»   » ದರ್ಶನ್ ಒಡಲೊಳಗಿಂದ ದಿಢೀರ್ ಅಂತ ಸಿಡಿದ ಐದು ಸಿಡಿಗುಂಡುಗಳಿವು.!

ದರ್ಶನ್ ಒಡಲೊಳಗಿಂದ ದಿಢೀರ್ ಅಂತ ಸಿಡಿದ ಐದು ಸಿಡಿಗುಂಡುಗಳಿವು.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವೆ ಮನಸ್ತಾಪ ಭುಗಿಲೆದ್ದಿದೆ ಎಂಬ ಗುಸುಗುಸು ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಆರಂಭವಾಗಿ ವರ್ಷದ ಮೇಲಾಗಿತ್ತು. ಆ ಗುಸುಗುಸು ನಿಜ ಅಂತ ಸ್ವತಃ ದರ್ಶನ್ ಸಾಮಾಜಿಕ ಜಾಲತಾಣಗಳಲ್ಲಿ ದಿಢೀರ್ ಅಂತ ಬುಸುಗುಟ್ಟಿದ್ದು ಮಾರ್ಚ್ 5 ರಂದು.

ಒಂದ್ಕಾಲದಲ್ಲಿ ಕಿಚ್ಚ ಸುದೀಪ್ ಪಕ್ಕದಲ್ಲಿ ನಿಂತು, ''ಇಬ್ಬರು ಚೆನ್ನಾಗಿದ್ದೀವಿ ಅಂದ್ರೆ ಖುಷಿ ಪಡಿ. ಒಟ್ಟಿಗೆ ಓಡುತ್ತಿದ್ದೇವೆ ಅಂದ್ರೆ ಸಂತೋಷ ಪಡಬೇಕಾದ ವಿಚಾರ. ಇದರ ಬಗ್ಗೆ ಪ್ರಶ್ನೆ ಮಾಡಬೇಡಿ'' ಅಂತ ಮಾಧ್ಯಮಗಳ ಮೇಲೆ ಗುಡುಗಿದ್ದ ದರ್ಶನ್, ಇಂದು ಅದೇ ಸುದೀಪ್ ಬಗ್ಗೆ ಸಿಡಿಮಿಡಿಗೊಂಡಿದ್ದಾರೆ. ವರ್ಷಗಳ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ಸುದೀಪ್ ನೀಡಿದ ಸಂದರ್ಶನ ಇಂದು ವಿವಾದದ ಕೇಂದ್ರಬಿಂದುವಾಗಿದೆ.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಭಾನುವಾರ ಸಂಜೆ ಸೂರ್ಯ ತಂಪಾಗುತ್ತಿದ್ದಂತೆಯೇ, ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕೆಂಪಾದ ದರ್ಶನ್ ಒಡಲೊಳಗಿಂದ ಸಿಡಿದ ಐದು ಸಿಡಿಗುಂಡುಗಳು ಇಲ್ಲಿವೆ ನೋಡಿ....

ಸುದೀಪ್-ದರ್ಶನ್ ಸ್ನೇಹ ಅಂತ್ಯ

''ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ಕನ್ನಡ ಚಿತ್ರರಂಗಕ್ಕಾಗಿ ದುಡಿಯುವ ಸಹ ಕಲಾವಿದರಷ್ಟೇ. ದಯವಿಟ್ಟು ಯಾವುದೇ ಗಾಳಿಸುದ್ದಿ ಹಬ್ಬಿಸಬೇಡಿ. ಇದು ಇಲ್ಲಿಗೆ ಅಂತ್ಯ'' - ಇದು ದರ್ಶನ್ ರವರಿಂದ ಸಿಡಿದ ಮೊದಲ ಸಿಡಿಗುಂಡು.[ದರ್ಶನ್ ಬಗ್ಗೆ ಸುದೀಪ್ ಹೇಳಿದ್ದು ಸುಳ್ಳಾ.? ಪಿ.ಎನ್.ಸತ್ಯ ಬಾಯ್ಬಿಟ್ಟ ಸತ್ಯ ಏನು.?]

ದರ್ಶನ್ ಕಡೆಯಿಂದ ಬಿದ್ದ ಎರಡನೇ ಬಾಂಬ್

ಇದಕ್ಕಿದ್ದಂತೆ ಸುದೀಪ್ ಮತ್ತು ದರ್ಶನ್ ನಡುವೆ ಏನಾಯ್ತು. ಬಹಿರಂಗವಾಗಿ ದರ್ಶನ್ ಹೀಗೆ ಹೇಳಿಕೆ ನೀಡ್ತಾರಂದ್ರೆ, ಅಂಥದ್ದೇನಾಗಿರಬಹುದು ಅಂತ ಎಲ್ಲರೂ ತಲೆಗೆ ಹುಳ ಬಿಟ್ಟುಕೊಂಡಿರುವಾಗಲೇ, ದರ್ಶನ್ ಕಡೆಯಿಂದ ಎರಡನೇ ಬಾಂಬ್ ಬ್ಲಾಸ್ಟ್ ಆಯ್ತು. ಅದೇನಪ್ಪಾ ಅಂದ್ರೆ....

