»   » 50ರ ನಂತರ ಬದಲಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

50ರ ನಂತರ ಬದಲಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿರುವ ನಾಯಕ. ಚಿತ್ರದ ಶೂಟಿಂಗ್ ಕೊನೆಯ ಹಂತ ತಲುಪುತ್ತಿರುವ ಸಮಯದಲ್ಲಿ ದರ್ಶನ್ ಕುರುಕ್ಷೇತ್ರದ ನಂತರ ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ಪ್ರಶ್ನೆಗಳು ಹುಟ್ಟುಕೊಂಡಿತ್ತು.

ಕನ್ನಡದ ಸಾಕಷ್ಟು ನಿರ್ಮಾಪಕರ ಬಳಿ ದರ್ಶನ್ ಡೇಟ್ಸ್ ಗಳಿದ್ದು ಯಾವ ಚಿತ್ರದಲ್ಲಿ ಬ್ಯುಸಿ ಆಗುತ್ತಾರೆ ಅನ್ನೋದು ಮಾತ್ರ ಕುತೂಹಲ ಮೂಡಿಸಿತ್ತು. ಅಭಿಮಾನಿಗಳ ಪ್ರಶ್ನೆಗೆ ನಿರ್ಮಾಪಕಿ ಶೈಲಾಜ್ ನಾಗ್ ಉತ್ತರಿಸಿದ್ದು ದರ್ಶನ್ ಅಭಿನದ 51 ನೇ ಚಿತ್ರವನ್ನ ನಮ್ಮ ಸಂಸ್ಥೆಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದ್ದರು.

ಅಪರೂಪದ ಅಭಿಮಾನಿಯನ್ನ ಭೇಟಿ ಮಾಡಿದ ಚಾಲೆಂಜಿಂಗ್ ಸ್ಟಾರ್

'ವಿಷ್ಣುವರ್ಧನ' ಹಾಗೂ 'ಜೈಲಲಿತ' ಸಿನಿಮಾವನ್ನ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಪಿ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಸಿನಿಮಾ ಮಹೂರ್ತ ದಿನಾಂಕ ಫಿಕ್ಸ್ ಆಗಿದೆಯಂತೆ. ಅದಷ್ಟೆ ಅಲ್ಲದೆ ದರ್ಶನ್ ಅಭಿಮಾನಿಗಳಿಗೆ ಈ ಚಿತ್ರದ ಮೂಲಕ ಬಿಗ್ ಸಪ್ರೈಸ್ ಇದ್ಯಂತೆ. ಜೊತೆಗೆ 50ನೇ ಸಿನಿಮಾದ ನಂತರ ದರ್ಶನ್ ಬದಲಾಗಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ. ಹಾಗಾದ್ರೆ ಮಹೂರ್ತ ಯಾವಾಗ? ಏನದು ಬಿಗ್ ಸರ್ಪೈಸ್? ಮಾಹಿತಿ ಇಲ್ಲಿದೆ ಮುಂದೆ ಓದಿ.

ಸೆಟ್ಟೇರಲಿದೆ ದರ್ಶನ್ ಸಿನಿಮಾ

ಐತಿಹಾಸಿಕ ಕಥಾಹಂದರ ಹೊಂದಿರುವ ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಲು ದಿನಗಣನೆ ಪ್ರಾರಂಭವಾಗಿದೆ. ಈ ಸಿನಿಮಾದ ನಂತರ ದರ್ಶನ್ ಅಭಿನಯದ ಕಮರ್ಷಿಯಲ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ದರ್ಶನ್ ಅಭಿನಯದ 52 ಚಿತ್ರದ ಮಹೂರ್ತ ನಡೆಯಲಿದೆ ಎಂದು ಮೂಲಕಗಳು ತಿಳಿಸಿವೆ.

ವಿಭಿನ್ನ ಗೆಟಪ್ ನಲ್ಲಿ ಚಾಲೆಂಜಿಂಗ್ ಸ್ಟಾರ್

ಕನ್ನಡ ಸಿನಿಮಾರಂಗದಲ್ಲಿ 50 ಚಿತ್ರಗಳಲ್ಲಿ ಅಭಿನಯಿಸಿರುವ ದರ್ಶನ್ ಮುಂದಿನ ಚಿತ್ರದಲ್ಲಿ ಕೆಲವು ಬದಲಾವಣೆಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರಂತೆ. 51ನೇ ಚಿತ್ರದಲ್ಲಿ ಡಿ ಬಾಸ್ ಲುಕ್ ಕಂಪ್ಲೀಟ್ ಆಗಿ ಬದಲಾಗಲಿದೆಯಂತೆ.

ಶೀಘ್ರದಲ್ಲೇ ಶುರುವಾಗಲಿದೆ ಚಿತ್ರೀಕರಣ

ನಿರ್ಮಾಪಕ ಮುನಿರತ್ನ ಹೇಳಿರುವ ಪ್ರಕಾರ ಇನ್ನೆರೆಡು ದಿನಗಳಲ್ಲಿ ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಸಂಕ್ರಾಂತಿ ಹಬ್ಬಕ್ಕೆ ಹೊಸ ಚಿತ್ರ ಸೆಟ್ಟೇರಿದರೆ ದರ್ಶನ್ ತಮ್ಮ ಹಳೆ ಲುಕ್ ಗೆ ಬರಲು ಕೆಲವು ದಿನಗಳು ಬೇಕಾಗುತ್ತೆ. ಚಿತ್ರಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡು ಆದಷ್ಟು ಬೇಗ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.

ಮಾರ್ಚ್ ನಲ್ಲಿ ಕುರುಕ್ಷೇತ್ರ ತೆರೆಗೆ

ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಮಾರ್ಚ್ ಮೊದಲ ವಾರದಲ್ಲಿ ತೆರೆಗೆ ಬರ್ತಿದೆ. ಚಿತ್ರದಲ್ಲಿ ಅದ್ದೂರಿ ತಾರಾಬಳಗವಿದ್ದು ಕನ್ನಡದ ಬಹುತೇಕ ನಟರು ಸಿನಿಮಾದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಚಿತ್ರದ ವಿಶೇಷ.

English summary
Kannada actor challenging star Darshan's 52nd film mahurtha will be held on 'Sankranti' festival. Vishnuvardhana and jayalalitha movie fame director P Kumar is directing the movie. Shailaja Nag is producing cinema.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X