‌ನಲ್ಲಿ ರಾಬರ್ಟ್ ಜಾತ್ರೆ ಶುರುವಾಗಿದೆ. ಒಂದು ವರ್ಷದ ಬಳಿಕ ದಾಸ ತೆರೆಮೇಲೆ ಬರ್ತಿರುವ ಕಾರಣ ಡಿ ಫ್ಯಾನ್ಸ್ ಈ ವರ್ಷದ ಮಹಾಶಿವರಾತ್ರಿ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸುವ ನಿರೀಕ್ಷೆಯಲ್ಲಿದ್ದಾರೆ.

  ಹಲವು ಕಡೆ ಮಧ್ಯರಾತ್ರಿ ಪ್ರದರ್ಶನಕ್ಕೆ ಅಭಿಮಾನಿಗಳು ಬೇಡಿಕೆಯಿಟ್ಟಿದ್ದರು. ಆದರೆ ಸುರಕ್ಷತೆ ದೃಷ್ಟಿಯಿಂದ ಅವಕಾಶ ಕೊಡಲಿಲ್ಲ ಹಾಗಾಗಿ, ಗುರುವಾರ ಬೆಳಗ್ಗೆಯಿಂದ ರಾಜ್ಯಾದ್ಯಂತ ರಾಬರ್ಟ್ ಅಬ್ಬರ ಆರಂಭವಾಗಲಿದೆ. ದರ್ಶನ್ ಅಭಿಮಾನಿಗಳು ಚಿತ್ರಮಂದಿರದ ಎದುರು ದೊಡ್ಡ ದೊಡ್ಡ ಕಟೌಟ್‌ಗಳನ್ನು ಹಾಕಿ ಸ್ವಾಗತಿಸಲು ಸಜ್ಜಾಗಿದ್ದಾರೆ.

  ರಾಬರ್ಟ್ ಅಬ್ಬರ: ಮೊದಲ ದಿನವೇ ದಾಖಲೆ ಬರೆದ ದಾಸನ ಸಿನಿಮಾರಾಬರ್ಟ್ ಅಬ್ಬರ: ಮೊದಲ ದಿನವೇ ದಾಖಲೆ ಬರೆದ ದಾಸನ ಸಿನಿಮಾ

  ರಾಬರ್ಟ್ ಕಟೌಟ್ ಅಪರೂಪದ ದಾಖಲೆ:

  ಕಟೌಟ್ ವಿಚಾರದಲ್ಲಿ ಬೆಂಗಳೂರಿನ ಜೆಪಿ ನಗರದ ಚಿತ್ರಮಂದಿರ ಅಪರೂಪದ ದಾಖಲೆ ಬರೆದಿದೆ. ಜೆಪಿ ನಗರದ ಸಿದ್ದೇಶ್ವರ ಥಿಯೇಟರ್ ಎದುರು 13 ಕಟೌಟ್‌ಗಳನ್ನು ನಿಲ್ಲಿಸಲಾಗಿದೆ. ಒಂದೇ ಚಿತ್ರಮಂದಿರದಲ್ಲಿ ಇಷ್ಟೊಂದು ಕಟೌಟ್ ಹಾಕಿರುವುದು ಇದೇ ಮೊದಲು.

  ದರ್ಶನ್ ನಟನೆಯ ಸಿನಿಮಾಗಳು ಹದಿಮೂರು ಕಟೌಟ್ ನಿಲ್ಲಿಸಲಾಗಿದೆ. ಚಕ್ರವರ್ತಿ, ಯಜಮಾನ, ಒಡೆಯ, ಐರಾವತ, ಸಂಗೊಳ್ಳಿ ರಾಯಣ್ಣ, ತಾರಕ್ ಸಿನಿಮಾಗಳ ಕಟೌಟ್ ಹಾಕಲಾಗಿದೆ.

  ಇದಕ್ಕೂ ಮುಂಚೆ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡ್ಗ' ಚಿತ್ರಕ್ಕಾಗಿ ಅದೇ ಚಿತ್ರಮಂದಿರ ಎದುರು ಹತ್ತು ಕಟೌಟ್ ಹಾಕಲಾಗಿತ್ತು. ಈಗ ದರ್ಶನ್ ಅವರ ಹದಿಮೂರು ಕಟೌಟ್ ನಿಲ್ಲಿಸುವ ಮೂಲಕ ದಾಖಲೆ ಬರೆದಿದ್ದಾರೆ ಡಿ ಅಭಿಮಾನಿಗಳು.

  ರಾಮನ ಸೆಟ್‌ ಹಿಂದಿನ ರೋಚಕ ಕಹಾನಿ ಬಿಚ್ಚಿಟ್ಟ ರಾಬರ್ಟ್ ಮಾಸ್ಟರ್ರಾಮನ ಸೆಟ್‌ ಹಿಂದಿನ ರೋಚಕ ಕಹಾನಿ ಬಿಚ್ಚಿಟ್ಟ ರಾಬರ್ಟ್ ಮಾಸ್ಟರ್

  ಇನ್ನುಳಿದಂತೆ ರಾಬರ್ಟ್ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿದ್ದಾರೆ. ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

  ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಡಿ ಬಾಸ್ ರಾಬರ್ಟ್ | Filmibeat Kannada
  English summary
  Roberrt Movie Release Date, Roberrt cutout, darshan cutout, jp nagar siddeshwara theatre, Roberrt Movie bengaluru theatres,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X