ವಿವಾದದ ಕೇಂದ್ರಬಿಂದು 'ಮೆಜೆಸ್ಟಿಕ್'

''ನನಗೆ 'ಮೆಜೆಸ್ಟಿಕ್' ಸಿಗಲು ಕಾರಣ ರಾಮಮೂರ್ತಿ, ಪಿ.ಎನ್.ಸತ್ಯ ಹಾಗೂ ರಮೇಶ್'' ಎಂದು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸುದೀಪ್ ನೀಡಿರುವ ಸಂದರ್ಶನದ ವಿಡಿಯೋ ಲಿಂಕ್ ಸಮೇತ ದರ್ಶನ್ ತಮ್ಮ ಆಕ್ರೋಶಕ್ಕೆ ಕಾರಣವಾದ ಅಂಶವನ್ನು ಬಹಿರಂಗ ಪಡಿಸಿದರು.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

ಸುದೀಪ್ ಗೆ ದರ್ಶನ್ ಬಹಿರಂಗ ಸವಾಲು

ಸುದೀಪ್ ನೀಡಿರುವ ಸಂದರ್ಶನವನ್ನು ಉಲ್ಲೇಖಿಸಿ, ''ಈ ವಿಡಿಯೋದಲ್ಲಿ ಹೇಳಿರುವ ಪ್ರಕಾರ ಅವಕಾಶ ಸಿಗಲು ಸುದೀಪ್ ತಾವೇ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಮಾಡದಿರುವ ಕೆಲಸವನ್ನು ಮಾಡಿದ್ದೀನಿ ಎಂದು ಹೇಳುವುದು ಎಷ್ಟು ಸರಿ?'' ಎಂದು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ಅಸಮಾಧಾನವನ್ನು ದರ್ಶನ್ ಹೊರಹಾಕಿದರು. [ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!]

ಮನಸ್ಸಿಗೆ ನೋವಾಗಿದ್ದು ನಿಜ

''ಇದೇ ಮೊದಲ ಬಾರಿಗೆ ಈ ವಿಡಿಯೋ ನೋಡಿದಾಗ ನನ್ನ ಮನಸ್ಸಿಗೆ ನೋವಾದಂತೂ ನಿಜ. ಈ ಹೇಳಿಕೆ ನೀಡಿದ್ದೇಕೆ!? ಸುದೀಪ್ ರವರು ಕ್ಲಾರಿಟಿ ನೀಡಲಿ'' ಅಂತ ದರ್ಶನ್ ಆಗ್ರಹಿಸಿದ್ದಾರೆ.

ಹ್ಯಾಕ್ ಆಗಿದ್ಯಾ.?

ಸರಣಿ ಟ್ವೀಟ್ ಹಾಗೂ ಫೇಸ್ ಬುಕ್ ಪೋಸ್ಟ್ ಗಳನ್ನು ನೋಡಿ, ದರ್ಶನ್ ರವರ ಫೇಸ್ ಬುಕ್ ಮತ್ತು ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿರಬಹುದಾ ಅಂತ ಅನುಮಾನ ಪಡುತ್ತಿದ್ದವರಿಗೂ 'ದಾಸ' ಸ್ಪಷ್ಟನೆ ನೀಡಿದ್ದಾರೆ.

ಎಲ್ಲವೂ ನಾನು ಹೇಳಿದ ಮಾತುಗಳೇ.!

''ಕೆಲ ಚಾನೆಲ್ಸ್ ಹೇಳುವಂತೆ ಯಾರೇನು ಹ್ಯಾಕ್ ಮಾಡಿಲ್ಲ. ಇದು ನನ್ನ ಖಾತೆ, ಎಲ್ಲವೂ ನಾನು ಹೇಳಿದ ಮಾತುಗಳೇ. ನನ್ನ ಗಮನಕ್ಕೆ ಬಂದ ಸಂಗತಿಗಳನ್ನು ತುಂಬಾ ಆಲೋಚಿಸಿಯೇ ನಾನು ಹೇಳಲು ಬಯಸುವ ವೇದಿಕೆ'' - ನಿಮ್ಮ ದಾಸ ದರ್ಶನ್.

English summary
Kannada Actor Challenging Star Darshan has taken his twitter and facebook account to express his displeasure towards Kiccha Sudeep. The 5 Posts/Tweets of Darshan against Sudeep are here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada